Crocodiles: ಪ್ರೀತಿಯಿಂದ ಸಾಕಿದ 150ಕ್ಕೂ ಹೆಚ್ಚು ಮೊಸಳೆಯನ್ನು ತನ್ನ ಕೈಯಾರೆ ಕೊಂದ ಯಜಮಾನ! ಕಾರಣ ಕೇಳಿದ್ರೆ ನೀವೂ ಮರುಗುತ್ತೀರಾ!

Crocodiles: ಪ್ರೀತಿಯಿಂದ ಸಾಕಿದ ಯಾವುದೇ ಜೀವಿಯನ್ನು ಕೊಲ್ಲಲು ಯಜಮಾನನಿಗೆ ಹೇಗೆ ತಾನೇ ಮನಸು ಬಂದೀತು. ಆದ್ರೆ ​ಥಾಯ್ಲೆಂಡ್ ದೇಶದಲ್ಲಿ ರೈತನೊಬ್ಬ ತಾನು ಪ್ರೀತಿಯಿಂದ ಸಾಕಿದ ಸುಮಾರು 150 ಕ್ಕೂ ಹೆಚ್ಚು ಮೊಸಳೆ ( Crocodiles ) ಗಳನ್ನು ತನ್ನ ಕೈಯಾರೆ ಸಾಯಿಸಿದ್ದಾನೆ. ಇದಕ್ಕೆ ಕಾರಣ ಆದ್ರು ಏನು ಅನ್ನೋದು ತಿಳಿಯೋಣ ಬನ್ನಿ.

ಮಾಹಿತಿ ಪ್ರಕಾರ, ಥಾಯ್ಲೆಂಡ್​ನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆಲ ಪ್ರದೇಶಗಳು ಮುಳುಗಡೆಯಾಗಿದ್ದು, ಪ್ರಕೃತಿ ಸ್ಥಿತಿ ಗತಿ ಹದಗೆಟ್ಟಿತ್ತು, ಅಂತೆಯೇ ಲಂಫೂನ್‌ನಲ್ಲಿನಲ್ಲಿರುವ ಮೊಸಳೆಗಳಿರುವ ಆವರಣಗಳೂ ಬಿರುಕು ಬಿಟ್ಟಿದ್ದವು. ಒಂದು ವೇಳೆ ಇಲ್ಲಿನ ತಡೆಗೋಡೆ ಕುಸಿದರೆ ಮೊಸಳೆಗಳು ಊರು ಸೇರಿ ಜನರ ಮೇಲೆ ದಾಳಿ ಮಾಡುವ ಮತ್ತು ಇತರ ಪ್ರಾಣಿಗಳನ್ನು ಕೊಲ್ಲುವ ಶಂಕೆ ಇದ್ದ ಕಾರಣ, ಇದನ್ನು ಮನಗಂಡ ಸರ್ಕಾರ ಮೊಸಳೆಗಳನ್ನು ಕೊಲ್ಲಲು ಆದೇಶಿಸಿತು. ಹೀಗೆ ಸರ್ಕಾರದ ಆದೇಶಕ್ಕೆ ತಲೆಬಾಗಿ, ತನ್ನ ಇಚ್ಛೆಗೆ ವಿರುದ್ಧವಾಗಿ ತಾನು ಪ್ರೀತಿಸಿದ ಮೊಸಳೆಗಳನ್ನು ಯಜಮಾನ ಕೊಂದು ಹಾಕಿದ್ದಾನೆ.

ಹೌದು, ಈ ಬಗ್ಗೆ ಲಂಫೂನ್‌ನಲ್ಲಿನ ಮೊಸಳೆ ಸಾಕಣೆಯ ಮಾಲೀಕ ನತ್ತಪಾಕ್ ಖುಮ್ಕಾಡ್ ತನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಕೂಡ ಹಾಕಿದ್ದು, ಅದರಲ್ಲಿ ಮೊಸಳೆಗಳ ಕೊಳದ ಬಳಿ ಇರುವ ತಡೆಗೋಡೆಗಳು ಎಷ್ಟರಮಟ್ಟಿಗೆ ಹಾನಿಗೆ ಒಳಗಾಗಿವೆ ಎಂಬುದು ಕಾಣುತ್ತೆ. ಅದಲ್ಲದೆ ಸತತ ಮಳೆಯಾಗುತ್ತಿರುವುದರಿಂದ ಮೊಸಳೆಗಳ ಕೊಳವನ್ನು ದುರಸ್ತಿ ಮಾಡುವುದು ತುಂಬಾ ಅಪಾಯಕಾರಿ, ಹಾಗಾಗಿ ಮೊಸಳೆಗಳನ್ನು ಕೊಲ್ಲದೆ ನನಗೆ ಬೇರೆ ದಾರಿಯಿಲ್ಲ, ಇದು ತುಂಬಾ ಕಷ್ಟಕರವಾದ ನಿರ್ಧಾರವಾಗಿದೆ. ಮತ್ತು ಇದು ಸರಿಯಾದ ನಿರ್ಧಾರ ಎಂದು ತಿಳಿಸಿದ್ದಾರೆ.

ಇನ್ನು ಸಾಯಿಸಿದ ಮೊಸಳೆಗಳನ್ನು ಹಿಟಾಚಿ ನೆರವಿನಿಂದ ಬೇರೆಡೆ ಸಾಗಿಸುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ. ವಿಶೇಷ ಅಂದ್ರೆ ಕೊಲ್ಲಲ್ಪಟ್ಟ ಸಯಾಮಿ ಮೊಸಳೆಗಳು ತೀವ್ರವಾಗಿ ಅಳಿವಿನಂಚಿನಲ್ಲಿವೆ ಇನ್ನು ಈ ಮೊಸಳೆಗಳನ್ನು ಥಾಯ್ಲೆಂಡ್‌ನಲ್ಲಿ ವ್ಯಾಪಕವಾಗಿ ಮಾರಾಟ ಮಾಡಲಾಗುತ್ತದೆ ಮತ್ತು ಬೆಳೆಸಲಾಗುತ್ತದೆ. ಮುಖ್ಯವಾಗಿ ಮೊಸಳೆ ಸಾಕಣೆಯು ಅಲ್ಲಿ ಲಾಭದಾಯಕ ಉದ್ಯಮವಾಗಿದೆ ಎನ್ನಲಾಗಿದೆ.

1 Comment
  1. situs toto says

    selamat datang di togel online terbaik, https://megakemayoran.com/produk/ resmi dan terpercaya

Leave A Reply

Your email address will not be published.