BSNL Recharge plan: ಕಡಿಮೆ ಬೆಲೆಯಲ್ಲಿ ಉತ್ತಮ ರಿಚಾರ್ಜ್ ಪ್ಲಾನ್ ಇಲ್ಲಿದೆ!
BSNL Recharge plan: ಈಗಾಗಲೇ JIO, Airtel ಮತ್ತು VI ದಂತಹ ಪ್ರಮುಖ ಟೆಲಿಕಾಂ ಕಂಪನಿ ತಮ್ಮ ಮೊಬೈಲ್ ದರಗಳನ್ನು ಸರಾಸರಿ ಶೇ.15 ರಷ್ಟು ಹೆಚ್ಚಳ ಮಾಡಲಾಗಿದೆ. ಆದರೆ ಈ ನಡುವೆ ಸರ್ಕಾರಿ ಒಡೆತನದ ಬಿ.ಎಸ್.ಎನ್.ಎಲ್ ಹವಾ ಇತ್ತೀಚಿಗೆ ಜೋರಾಗಿಯೇ ಇದೆ.
ಯಾಕೆಂದರೆ ಇತ್ತೀಚಿಗೆ BSNL ದೈತ್ಯ ಟೆಲಿಕಾಂ ಕಂಪನಿಗಳಿಗೆ ಭಾರಿ ಪೈಪೋಟಿ ನೀಡುತ್ತಿದ್ದು, ಇದೀಗ ಬಿ.ಎಸ್.ಎನ್.ಎಲ್ ನ ಹೊಸ ಬಜೆಟ್ ಪ್ಲಾನ್ (BSNL Recharge plan) ಬಗ್ಗೆ ಇಲ್ಲಿ ತಿಳಿಸಲಾಗಿದೆ. ಈ ಹೊಸ ರೀಚಾರ್ಜ್ ಯೋಜನೆ ಆಗಿರುವ BSNLನ 345 ಪ್ರೀಪೇಯ್ಡ್ ರಿಚಾರ್ಜ್ ಯೋಜನೆಯ ಈ ಪ್ಲಾನ್ ನಲ್ಲಿ ದಿನಕ್ಕೆ 1 GB ಡೇಟಾವನ್ನು ಪಡೆಯುತ್ತಾರೆ. 60 ದಿನಗಳ ವ್ಯಾಲಿಡಿಟಿ, ಉಚಿತ ಕರೆ, ಡೇಟಾ ಹಾಗೂ SMS ಸೌಲಭ್ಯ ದೊರೆಯಲಿದೆ. ಒಂದು ವೇಳೆ ಡೇಟಾ ಪ್ಯಾಕ್ ಮುಗಿದ ನಂತರ ಸ್ಪೀಡ್ 40 kbps ನಲ್ಲಿ ಇಂಟರ್ ನೆಟ್ ಬಳಕೆಯಾಗುತ್ತದೆ.
ಇನ್ನೂ ಮತ್ತೊಂದು ಪ್ಲಾನ್ ಸಹ ಇದ್ದು, BSNL 347 ರೂಪಾಯಿಯ ಯೋಜನೆಯ ಪ್ಲಾನ್ ನೀಡುತ್ತಿದ್ದು, ಈ ಪ್ಲಾನ್ ನಲ್ಲಿ 54 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತನಿತ್ಯ 2GB ಡೇಟಾ ಪಡೆಯಬಹುದಾಗಿದೆ. ದಿನದಲ್ಲಿ 2ಜಿಬಿ ಡಾಟಾ ಮಿತಿ ಮುಗಿದ ಬಳಿಕ 40kbps ಇಂಟರ್ನೆಟ್ ಲಭ್ಯವಿದೆ.ಅಲ್ಲದೇ ಅನಿಯಮಿತ ಕರೆಯೊಂದಿಗೆ ದಿನಕ್ಕೆ 100 SMS ಸೌಲಭ್ಯವನ್ನು ಸಹ ನೀಡಲಾಗುತ್ತದೆ. ಇದಲ್ಲದೆ, ಜಿಂಗ್ ಮ್ಯೂಸಿಕ್ ಮತ್ತು ಬಿಎಸ್‌ಎನ್‌ಎಲ್ ಟ್ಯೂನ್‌ಗಳಿಗೆ ಉಚಿತ ಪ್ರವೇಶವನ್ನು ಗ್ರಾಹಕರು ಪಡೆಯಬಹುದಾಗಿದೆ.
ಮತ್ತೊಂದು ಪ್ಲಾನ್ ಬಗ್ಗೆ ಇಲ್ಲಿ ಹೇಳಲಾಗಿದೆ. ಅದರಂತೆ 397 ರೂಪಾಯಿಯ ಪ್ಲಾನ್ ನಲ್ಲಿ ಒಟ್ಟು 150 ದಿನಗಳ ವ್ಯಾಲಿಡಿಟಿ ಇದ್ದು, ದಿನಕ್ಕೆ 2ಜಿಬಿ ಡೇಟಾ ಅನಿಯಮಿತ ಕರೆ ಹಾಗೂ ದಿನಕ್ಕೆ 100 SMS ಸೌಲಭ್ಯವನ್ನು ಪಡೆಯಬಹುದಾಗಿದೆ. ಆದರೆ ಈ ಯೋಜನೆಯಲ್ಲಿ ಈ ಉಚಿತ ಸೇವೆ ಮೊದಲ 30 ದಿನಗಳ ವರೆಗೆ ಮಾತ್ರ ಸಕ್ರಿಯವಾಗಿರುತ್ತದೆ. 30 ದಿನಗಳ ನಂತರ, ಬಳಕೆದಾರರು ಸ್ಥಳೀಯ ಕರೆಗಳಿಗೆ ನಿಮಿಷಕ್ಕೆ ರೂ.1 ಮತ್ತು STD ಕರೆಗಳಿಗೆ ನಿಮಿಷಕ್ಕೆ ರೂ.1.3 ಪಾವತಿಸಬೇಕಾಗುತ್ತದೆ.