Jaggi Vasudev: ತಮ್ಮ ಮಗಳಿಗೆ ಮದುವೆ ಮಾಡಿ ಬೇರೆಯವರ ಮಕ್ಕಳಿಗೆ ಸನ್ಯಾಸತ್ವಕ್ಕೆ ಪ್ರೋತ್ಸಾಹ – ಜಗ್ಗಿ ವಾಸುದೇವ್ ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ಹೈಕೋರ್ಟ್ !!
Jaggi Vasudev: ತಲೆಯ ಮೇಲೊಂದು ಜುಟ್ಟು, ಮೈಮೇಲೊಂದು ಶಾಲು, ಆಗಾಗ ಮಾರ್ಡನ್ ಅವತಾರ ಧರಿಸಿ, ಕೂಲಿಂಗ್ ಗ್ಲಾಸ್, ಚಡ್ಡಿಗಳನ್ನು ಹಾಕಿ, ಉದ್ದುದ್ದ ಭಾಷಣ ಬಿಗಿದು, ವೇದಿಕೆ ಸಿಕ್ಕಾಗ ಹಾರಿ ಹಾರಿ ಕುಣಿದು ಭಕ್ತರನ್ನು ರಂಜಿಸುವ ಜಗ್ಗಿ ವಾಸುದೇವ್(Jaggi Vasudev) ಅವರಿಗೆ ಹೈಕೋರ್ಟ್ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದೆ.
ವಿಶ್ವಾದ್ಯಂತ ಲಕ್ಷಾಂತರ ಅನುಯಾಯಿಗಳಿದ್ದಾರೆ. ಸದ್ಗುರು ಅವರ ಆಶ್ರಮದಲ್ಲೂ ನೂರಾರು ಮಂದಿ ನೆಲೆಸಿದ್ದಾರೆ. ಆದ್ರೆ ಆಗಾಗ ಅವರ ವಿರುದ್ಧ ಹಲವು ರೀತಿಯ ವಿವಾದಗಳು, ಪ್ರಕರಣಗಳು ದಾಖಲಾಗುತ್ತಲೇ ಇರುತ್ತದೆ. ಇತ್ತೀಚಿಗೆ ಅವರ ವಿರುದ್ಧ ಕೇಳಿಬರುತ್ತಿದ್ದ ಪ್ರಕರಣವೊಂದು ಈಗ ಮತ್ತೆ ಸುದ್ದಿಯಾಗುತ್ತಿದೆ. ಅಂತೆಯೇ ಇದೀಗ ಜಗ್ಗಿ ಅವರು ತಮ್ಮ ಮಗಳಿಗೆ ಮದವೆ ಮಾಡಿ ಉಳಿದವರ ಹೆಣ್ಣು ಮಕ್ಕಳಿಗೆ ಸನ್ಯಾಸತ್ವಾ ತಗೊಳ್ಳಲು ಬಲವಂತ ಮಾಡುತ್ತಿರುವುದೇಕೆ ಎಂದು ಹೈಕೋರ್ಟ್ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದೆ.
ಇತ್ತೀಚೆಗೆ ತಮ್ಮ ಮಗಳ ಬ್ರೇನ್ ವಾಷ್ ಮಾಡಲಾಗಿದೆ ಎಂದು ಆರೋಪಿಸಿ ಕೊಯಮತ್ತೂರಿನ ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಎಸ್ ಕಾಮರಾಜ್ ಅವರು ತಮ್ಮ ಪುತ್ರಿಯರನ್ನು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಪೋಷಕರು ನೀಡಿದ್ದ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಸದ್ಗುರು ಅವರ ಮಗಳ ಕುರಿತಾಗಿ ಪ್ರಸ್ತಾಪಿಸಿ ಪ್ರಶ್ನೆ ಮಾಡಿದ್ದಾರೆ.
ಈ ಪ್ರಕರಣದ ವಿಚಾರಣೆ ವೇಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಶಿವಜ್ಞಾನಂ ಅವರು, ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಉದ್ದೇಶಿಸಿ ಪ್ರಶ್ನೆ ಕೇಳಿದರು. ಸದ್ಗುರು ಅವರು ನ್ಯಾಯಾಲಯದಲ್ಲಿ ಇರಲಿಲ್ಲವಾದರೂ ಅವರ ಕೌಟುಂಬಿಕ ವಿಚಾರದ ಕುರಿತಾಗಿ ಮಾತನಾಡಿದ ನ್ಯಾಯಮೂರ್ತಿಗಳು, ‘ತಮ್ಮ ಮಗಳಿಗೇ ಮದುವೆ ಮಾಡಿ, ಉತ್ತಮ ಬದುಕು ಕಟ್ಟಿ ಕೊಟ್ಟಿರುವ ವ್ಯಕ್ತಿ, ತಮ್ಮ ಆಶ್ರಮದಲ್ಲಿ ಇರುವ ಬೇರೆಯವರ ಮಕ್ಕಳಿಗೆ ಮಾತ್ರ ತಲೆ ಬೋಳಿಸಿಕೊಳ್ಳಲು ಹಾಗೂ ಪ್ರಾಪಂಚಿಕ ವಿಷಯಗಳಿಂದ ದೂರವಾಗಿ ಸನ್ಯಾಸಿಗಳ ರೀತಿ ಬದುಕಲು ಏಕೆ ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದು ಪ್ರಶ್ನೆ ಮಾಡಿದರು.
ಆದರೆ ಈ ವೇಳೆ ಸ್ಪಷ್ಟನೆ ನೀಡಿದ ಈಶಾ ಫೌಂಡೇಷನ್ ಪರ ವಕೀಲರು, ತಮ್ಮ ಆಶ್ರಮದಲ್ಲಿ ಇರುವ ಮಹಿಳೆಯರು ಸ್ವಯಂ ಪ್ರೇರಿತವಾಗಿ ಇಲ್ಲಿದ್ದಾರೆ. ಅವರೇ ಆಯ್ಕೆ ಮಾಡಿಕೊಂಡು ಆಶ್ರಮ ಸೇರಿದ್ದಾರೆ ಎಂದು ಹೇಳಿದರು.
ಅಂದಹಾಗೆ ಎಸ್. ಕಾಮರಾಜು ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬರ ವಯಸ್ಸು 42 ವರ್ಷ. ಮತ್ತೊಬ್ಬರಿಗೆ 39 ವರ್ ಪ್ರಾಯವಾಗಿದೆ. ಇಬ್ಬರೂ ಕೂಡಾ ನ್ಯಾಯಾಲಯದ ಆದೇಶದ ಅನ್ವಯ ಸೋಮವಾರ ಖುದ್ದು ಹಾಜರಾಗಿದ್ದರು. ಇಬ್ಬರೂ ಮಹಿಳೆಯರು ಈಶಾ ಫೌಂಡೇಷನ್ನಲ್ಲಿ ನೆಲೆಸಿದ್ದಾರೆ. ತಾವು ತಮ್ಮ ಸ್ವ ಇಚ್ಛೆಯಿಂದ ಈಶಾ ಫೌಂಡೇಷನ್ನಲ್ಲಿ ನೆಲೆಸಿರೋದಾಗಿ ಇಬ್ಬರೂ ಮಹಿಳೆಯರು ಹೇಳಿದ್ದು, ತಮ್ಮನ್ನು ಯಾರೂ ಬಂಧಿಸಿಲ್ಲ ಎಂದು ಹೇಳಿದರು.