Chamundi Hill: ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ; ತಾಯಿ ದರ್ಶನಕ್ಕೆ ನಿರ್ಬಂಧ!

Chamundi Hill: ಇನ್ನೇನು ದಸರಾ ಸಂಭ್ರಮ ಆರಂಭ ಆಗಲಿದೆ. ಮೈಸೂರು ನಗರ ಹೊಸ ಮೆರುಗು ಪಡೆಯಲಿದೆ. ಆದ್ರೆ ಇಂದು (ಸೆ. 29) ಮೈಸೂರಿನ (Mysuru) ಚಾಮುಂಡಿ ಬೆಟ್ಟದಲ್ಲಿ (Chamundi Hill) ನಿಷೇಧಾಜ್ಞೆ ಜಾರಿಯಾಗಿದೆ. ಹೌದು, ಮಹಿಷ ಮಂಡಲೋತ್ಸವ ಮತ್ತು ಚಾಮುಂಡಿ ಚಲೋ ನಡುವಿನ ವಿವಾದ ಹಿನ್ನೆಲೆಯಲ್ಲಿ ಇದೀಗ ಚಾಮುಂಡೇಶ್ವರಿ ತಾಯಿ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.

ಈಗಾಗಲೇ ಮಹಿಷ ದಸರಾ ಆಚರಣಾ ಸಮಿತಿಯು ಇಂದು ಮಹಿಷ ದಸರಾ (Mahisha Dasara) ಆಚರಣೆಗೆ ಕರೆ ನೀಡಿತ್ತು. ಆದ್ದರಿಂದ ಬೆಳಗ್ಗೆ 10:30ಕ್ಕೆ ಚಾಮುಂಡಿಬೆಟ್ಟದಲ್ಲಿನ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಹಾಗೂ ಪುರಭವನದ ಹೊರ ಆವರಣದಲ್ಲಿ ಮಹಿಷ ಮಂಡಲೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿತ್ತು.

ಈ ವೇಳೆ ಯಾವುದೇ ಮೆರವಣಿಗೆ, ಬೈಕ್ ರ್‍ಯಾಲಿ, ಪರ-ವಿರೋಧ ಘೋಷಣೆ ಕೂಗುವುದು, ಪಟಾಕಿ ಸಿಡಿಸಿ ಸಂಭ್ರಮಾಚರಣೆ, ಮೂರ್ತಿ ಮೆರವಣಿಗೆ ಮಾಡುವುದು, ಜನ ಗುಂಪು ಸೇರುವುದು, ಯಾವುದೇ ಬಹಿರಂಗ ಸಭೆ ಸಮಾರಂಭಗಳನ್ನು ನಡೆಸುವುದು ಹಾಗೂ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಪ್ರಚಾರ, ದ್ವನಿವರ್ಧಕ ಬಳಸುವುದು, ಫ್ಲೆಕ್ಸ್, ಬ್ಯಾನರ್ ಅಳವಡಿಸುವುದು, ಕರಪತ್ರಗಳನ್ನು ಹಂಚುವುದು, ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಅದಲ್ಲದೆ ಚಾಮುಂಡಿ ತಾಯಿ ದರ್ಶನಕ್ಕೆ ಇಂದು ಅವಕಾಶ ಇಲ್ಲ. ಈ ಕಾರಣದಿಂದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Leave A Reply

Your email address will not be published.