Ayushman card: 70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಯೋಜನೆಯಡಿ 5 ಲಕ್ಷ ರೂ. ಉಚಿತ ವಿಮೆ!

Ayushman card: ಕೇಂದ್ರ ಸರ್ಕಾರವು ನಡೆಸುತ್ತಿರುವ ಆಯುಷ್ಮಾನ್ ಭಾರತ್ ಯೋಜನೆಯು ಆರೋಗ್ಯ ಯೋಜನೆಗಳಲ್ಲಿ ಬಹಳ ಜನಪ್ರಿಯವಾಗಿದೆ. ಅಂತೆಯೇ ಇತ್ತೀಚೆಗೆ ಆಯುಷ್ಮಾನ್ ಭಾರತ ಯೋಜನೆಯನ್ನು ಪರಿಷ್ಕರಿಸಿ 70 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಹಿರಿಯರಿಗೆ ಗ್ರೂಪ್ ಇನ್ನೂರನ್ಸ್ ಹೊರತಾದ 5 ಲಕ್ಷ ರೂ. ಪ್ರತ್ಯೇಕ ವಿಮಾ ಸೌಲಭ್ಯ ಜಾರಿಗೆ ತಂದಿದೆ.

 

ಅದರಂತೆ ಆಯುಷ್ಮಾನ್ ಆ್ಯಪ್ ಹಾಗೂ beneficiary.nha.gov.in ಪೋರ್ಟಲ್‌ನಲ್ಲಿ ಬದಲಾವಣೆ ಮಾಡಿ 70 ವರ್ಷ ಹಾಗೂ 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪ್ರತ್ಯೇಕ ಸೌಲಭ್ಯ ನೀಡಲಾಗಿದೆ. ಅದರಲ್ಲಿ ಈ ವಯೋಮಾನದ ವೃದ್ಧರನ್ನು ನೋಂದಣಿ ಮಾಡಿಕೊಳ್ಳುವಂತೆ ಸರ್ಕಾರ ತಿಳಿಸಿದ್ದು, ಜೊತೆಗೆ ಅವರಿಗೆ ಪ್ರತ್ಯೇಕ ಆಯುಷ್ಮಾನ್ ಕಾರ್ಡ್ (Ayushman card) ನೀಡಲಾಗುತ್ತದೆ.

ಗ್ರೂಪ್ ಇನ್ನೂರನ್ಸ್ ಕಾರ್ಡ್ ನಲ್ಲಿ ಇಡೀ ಕುಟುಂಬಕ್ಕೆ 5 ಲಕ್ಷ ರೂ. ಲಭಿಸುತ್ತದೆ. ಅಲ್ಲದೆ ವೃದ್ಧ ರಿಗೆ ಪ್ರತ್ಯೇಕವಾಗಿ 5 ಲಕ್ಷ ರೂ ವಿಮೆ ಲಭಿಸುತ್ತದೆ. ಅಂದರೆ ಇಡೀ ಕುಟುಂಬಕ್ಕೆ 5 ಲಕ್ಷ ರೂ. ಲಭಿಸುತ್ತದೆ. ಒಂದು ವೇಳೆ ಇಡೀ ಕುಟುಂಬ ಪೂರ್ತಿ 5 ಲಕ್ಷ ರೂ. ವಿಮೆ ಹಣ ಖರ್ಚು ಮಾಡಿದ್ದರೂ ಹಿರಿಯರಿಗೆ ಪ್ರತ್ಯೇಕವಾಗಿ 5 ಲಕ್ಷ ರೂ. ವಿಮೆ ಲಭಿಸುತ್ತದೆ. ಒಂದು ವೇಳೆ ಹಿರಿಯರು ಈಗಾಗಲೇ ಈ ಪ್ರತ್ಯೇಕ ರಾಜ್ಯ ಸರ್ಕಾರಿ ವಿಮೆ ಹೊಂದಿದ್ದರೆ ಅವರು ಆಯುಷ್ಮಾನ್ ಅಥವಾ ರಾಜ್ಯ ಸರ್ಕಾರಿ ವಿಮೆ ಆಯ್ಕೆ ಮಾಡಿಕೊಳ್ಳಬೇಕು.

Leave A Reply

Your email address will not be published.