Petrol Storage: ಸೌಧಿ ಅರೆಬಿಯಾದಂತ ಅರಬ್ ದೇಶಗಳಲ್ಲೇ ಪೆಟ್ರೋಲ್ ನಿಕ್ಷೇಪ ಹೆಚ್ಚಾಗಿ ಸಿಗೋದ್ಯಾಕೆ?

Share the Article

Petrol Storage: ಇಂದು ಮನುಷ್ಯನ ದಿನನಿತ್ಯ ಅಗತ್ಯ ವಸ್ತುಗಳ ಪೈಕಿ ಇಂಧನಗಳು ಪ್ರಮುಖ ಸ್ಥಾನ ಪಡೆದಿವೆ. ಹೌದು, ಪೆಟ್ರೋಲ್, ಡೀಸೆಲ್ ಇಲ್ಲದೆ ಮನುಷ್ಯನ ದಿನವೇ ಆರಂಭವಾಗದು ಎಂಬ ಹಂತಕ್ಕೆ ನಾವು ತಲುಪಿದ್ದೇವೆ. ಅದಕ್ಕೆ ಎಷ್ಟೇ ಕಾಸ್ಟ್ಲಿ ಆದರೂ ನಾವು ಕೊಂಡು, ವಾಹನಗಳಿಗೆ ಹಾಕಿ ಓಡಾಡುತ್ತೇವೆ. ಆದರೆ ಈ ತೈಲ ಅಥವಾ ಪೆಟ್ರೋಲ್ ನಿಕ್ಷೇಪಗಳು( Petrol Storage) ಸೌಧಿ ಅರೆಬಿಯಾದಂತ(Saudi Arabia) ಮರುಭೂಮಿಯ ದೇಶಗಳಲ್ಲೇ ಯಾಕೆ ಹೆಚ್ಚಾಗಿ ಸಿಗುತ್ತೆ? ನಮ್ಮಲ್ಲಿ ಯಾಕಿಲ್ಲ ಎಂದು ಎಂದಾದರೂ ಯೋಚಿಸಿದ್ದೀರಾ? ಹಾಗಿದ್ರೆ ತಿಳಿಯೋಣ ಬನ್ನಿ.

ಇಂದು ಯಾವೆಲ್ಲಾ ಮರುಭೂಮಿಗಳಲ್ಲಿ ಪೆಟ್ರೋಲ್ ಉತ್ಪನ್ನಗಳು ಸಿಗುತ್ತಿವೆಯೋ ಅವೆಲ್ಲವೂ ಲಕ್ಷಾಂತರ ವರ್ಷಗಳ ಹಿಂದೆ ಸಮುದ್ರ ಆಗಿದ್ದವು. ಅಲ್ಲಿ ಕೋಟ್ಯಾಂತರ ಜಲಚರಗಳು ವಾಸಿಸುತ್ತಿದ್ದವು. ಆದರೆ ಕಾಲಾಂತರದಲ್ಲಿ ವಾತಾವರಣದಿಂದಾದ ಬದಲಾವಣೆಗಳಿಂದ, ಭೂಮಿಯು ವಿಕಸನ ಹೊಂದುತ್ತಾ ಹೋದಂತೆ ಆ ಸಮುದ್ರವೆಲ್ಲಾ ಬತ್ತಿಹೋಗುತ್ತದೆ. ಬತ್ತಿ ಮರುಭೂಮಿಯಾಗಿ ಪರಿವರ್ತನೆಯಾಗುತ್ತವೆ.

ಹೀಗೆ ಸಮುದ್ರ ಬತ್ತಿದಾಗ ಆ ಸಮುದ್ರದಲ್ಲಿದ್ದ ಜಲಚರಗಳು ಸತ್ತು ಭೂಮಿಯ ಅಡಿ ಸೇರುತ್ತದೆ. ಹೀಗೆ ಭೂಮಿ ಅಡಿ ಹೇರಿದ ಕೋಟ್ಯಾನುಕೋಟಿ ಜೀವಗಳ ದೇಹಗಳು ಕ್ರೂಡ್ ಆಯಿಲ್ ನಿಕ್ಷೇಪಗಳಾಗಿ ಬದಲಾಗುತ್ತವೆ. ಈ ಕಾರಣದಿಂದ ಇಂದಿಗೂ ಅರಬ್ ದೇಶಗಳಲ್ಲಿ ಹೆಚ್ಚು ಹೆಚ್ಚು ಪೆಟ್ರೋಲ್ ನಿಕ್ಷೇಪಗಳು ನೀರಿನ ಜಲದಂತೆ ದೊರೆಯುತ್ತವೆ.

Leave A Reply