Snake Bite: ದ್ವಿಚಕ್ರ ವಾಹನ ಸೀಟ್ ಒಳಗೆ ಬೆಚ್ಚಗೆ ಮಲಗಿದ್ದ ಹಾವು: ಸವಾರನ ಮೇಲೆ ಆಕ್ರಮಣ

Snake Bite: ಕುಪ್ಪೆ ಪದವು ಎಂಬಲ್ಲಿ ದ್ವಿಚಕ್ರ ವಾಹನದ ಸೀಟಿನ ಕೆಳಗಡೆ ಬೆಚ್ಚಗೆ ಕೂತಿದ್ದ ವಿಷಕಾರಿ ಹಾವು ಸ್ಕೂಟಿ ಸವಾರನಿಗೆ ಕಚ್ಚಿದ (Snake Bite)ಆಘಾತಕಾರಿ ಘಟನೆ ಶುಕ್ರವಾರ ರಾತ್ರಿ ಕೈಕಂಬ ಕುಪ್ಪೆಪದವಿನಲ್ಲಿ ನಡೆದಿದೆ.

 

ಹೌದು, ಇಮ್ಮಿಯಾಜ್ ಎಂಬವರು ಕುಪ್ಪೆಪದವಿನನಲ್ಲಿ ಸೈಬರ್ ಸೆಂಟರ್ನಡೆಸುತ್ತಿದ್ದು, ಸೆ 27 ರಂದು ರಾತ್ರಿ ತನ್ನ ಎಲೆಕ್ಟ್ರಿಕ್ ಸ್ಕೂಟಿ ಯಲ್ಲಿ ಕುಪ್ಪೆ ಪದವಿನ ಮಸೀದಿಯಲ್ಲಿ ಪ್ರಾರ್ಥನೆ ಮಾಡಿ ನಂತರ ಹಿಂದಿರುಗಿ ಮನೆಗೆ ತೆರಳಲು ನಿಲ್ಲಿಸಿದ್ದ ದ್ವಿ ಚಕ್ರ ವಾಹನದ ಬಳಿ ಬಂದಿದ್ದಾರೆ. ಅದೇ ವೇಳೆ ಸೀಟ್ ತೆರೆದು ಕೆಲವು ದಾಖಲೆ ಪತ್ರಗಳನ್ನು ಇಡುವ ಸಂದರ್ಭ ಸೀಟಿನ ಕೆಳಗಡೆ ಬೆಚ್ಚನೆ ಮಲಗಿದ್ದ ಹಾವು ರಪ್ಪನೆ ಎದ್ದು ಬೆರಳಿಗೆ ಕಚ್ಚಿದೆ.

ಕೂಡಲೇ ಇಮ್ಮಿಯಾಜ್ ಅವರನ್ನು ಸಾರ್ವಜನಿಕರು ಸೇರಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಸ್ಥಳೀಯರು ಹಾವನ್ನು ಪರಿಶೀಲಿಸಿದ ಪ್ರಕಾರ ಅವರು ಕನ್ನಡಿ ಹಾವು ಕಡಿತಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.