Marriage Fix: ಮದುವೆ ಗೊತ್ತಾಗಿದ್ದ ಯುವತಿಗೆ ಪರಪುರುಷನೊಂದಿಗೆ ಸಂಬಂಧ: ವಿಷಯ ತಿಳಿದ ಮದುಮಗ ಏನು ಮಾಡಿದ?

Share the Article

Marriage Fix: ಮದುವೆಯಾಗಿ ಸುಂದರ ಬಾಳು ನಡೆಸುವ ಕನಸು ಕಾಣುತ್ತಿದ್ದ ಯುವಕನೋರ್ವ ಆತ್ಮಹತ್ಯೆ(Suicide) ಮಾಡಿಕೊಂಡು ಪ್ರಾಣ ಬಿಟ್ಟಿದ್ದಾನೆ. ಮದುಗೆಂದು ನಿಯುಕ್ತಳಾದ ಯುವತಿ(Girl) ಪರ ಪುರುಷರೊಂದಿಗೆ ಸಂಬಂಧವಿರಿಸಿದ್ದಾಳೆ ಎಂದು ತಿಳಿದು ಇಲಿಪಾಷಣ ಸೇವಿಸಿ ಮದುಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ.

ಮೂಲತಃ ಅಸ್ಸಾಂ(Assam) ರಾಜ್ಯದ ದಗಲ್ ಪುರಿಯ ಮಡ್ ಗಾಂ ನಿವಾಸಿ, ಕೂಲಿ ಕಾರ್ಮಿಕ ಅಜ಼ರುಲ್ ಇಸ್ಲಾಂ ಕೊಡಗಿನ ವಿರಾಜಪೇಟೆ ನಗರದ ಮೊಗರಗಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. 18 ವರ್ಷದ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡದ್ದಾನೆ.

ಮೃತ ಯುವಕ ವಿವಿಧ ಸ್ಥಳಗಳಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಎನ್ನಲಾಗಿದೆ. ಕಳೆದ ಮೂರು ತಿಂಗಳುಗಳಿಂದ ನಗರದ ಕೋಳಿ ಮಾಂಸ ಅಂಗಡಿಯೋಂದರಲ್ಲಿ ಕೋಳಿ ಶುಚಿಗೊಳಿಸುವ ಕಾಯಕ ನಿರ್ವಹಿಸುತಿದ್ದ. ಮೃತ ಯುವಕ ಅಸ್ಸಾಂ ರಾಜ್ಯದ ತನ್ನ ಗ್ರಾಮದ ತನ್ನ ಸಮುದಾಯದ ಯುವತಿಯನ್ನು ವರಿಸಲು ಮುಂದಾಗಿದ್ದ. ಉಭಯ ಕುಟುಂಭಗಳು ಮದುವೆಗೆ ಸಮ್ಮತ್ತಿ ಸೂಚಿಸಿದ್ದವು. ನಂತರದಲ್ಲಿ ನಡೆದಿದ್ದೇ ಬೇರೆ.

ದಿನ ಬಿಟ್ಟು ದಿನ ಯುವತಿಯೋಂದಿಗೆ ದೂರವಾಣಿ ಕರೆ ಮಾಡುತ್ತಿದ್ದ ಮೃತ ಯುವಕ. ಅದರೊಂದಿಗೆ ಗ್ರಾಮದ ಸ್ನೇಹಿತರೊಂದಿಗೂ ಮಾತನಾಡುತಿದ್ದ. ಕೆಲವು ದಿನಗಳ ಹಿಂದೆ ಯುವತಿಯ ನಡುವಳಿಕೆಯ ಬಗ್ಗೆ ಸಂಶಯ ಮೂಡಿದೆ ಮೃತ ಯುವಕ, ಸ್ನೇಹಿತರ ಬಳಿ ಯುವತಿಯ ಚಾರಿತ್ರ್ಯದ ಬಗ್ಗೆ ನಿಗೂಢ ವಾಗಿ ಕೇಳಿದ್ದಾನೆ ಮೃತ. ಅಲ್ಲಿ ತಿಳಿದ್ದು ಸ್ಪೋಟಕ ಸತ್ಯ. ಮದುಗೆ ನಿಯುಕ್ತಿಗೊಂಡ ಯುವತಿಯು ಪರ ಪುರುಷರೊಂದಿಗೆ ಸಂಭಂದ ಹೊಂದಿದ್ದಾಳೆ ಎಂದು.

ಇದರಿಂದ ಯುವಕ ಚಿಂತೆಗಿಡಾಗಿದ್ದ. ಸೆ. 27ರ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಿದ್ದಾನೆ. ಮನನೊಂದು ಇಲಿ ಪಾಷಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಳಿಗೆಯಲ್ಲಿ ಕೆಲಸ ಮಾಡುವ ಕಾರ್ಮಿಕ ಸ್ನೇಹಿತರು ಹಣದ ಬಗ್ಗೆ ಮಾತನಾಡಲು ದೂರವಾಣಿ ಕರೆ ಮಾಡಿದ್ದಾರೆ. ಹಲವು ಬಾರಿ ಕರೆ ಮಾಡಿದರು ಕರೆ ಸ್ವೀಕರಿಸಲಿಲ್ಲ. ಸಂಶಯದಿಂದ ಮನೆಗೆ ಬಂದ ಕಾರ್ಮಿಕ ಸ್ನೇಹಿತರು ನೋಡಿದ್ರೆ, ಯುವಕ ಆತ್ಮಹತ್ಯೆ ಮಾಡಿಕೊಂಡಿರೋದು ತಿಳಿದು ಬಂದಿದೆ.

ಕೇರಳದ ಕ್ಯಾಲಿಕಟ್ ನಲ್ಲಿ ಖಾಸಗಿ ಉದ್ಯೋಗದಲ್ಲಿ ಮೃತನ ಅಣ್ಣ ಕೈರುಲ್ಲಾ ಇಸ್ಲಾಂ ಅವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ 194 ಬಿ.ಎನ್.ಎಸ್.ಎಸ್ ಕಾಯ್ದೆಯಂತೆ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

Leave A Reply