Savings account: ಬ್ಯಾಂಕ್ ಅಕೌಂಟ್ ನಲ್ಲಿ ಅಕ್ಟೋಬರ್ 15ರಿಂದಲೇ ಹೊಸ ನಿಯಮ ಜಾರಿ!

Savings account: ಯಾರೆಲ್ಲ ಬ್ಯಾಂಕ್ ಖಾತೆ ಹೊಂದಿದ್ದಾರೆ ಅಂತಹವರಿಗೆ ಅಕ್ಟೋಬರ್ 15ರಿಂದಲೇ ಹೊಸ ನಿಯಮ ಜಾರಿ ಆಗಲಿದೆ. ಹೌದು, ಭಾರತೀಯ ರಿಸರ್ವ್ ಬ್ಯಾಂಕ್ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬಾಕಿ ಮೊತ್ತದ ಬಗ್ಗೆ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಈ ನಿಯಮಗಳು ಅಕ್ಟೋಬರ್ 15 ರಿಂದ ಜಾರಿಗೆ ಬರಲಿದ್ದು, ಗ್ರಾಹಕರು ತಮ್ಮ ಖಾತೆಗಳಲ್ಲಿ ಕನಿಷ್ಠ ಮೊತ್ತವನ್ನು ನಿರ್ವಹಿಸುವ ಬಗ್ಗೆ ತಿಳಿಸಲಿದೆ .

 

ಹೌದು, ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಎಷ್ಟು ಮೊತ್ತ ಇರಿಸಬೇಕು ಎಂಬುದರ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಹೊಸ ನಿಯಮ ಜಾರಿಗೆ ತರಲಿದೆ. ಈ ನಿಯಮ ಇದೇ ತಿಂಗಳು ಅಕ್ಟೋಬರ್ 15ರಿಂದ ಜಾರಿಗೆ ಬರಲಿದೆ.

ಒಂದು ವೇಳೆ ಬ್ಯಾಂಕ್‌ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಮೇಂಟೈನ್ (Minimum Balance Maintain) ಮಾಡದಿದ್ದರೆ ಗ್ರಾಹಕರಿಗೆ ದಂಡ ವಿಧಿಸಲಾಗುತ್ತದೆ. ಬಹುದಿನಗಳ ಬಳಿಕ ಖಾತೆಗೆ ಹಣ ಜಮೆ ಆದ್ರೆ ಮಿನಿಮಮ್ ಬ್ಯಾಲೆನ್ಸ್ ನಿರ್ವಹಣೆ ಮಾಡದ್ದಕ್ಕೆ ದಂಡ ಕಡಿತಗೊಳಿಸಲಾಗುತ್ತದೆ.

ಮುಖ್ಯವಾಗಿ ಕನಿಷ್ಠ ಮೊತ್ತ ನಿರ್ವಹಣೆ ಮಾಡದ್ದಕ್ಕೆ 300 ರಿಂದ 600 ರೂಪಾಯಿವರೆಗೆ ದಂಡ ವಸೂಲಿ ಮಾಡಲಾಗುತ್ತದೆ. ದಂಡದ ಪ್ರಮಾಣ ಬ್ಯಾಂಕುಗಳಿಂದ ಬ್ಯಾಂಕಿಗೆ ಬೇರೆ ಬೇರೆಯಾಗಿರುತ್ತದೆ.

ಈ ಮೂಲಕ ಬ್ಯಾಂಕುಗಳು ಮಿನಿಮಿಮ್ ಬ್ಯಾಲೆನ್ಸ್ ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನು ತಮ್ಮ ಬಳಿಯಲ್ಲಿ ಉಳಿಸಿಕೊಳ್ಳುತ್ತವೆ.

Leave A Reply

Your email address will not be published.