Reddy to Ballari: 13 ವರ್ಷಗಳ ವನವಾಸಕ್ಕೆ ಪೂರ್ಣ ವಿರಾಮ: ರೆಡ್ಡಿ ಬಳ್ಳಾರಿ ಎಂಟ್ರಿ ನಿರಾಳ

Reddy to Ballari: ಬರೋಬ್ಬರಿ 13 ವರ್ಷಗಳ ನಂತರ ಗಣಿಧನಿ ಗಂಗಾವತಿ ಶಾಸಕ ಜನಾರ್ಧನರೆಡ್ಡಿಗೆ( ರಿಲೀಫ್ ಸಿಕ್ಕಿದೆ . ತಮ್ಮ ತವರು ಜಿಲ್ಲೆ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ನ್ಯಾ.ಎಮ್ ಎಮ್ ಸುಂದರೇಶ್, ನ್ಯಾ ಅರವಿಂದ್ ಕುಮಾರ್ ಪೀಠ ಆದೇಶ ಮಾಡಿದೆ. ಅಕ್ರಮ ಗಣಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ತಮ್ಮ ಜಿಲ್ಲೆಗೆ ಹೋಗದಂತೆ ಸಿಬಿಐ ವಿಶೇಷ ಕೋರ್ಟ್‌ ನಿರ್ಬಂಧ ಹೇರಿತ್ತು.

ಕಳೆದ 13 ವರ್ಷಗಳ ಈ ಷರತ್ತನ್ನು ತೆರವು ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಜನಾರ್ಧನ ರೆಡ್ಡಿ ಅರ್ಜಿ ಸಲ್ಲಿಸಿದ್ದರು. ಈದಕ್ಕೂ ಮುಂಚೆ ಸ್ವಸ್ಥಳಕ್ಕೆ ಹೋಗಲು ಷರತ್ತು ಸಡಲಿಕೆ ಮಾಡುವಂತೆ ಕೋರಿ ಹಲವು ಬಾರಿ ಮನವಿ ಸಲ್ಲಿಸಿದ್ದರು. ಕೊನೆಗೂ ಈ ಭಾರಿ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

13 ವರ್ಷಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ಬಳ್ಳಾರಿ ಪ್ರವೇಶನಕ್ಕೆ ರೆಡ್ಡಿಗೆ ಹಸಿರು ನಿಶಾನೆ ಸಿಕ್ಕಿದ್ದು ಅವರಿಗೆ ಬಹಳ ಖುಷಿ ತಂದಿದೆ. ಈ ಹಿಂದೆ ಅವರು ಮಗಳ ವಿವಾಹ, ಮೊಮ್ಮಗನ ನಾಮಕರಣ ಹೀಗೆ ಮೂರ್ನಾಲ್ಕು ಬಾರಿ ಬಳ್ಳಾರಿಗೆ ಭೇಟಿ ನೀಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಇನ್ನು ಮುಂದೆ ಯಾರ ಅನುಮತಿಯೂ ಇಲ್ಲದೆ ಅವರು ತಮ್ಮ ಊರಾದ ಬಳ್ಳಾರಿಗೆ ಹೋಗಬಹುದು.

Leave A Reply

Your email address will not be published.