Sameer Acharya Family : ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ಮನೆಯಲ್ಲಿ ರಾದ್ಧಾಂತ – ತಂದೆ, ತಾಯಿ ಜೊತೆ ಸೇರಿ ಪತ್ನಿ ಮೇಲೆ ಹಲ್ಲೆ.. !!

Sameer Acharya Family: ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ(Sameer Acharya) ಹಾಗೂ ಶ್ರಾವಣಿ(Shravani) ಸಮೀರ್ ಆಚಾರ್ಯ ದಂಪತಿ ಕನ್ನಡ ಕಿರುತೆರೆಯಲ್ಲಷ್ಟೇ ಅಲ್ಲದೇ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಫೇಮಸ್‌. ಭಾರತದಾದ್ಯಂತ ಪ್ರವಾಸಿ ತಾಣಗಳಿಗೆ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಾ, ಎಲ್ಲೆಡೆ ಸುತ್ತು ಹಾಕುತ್ತಾ, ವಿಡಿಯೋಗಳನ್ನು ಮಾಡುತ್ತಾ, ಬ್ಲಾಗ್ ಮಾಡುತ್ತಾ, ಸಂಗೀತ, ಭಜನೆ ಹಾಡುತ್ತಾ ಜನರನ್ನು ರಂಜಿಸಿ ತಾವೂ ಸಂತೋಷವಾಗಿದ್ದ ಜೋಡಿ ಇದು. ಆದೀಗ ಈ ಜೋಡಿಗಳ ನಡುವೆ ಕಲಹವೇರ್ಪಟ್ಟಿದೆ.

 

ಹೌದು, ಪತ್ನಿ ಶ್ರಾವಣಿ ಸಮೀರ್ ಆಚಾರ್ಯ ಮೇಲೆ ಸಮೀರ್ ಆಚಾರ್ಯ ತಂದೆ-ತಾಯಿಯ ಜೊತೆಗೂಡಿ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ನೋಡಿದ ಜನ ಬಾಯಲ್ಲಿ ಭಗವದ್ಗೀತೆ, ತಿನ್ನೋದು ಮಾತ್ರ ಬದನೆಕಾಯಿ ಎಂದೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ.

ಅಷ್ಟಕ್ಕೂ ನಡೆದದ್ದೇನು?
ಇಂದು (ಸೆಪ್ಟೆಂಬರ್‌ 29) ಭಾನುವಾರ ಶ್ರಾವಣಿ ಸಮೀರ್ ಆಚಾರ್ಯ ಎಂದಿನಂತೆ ಮನೆಯಲ್ಲಿ ಕೆಲಸದಲ್ಲಿ ತೊಡಗಿದ್ದರಂತೆ. ಈ ವೇಳೆ ಮಗಳು ಜೋರಾಗಿ ಅಳುತ್ತಿದ್ದಳು ಇಂದರಿಂದ ಶ್ರಾವಣಿ ಸಮೀರ್ ಆಚಾರ್ಯ ಮಗಳಿಗೆ ಗದರಿದ್ದಾರೆ. ಇದನ್ನು ಕಂಡ ಸಮೀರ್ ಆಚಾರ್ಯ ತಂದೆ ತನ್ನ ಸೊಸೆ ಶ್ರಾವಣಿಗೆ ಬೈದಿದ್ದಾರೆ ಎನ್ನಲಾಗಿದೆ. ಇದೇ ವಿಷಯಕ್ಕೆ ಸಮೀರ್ ಆಚಾರ್ಯ ಅವರ ತಂದೆ ತಮ್ಮ ಸೊಸೆ ಶ್ರಾವಣಿಗೆ ನಿಂದಿಸಿದ್ದಾರೆ. ಈ ವಿಷಯ ಮಾತಿಗೆ ಮಾತು ಬೆಳೆದು ಕುಟುಂಬದಲ್ಲಿ ಕಲಹ ಪ್ರಾರಂಭವಾಗಿದೆ ಎಂದು ತಿಳಿದು ಬಂದಿದೆ.

ಸಮೀರ ಪತ್ನಿ ಶ್ರಾವಣಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಲೈವನಲ್ಲಿದ್ದ ವೇಳೆ ಸಮೀರ್ ಹಾಗೂ ಅವರ ತಂದೆ ತಾಯಿ ಸೇರಿಕೊಂಡು ಮನ ಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಶ್ರಾವಣಿ ಆರೋಪಿಸಿದ್ದಾರೆ. ಗಲಾಟೆ ವೇಳೆ ಶ್ರಾವಣಿ ಅವರಿಗೆ ಕೈ, ಮುಖಕ್ಕೆ ಗಾಯವಾದರೆ ಅವರ ಮಾವನ ತಲೆಗೆ ಏಟು ಬಿದ್ದಿದೆ. ಈ ಕುರಿತು ಸಮೀರ ಪತ್ನಿ ಶ್ರಾವಣಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಮತ್ತೊಂದೆಡೆ ಸಮೀರ್ ಆಚಾರ್ಯ ತಂದೆ, ಸೊಸೆ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

Leave A Reply

Your email address will not be published.