Bigg Boss Kannada 11- ಬಿಗ್ ಬಾಸ್ ಆರಂಭದಲ್ಲೇ ವೀಕ್ಷಕರಿಗೆ ಬ್ಯಾಡ್ ನ್ಯೂಸ್!

Bigg boss kannada 11: ಕನ್ನಡ ಖ್ಯಾತ ರಿಯಾಲಿಟಿ ಶೋ, ಬಿಗ್ ಬಾಸ್ ಸೀಸನ್ 11 (Bigg boss kannada 11):, ಸೆಪ್ಟೆಂಬರ್ 29ರಂದು ಆರಂಭ ಆಗಿದ್ದು, ಈ ಬಾರಿ ಸ್ವರ್ಗ-ನರಕ ಕಾನ್ಸೆಪ್ಟ್ನಲ್ಲಿ ಬಿಗ್ ಬಾಸ್ ವಿಶೇಷವಾಗಿ ಮೂಡಿ ಬರಲಿದೆ. ಆದ್ರೆ ಇದರ ಬೆನ್ನಲ್ಲೇ ವೀಕ್ಷಕರಿಗೆ ಬ್ಯಾಡ್ ನ್ಯೂಸ್ ಒಂದಿದೆ.

ನಿಮಗೆಲ್ಲ ಗೊತ್ತಿರುವ ಹಾಗೆ ಕಳೆದ ಸೀಸನ್ ‘ಬಿಗ್ ಬಾಸ್ ಕನ್ನಡ 10’ ಶೋ 24 ಗಂಟೆ ಲೈವ್ ಆಗಿ ಜಿಯೋ ಸಿನಿಮಾ ಆಪ್ ಮೂಲಕ ತೋರಿಸಲಾಗುತ್ತಿತ್ತು. ಅಂತೆಯೇ ಈ ಬಾರಿ ಕೂಡ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಆದ್ರೆ ಈ ಬಾರಿ ಲೈವ್ ಶೋ ನೋಡುವ ಅವಕಾಶ ನೀಡಲಾಗಿಲ್ಲ. ಆದ್ದರಿಂದ ಎಪಿಸೋಡ್ಗಿಂತ ಮೊದಲೇ ಬಿಗ್ ಬಾಸ್ ನೋಡಬಹುದು ಎಂದು ಪ್ಲ್ಯಾನ್ ಮಾಡಿದ್ದವರಿಗೆ ಇದು ಬ್ಯಾಡ್ ನ್ಯೂಸ್ ಆಗಿದೆ. ಹೀಗಾಗಿ, ರಾತ್ರಿ ಒಂದೂವರೆ ಗಂಟೆ ತೋರಿಸುವ ಎಪಿಸೋಡ್ನೇ ಎಲ್ಲರೂ ನೋಡಬೇಕು.
ಸದ್ಯ ‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ ಈ ಬಾರಿ ಒಟ್ಟು 17 ಮಂದಿ ದೊಡ್ಮನೆ ಸೇರಿದ್ದಾರೆ. ಅಂತೆಯೇ ಸ್ವರ್ಗ ನರಕ ಕಾನ್ಸೆಪ್ಟ್ನಲ್ಲಿ 10 ಜನ ಸ್ವರ್ಗ ಹಾಗೂ 7 ಜನ ನರಕದಲ್ಲಿ ಇದ್ದಾರೆ. ಇನ್ನು ಸ್ಪರ್ಧಿ ಗಳ ಬಗ್ಗೆ ಹೇಳುವುದಾದರೆ, ಭವ್ಯಾ ಗೌಡ, ಯಮುನಾ ಶ್ರೀನಿಧಿ, ಗೌತಮಿ ಜಾಧವ್, ಅನುಷಾ ರೈ, ಧರ್ಮಕೀರ್ತಿರಾಜ್, ಲಾಯರ್ ಜಗದೀಶ್, ಶಿಶಿರ್, ತ್ರಿವಿಕ್ರಂ, ಹಂಸ, ಮಾನಸಾ, ಧನರಾಜ್ ಆಚಾರ್, ಗೋಲ್ಡ್ ಸುರೇಶ್, ಐಶ್ವರ್ಯಾ ಸಿಂಧೋಗಿ, ಚೈತ್ರಾ ಕುಂದಾಪುರ್, ಉಗ್ರಂ ಮಂಜು, ಮೋಕ್ಷಿತಾ ಪೈ, ರಂಜಿತ್ ಕುಮಾರ್ ಬಿಗ್ ಬಾಸ್ ಮನೆಯಲ್ಲಿ ಸೇರಿದ್ದಾರೆ. ಇನ್ನೇನು ಟ್ವಿಸ್ಟ್ ಕಾದಿದೆ ಎಂದು ಜೆಸ್ಟ್ ವೈಟ್ ಅಂಡ್ ಸೀ.