Political Party: ಬಾಂಗ್ಲಾದಲ್ಲಿ ಹಿಂದುಗಳಿಂದ ಪಕ್ಷ ರಚನೆಗೆ ಚಿಂತನೆ: ಕೋಟೆ ಕೊಳ್ಳೆ ಹೊಡೆದ ಮೇಲೆ ಎಚ್ಚೆತ್ತ ಹಿಂದುಗಳು

Political Party: ರಾಜಕೀಯ ಪಕ್ಷವನ್ನು ರಚಿಸಲು ಬಾಂಗ್ಲಾ ದೇಶದ(Bangladesh) ಹಿಂದು ಸಮುದಾಯದ(Hindu community) ನಾಯಕರು ಚಿಂತನೆ ನಡೆಸುತ್ತಿದ್ದಾರೆ. ತಮ್ಮ ಹಕ್ಕುಗಳ ರಕ್ಷಣೆ(Human Rights) ಮತ್ತು ಸುರಕ್ಷತೆಯನ್ನು ಖಾತರಿ ಪಡಿಸಿಕೊಳ್ಳುವುದು ಇದರ ಉದ್ದೇಶ ಎನ್ನಲಾಗಿದೆ. ಬಾಂಗ್ಲಾದೇಶ ಹಿಂದು, ಬೌದ್ಧ, ಕ್ರೈಸ್ತ ಏಕತಾ ಮಂಡಳಿ (BHBCOP) ಮತ್ತು ಇತರ ಕೆಲವು ಗುಂಪುಗಳ ಹಿಂದು ನಾಯಕರು(Hindu Leaders) ಪ್ರತ್ಯೇಕ ರಾಜಕೀಯ ಪಕ್ಷ ಸ್ಥಾಪಿಸುವ ಸಾಧ್ಯತೆಯನ್ನು ಅಥವಾ ಸಂಸದೀಯ ಸ್ಥಾನಗಳಲ್ಲಿ ಮೀಸಲಾತಿ ಕೇಳುವ ವಿಚಾರದ ಬಗ್ಗೆ ಚರ್ಚಿಸುತ್ತಿದ್ದಾರೆ.

 

ಮೂರು ಆಯ್ಕೆಗಳ ಚರ್ಚೆ:
ಮೂರು ಮುಖ್ಯ ಆಯ್ಕೆಗಳ ಬಗ್ಗೆ ಪ್ರಸ್ತುತ ಸಮಾಲೋಚನೆ ನಡೆಸಲಾಗುತ್ತಿದೆ. ಪ್ರತ್ಯೇಕ ವ್ಯವಸ್ಥೆಗೆ 19548 ಮತಕ್ಷೇತ್ರ ಮರಳುವುದು, ಹಿಂದುಗಳಿಗಾಗಿ ಪ್ರತ್ಯೇಕ ರಾಜಕೀಯ ಪಕ್ಷ ಸ್ಥಾಪಿಸುವುದು ಮತ್ತು ಅಲ್ಪಸಂಖ್ಯಾತರಿಗೆ ಸಂಸತ್ತಿನಲ್ಲಿ ಸ್ಥಾನಗಳ ಮೀಸಲಾತಿ ಕೇಳುವುದು ಆಯ್ಕೆಗಳಾಗಿವೆ ಎಂದು ಬಿಎಚ್‌ಬಿಸಿಒಪಿ ಪ್ರಸೀಡಿಯಂ ಸದಸ್ಯ ಕಾಜಲ್ ದೇವನಾಥ್ ತಿಳಿಸಿದ್ದಾರೆ.

ಮೀಸಲಾತಿ ವಿರೋಧಿ ವಿದ್ಯಾರ್ಥಿ ಚಳವಳಿಗೆ ಮಣಿದು, ಆವಾಮಿ ಲೀಗ್ ನಾಯಕಿ ಶೇಖ್ ಹಸೀನಾ ಆಗಸ್ಟ್ 5ರಂದು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಂತರ ಹಿಂದುಗಳಲ್ಲಿ ಪ್ರತ್ಯೇಕ ರಾಜಕೀಯ ಪಕ್ಷ ರಚನೆಯ ಯೋಚನೆ ಮೊಳಕೆಯೊಡೆದಿದೆ. ಕೊಲೆ, ದೈಹಿಕ ಮತ್ತು ಲೈಂಗಿಕ ಹಲ್ಲೆಗಳು, ದೇವಾಲಯಗಳ ಮೇಲೆ ದಾಳಿ ಮತ್ತು ಆಸ್ತಿಪಾಸ್ತಿ ನಾಶ ಸೇರಿದಂತೆ ಹಿಂದುಗಳ 2,010 ದಾಳಿಯ ಪ್ರಕರಣಗಳು ನಡೆದಿರುವ ಬಗ್ಗೆ ಬಿಎಚ್ ಬಿಸಿಒಪಿ ಸಂಗ್ರಹಿಸಿರುವ ಅಂಕಿಸಂಖ್ಯೆಗಳತ್ತ ದೇವನಾಥ್ ಗಮನ ಸೆಳೆದಿದ್ದಾರೆ.

Leave A Reply

Your email address will not be published.