Iran – Israel: ಇರಾನ್’ನಿಂದ ಇಸ್ರೇಲ್ ಮೇಲೆ ಭೀಕರ ಕ್ಷಿಪಣಿ ದಾಳಿ: ಅಪಾಯದ ಅಂಚಿನಲ್ಲಿ ಇಸ್ರೇಲ್ ನಾಗರಿಕರು!

ran – Israel: ಇರಾನ್’ನಿಂದ ಇಸ್ರೇಲ್ (Iran – Israel) ಮೇಲೆ ಭೀಕರ ಕ್ಷಿಪಣಿ ದಾಳಿಯಾಗಿದ್ದು, ಇದೀಗ ಇಸ್ರೇಲ್ ನಾಗರಿಕರು ಅಪಾಯದ ಅಂಚಿನಲ್ಲಿದ್ದಾರೆ.

ಹೌದು, ಈಗಾಗಲೇ ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಹಾರಿಸಿದೆ ಮತ್ತು ದೇಶದ ಎಲ್ಲಾ ನಾಗರಿಕರು ಬಾಂಬ್ ಶೆಲ್ಟರ್‌ಗಳಲ್ಲಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ಅಕ್ಟೊಬರ್ 1ರಂದು ತಿಳಿಸಿದೆ. 

ಯುದ್ದದ (War) ಭೀತಿ ಜೋರಾಗಿದ್ದು, ಸದ್ಯ ಇಸ್ರೇಲ್ ಮೇಲೆ ಇರಾನ್ ಭೀಕರ ದಾಳಿ ನಡೆಸಿದೆ. ಇಸ್ರೇಲ್ ಮೇಲೆ 100ಕ್ಕೂ ಅಧಿಕ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು (Missile attack) ಇರಾನ್ ಉಡಾಯಿಸಿದೆ. ಈ ಹಿನ್ನೆಲೆಯಲ್ಲಿ ಇಸ್ರೆಲ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ಸುರಕ್ಷಿತವಾಗಿರುವಂತೆ ಭಾರತ ಸರ್ಕಾರ ಸಂದೇಶ ರವಾನಿಸಿದೆ.

ಹಮಾಸ್ ನಾಯಕನ ಹತ್ಯೆಗೆ ಪ್ರತಿಕಾರವಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸುವ ನಿರ್ಧಾರವನ್ನು ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ (SNSC) ಮಾಡಿದೆ ಅಂತ ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.

ಅಲ್ಲದೆ ಇಸ್ರೇಲ್ ರಕ್ಷಣಾ ಪಡೆಗಳು (IDF) ಸಹ ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಕನ್ಫರ್ಮ್ ಮಾಡಿವೆ. ಇರಾನ್‌ನಿಂದ ರಾಕೆಟ್‌ಗಳನ್ನು ಇಸ್ರೇಲ್‌ಗೆ ಹಾರಿಸುವುದರಿಂದ ಎಲ್ಲಾ ಇಸ್ರೇಲಿ ನಾಗರಿಕರು ಬಾಂಬ್ ಬಂಕರ್‌ಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave A Reply

Your email address will not be published.