ED FIR: ಕೇಂದ್ರದ ಇನ್ನೊಂದು ಅಸ್ತ್ರ: ಸಿದ್ದರಾಮಯ್ಯಗೆ ಮಾನಸಿಕ ಹಿಂಸೆ – ಗೃಹ ಸಚಿವ

ED FIR: ಮುಡಾ ಪ್ರಕರಣಕ್ಕೆ(MUDA Case) ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ(CM Siddaramaiah)ಅವರ ಮೇಲೆ ಇಡಿ(Enforcement Directorate) ಕೂಡ ಎಫ್ಐಆರ್(FIR) ದಾಖಲು ಮಾಡಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಜಿ ಪರಮೇಶ್ವರ್(G Marameshwar), ಕೇಂದ್ರ ಇದನ್ನೊಂದು ಅಸ್ತ್ರವಾಗಿ ಈಗ ಇಡಿಯನ್ನು ಉಪಯೋಗಿಸಿಕೊಳ್ತಿದೆ. ಬಿಜೆಪಿಯವರು(BJP) ಮುಡಾ ಪ್ರಕರಣದಲ್ಲಿ ರಾಜಕೀಯ ಮಾಡ್ತಿದ್ದಾರೆ ಅನ್ನೋದು ನಮ್ಮ ಆರೋಪ ಆಗಿತ್ತು. ಆದರೆ ಈಗ ಇದು ಪ್ರೂವ್ ಆಗಿದೆ ಎಂದರು.

ಮೋದಿಯವರೇ ಭಾಷಣದಲ್ಲಿ ಮುಡಾ ಪ್ರಕರಣದ ಬಗ್ಗೆ ಮಾತಾಡಿದ್ದಾರೆ. ಬಿಜೆಪಿಯು ದುರುದ್ದೇಶದಿಂದ ಇದನ್ನೆಲ್ಲ ಮಾಡ್ತಿದೆ. ಇಡಿಯಿಂದ ತನಿಖೆ ಮಾಡಿಕೊಳ್ಳಲಿ. ಇದಕ್ಕೆ ತನಿಖೆಗೆ ನಮ್ಮ ತಕರಾರು ಇಲ್ಲ. ಕಾನೂನಾತ್ಮಕವಾಗಿ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು.

ಕೇಂದ್ರದ ಏಜೆನ್ಸಿಗಳ ಮೂಲಕ ಸಿದ್ದರಾಮಯ್ಯಗೆ ಮಾನಸಿಕವಾಗಿ ತೊಂದರೆ ಮಾಡಬೇಕೆಂಬ ದುರುದ್ದೇಶ ಬಿಜೆಪಿಯವರದ್ದು. ದುರುದ್ದೇಶದಿಂದ ಸರ್ಕಾರ ಅಸ್ಥಿರ ಮಾಡಲು ಹೊರಟಿದ್ದಾರೆ. ಅವರ ಶ್ರೀಮತಿಯವರು ಸೈಟುಗಳನ್ನು ಯಾಕೆ ವಾಪಸ್ ಮಾಡ್ತಿದ್ದಾರೆ ಅಂತ ಅದರಲ್ಲೇ ಹೇಳಿದ್ದಾರೆ. ಏನ್ ಮಾಡಿದ್ರೂ ಬಿಜೆಪಿ ಟೀಕೆ ಮಾಡ್ತಿದೆ ಏನು ಮಾಡೋದು ಅಂದ್ರು.

ಕಾನೂನು ಹೋರಾಟಕ್ಕೂ ಟೀಕೆ, ಸೈಟು ವಾಪಸ್ ಕೊಟ್ರೂ ಟೀಕೆ. ಸಿಎಂಗೆ ನೈತಿಕತೆ ಪ್ರಶ್ನೆ ಬರೋದು ಆರೋಪದಲ್ಲಿ ಸತ್ಯ ಇದ್ದಾಗ. ಸತ್ಯ ಇಲ್ಲ ಅಂದ್ರೆ ನೈತಿಕತೆ ಪ್ರಶ್ನೆ ಬರಲ್ಲ. ಇಡಿ, ಸಿಬಿಐಗೆ ಹೆದರಿಕೊಂಡ್ರು ಅಂತ ಹೇಳಿಕೊಳ್ಳಲಿ ಬಿಜೆಪಿಯವರು ಬೇಕಾದರೆ. ಸಿಎಂ ಅವರು 62 ಕೋಟಿ ಕೊಡಿ ಅಂತ ಹೇಳಿದ್ರು ಅಷ್ಟೇ. ಆದರೆ ಪತ್ರ ಬರೆದಿರಲಿಲ್ಲ. ಸಿಎಂ ಅವರ ಶ್ರೀಮತಿಯವರು ಸೈಟುಗಳನ್ನು ವಾಪಸ್ ಮಾಡಲು ಪತ್ರ ಬರೆದಿದ್ದಾರೆ. ಇದು ಕಾನೂನಾತ್ಮಕವಾಗಿ ಮುಂದೇನು ಆಗುತ್ತೆ ಅಂತ ನೋಡಬೇಕು. ಇದರಲ್ಲೂ ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕ್ತಿದ್ದಾರೆ.

Leave A Reply

Your email address will not be published.