Pm kisan installation: ಪಿಎಮ್ ಕಿಸಾನ್ ಸಮ್ಮಾನ್ 18ನೇ ಕಂತು ಬಿಡುಗಡೆ: ಇಲ್ಲಿದೆ ಚೆಕ್ ಮಾಡುವ ವಿಧಾನ!

Pm kisan installation: ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ನಿಧಿ(pm kisan installation) ಯೋಜನೆಯ 18ನೇ ಕಂತನ್ನು ಇದೇ ತಿಂಗಳು ಅಕ್ಟೋಬರ್ 5 ರಂದು ಬಿಡುಗಡೆ ಮಾಡಲು ದಿನಾಂಕ ನಿಗದಿ ಮಾಡಲಾಗಿದ್ದು, ಈ ಸೌಲಭ್ಯ ಪಡೆಯಲು ಎಲ್ಲಾ ರೈತರು ತಪ್ಪದೇ ಇಕೆವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಈ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಇಲ್ಲಿವರೆಗೂ ರೂ.2000 ರಂತೆ ಒಟ್ಟು 17 ಕಂತುಗಳು ಬಿಡುಗಡೆ ಮಾಡಲಾಗಿದೆ. ಇದೀಗ ಅಕ್ಟೋಬರ್ 5 ರಂದು 18 ನೇ ಕಂತು ಬಿಡುಗಡೆ ಮಾಡುವುದಾಗಿ ಕೇಂದ್ರ ಸರಕಾರದಿಂದ ತಿಳಿಸಲಾಗಿದೆ. ಆದ್ರೆ ಒಂದು ವೇಳೆ ಇಕೆವೈಸಿ ಮಾಡದೇ ಇದ್ದಲ್ಲಿ 18ನೇ ಕಂತು ಜಮೆಯಾಗುವುದಿಲ್ಲ.

Ekyc checking-ಇಕೆವೈಸಿ ಆಗಿದೆಯೇ ಇಲ್ಲವೇ ಎಂದು ಈ ಕೆಳಗಿನಂತೆ ಚೆಕ್ ಮಾಡಿ:

ಮೊದಲಿಗೆ ಇಲ್ಲಿ ನೀಡಲಾದ PM kisan.gov.in ಮೇಲೆ ಕ್ಲಿಕ್ ಮಾಡಿದಾಗ ಕೇಂದ್ರ ಸರಕಾರದ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಳ್ಳುತ್ತದೆ.

1: ಪಿಎಂ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರೆದುಕೊಂಡ ಮೇಲೆ Farmers Corner ನಲ್ಲಿ ಹಲವಾರು ಅಂಕಣಗಳಿವೆ E-kyc ಅಂಕಣ,New farmer registration ಅಂಕಣ, Know your status ಅಂಕಣ, Beneficiary list ಅಂಕಣ, Name correction as per Aadhar ಅಂಕಣ ಹೀಗೆ ಹಲವಾರು ಅಂಕಣಗಳಿವೆ.

2: ಈ ಎಲ್ಲಾ ಅಂಕಣಗಳಲ್ಲಿ ನೀವು E-kyc ಅಂಕಣ ಮೇಲೆ ಕ್ಲಿಕ್ ಮಾಡಬೇಕು.

3: ನಂತರ E-kyc ಅಂಕಣ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಆಧಾರ‍ ನಂಬರ್ ಹಾಕಿ E-kyc ಆಗಿದೆಯೇ ಇಲ್ಲವೇ ಎಂದು ತಿಳಿದು ಕೊಳ್ಳಬಹುದು.

ಒಂದು ವೇಳೆ ekyc ಆಗದೇ ಇದ್ದಲ್ಲಿಹತ್ತಿರದ ಕೃಷಿ ಇಲಾಖೆ, ಗ್ರಾಮ ಒನ್ ಮತ್ತು ಸೇವಾ ಸಿಂಧು ಸೈಬರ್ ಗಳಿಗೆ ಭೇಟಿ ಮಾಡಿ Ekyc ಮಾಡಿಸಿಕೊಳ್ಳಿ.

ಕಿಸಾನ್ ಸಮ್ಮಾನ್ ಯೋಜನೆಯ ಹಣ ಬಂದಿದೆಯೇ ಎಂದು ಚೆಕ್ ಮಾಡುವ ವಿಧಾನ :

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in/ ಗೆ ಭೇಟಿ ನಿಡಿ ಫಾರ್ಮರ್ ಕಾರ್ನರ್ (Farmer Corner) ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ನಂತರ ಫಲಾನುಭವಿ ಪಟ್ಟಿ (Benificiary List) ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಬಳಿಕ ತೆರೆದುಕೊಳ್ಳುವ ಪುಟದಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಗ್ರಾಮವನ್ನು ಆಯ್ಕೆ ಮಾಡಿದ ಬಳಿಕ Get Report ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಗ್ರಾಮದ ಫಲಾನುಭವಿಗಳ ಪಟ್ಟಿ ಸಿಗುತ್ತದೆ. ನಿಮ್ಮ ಗ್ರಾಮದ ಫಲಾನುಭವಿಗಳ ಪಟ್ಟಿ ಸಿಗುತ್ತದೆ, ನಿಮ್ಮ ಹೆಸರು ಇದೆಯಾ ಎಂದು ಪರಿಶೀಲನೆ ಮಾಡಬಹುದು. ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ, ನಿಮ್ಮ ಖಾತೆಗೆ ಹಣವೂ ಬರುತ್ತದೆ.

Leave A Reply

Your email address will not be published.