Basavana Gouda Yatnal: ‘ಸಿದ್ದರಾಮಯ್ಯಗೆ ನನ್ನ ಸಂಪೂರ್ಣ ಬೆಂಬಲ’ – ಬಿಜೆಪಿ ನಾಯಕ ಬಸವನಗೌಡ ಯತ್ನಾಳ್ ಹೇಳಿಕೆ

Basavana Gouda Yatnal : ಮುಡಾ ಅಕ್ರಮ ಸುಳಿಯಲ್ಲಿ ಸಿಲುಕಿರುವ ಸಿದ್ದರಾಮಯ್ಯ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಅವರ ರಾಜಿನಾಮೆಗೆ ಆಗ್ರಹಿಸಿದೆ. ಈ ಬೆನ್ನಲ್ಲೇ ಬಿಜೆಪಿಯ ಪ್ರಬಲ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್(Basavana Gouda Yatnal) ಅವರು ನನ್ನ ಬೆಂಬಲ ಸಿದ್ದರಾಮಯ್ಯಗೆ(CM Siddaramaiah) ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

 

ಹೌದು, ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್ ಅವರು ‘ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಎಲ್ಲ ಜನಾಂಗದವರಿಗೆ ನ್ಯಾಯ ಕೊಡುವ ಹೋರಾಟ ನಡೆದರೆ, ನಾನು ಅವರೊಂದಿಗೆ ಪಕ್ಷಾತೀತವಾಗಿ ಹೋಗಿ ಸಂಪೂರ್ಣ ಬೆಂಬಲಿಸುತ್ತೇನೆ’ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಬಳಿಕ ಮಾತನಾಡಿದ ಅವರು ಈಗ ನಮ್ಮ ಪಾರ್ಟಿ ಮುಡಾ ಹಗರಣದ ವಿರುದ್ಧ ಹೋರಾಟ ನಡೆಸಿದೆ. ಅಂತೆಯೇ ವಾಲ್ಮೀಕಿ ನಿಗಮದಲ್ಲಿ 187 ಕೋಟಿಯಲ್ಲಿ 82 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ತಿಂದು ಹಾಕಿದೆ. ಇದನ್ನು ವಿರೋಧಿಸಿ ನಾವು ಬೀದರ್​​​ನ ಬಸವಕಲ್ಯಾಣದಿಂದ ಬೆಂಗಳೂರಿನವರೆಗೂ ಪಾದಯಾತ್ರೆ ಮೂಲಕ ಹೋರಾಟ ಮಾಡಲು ಸಿದ್ಧರಿದ್ದೇವೆ. ಪಾದಯಾತ್ರೆಗೆ ಹೈಕಮಾಂಡ್ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ.

Leave A Reply

Your email address will not be published.