YSR: ಜಗನ್ ಮಾತ್ರವಲ್ಲ, ತಂದೆ ಕೂಡ ತಿಮ್ಮಪ್ಪನ ಕೆಂಗಣ್ಣಿಗೆ ಗುರಿಯಾಗಿದ್ರು ಅನ್ನೋ ಸತ್ಯ ಗೊತ್ತಾ ನಿಮ್ಗೆ?

ಆ ತಪ್ಪಿಗಾಗಿ ಪ್ರಾಣವನ್ನೇ ತೆಗೆದನಾ ವೆಂಕಟೇಶ್ವರ? ಅಷ್ಟಕ್ಕೂ ಅಂದು YSR ಮಾಡಿದ್ದೇನು?

YSR: ಭೂಲೋಕದ ಒಡೆಯ, ಏಳು ಕುಂಡಲವಾಡ, ವೈಕುಂಠದ ಅಧಿಪತಿ ತಿರುಪತಿ ತಿಮ್ಮಪ್ಪನನ್ನು ನೋಡುವುದೇ ಒಂದು ಸೌಭಾಗ್ಯ. ದೇಶದ ಭೂಲೆ ಮೂಲೆಗಳಿಂದ ಬಂದು ಈ ನನ್ನುಪ್ಪನನ್ನು ಕಣ್ತುಂಬಿಕೊಳ್ಳುವುದೇ ಒಂದು ಪುಣ್ಯ. ಸ್ವಾಮಿಯನ್ನು ಒಂದು ಸಲ ನೋಡಿದರೆ ಸಾಕು ಜನ್ಮ ಪಾವನ, ಸಂಕಟ ನಿವಾರಣೆ ಎನ್ನುತ್ತಾರೆ ಭಕ್ತರು. ಇಂತಹ ಪ್ರಸಿದ್ಧ ಯಾತ್ರಾ ಕ್ಷೇತ್ರದಲ್ಲಿ ಘನಘೋರ ಕೃತ್ಯವನ್ನು ಎಸಗಲಾಗಿದೆ ಎಂಬ ವರದಿಯನ್ನು ಕೇಳಿಯೇ ಭಕ್ತರು ಕಂಗಾಲಾಗಿದ್ದಾರೆ.

 

ಈ ಹಿಂದೆ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಿರುಪತಿ ತಿಮ್ಮಪ್ಪನ ಪ್ರಸಾದವಾದ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ದನ, ಹಂದಿಯ ಕೊಬ್ಬು, ಮೀನಿನ ಎಣ್ಣೆ ಬೆರೆಸಲಾಗುತ್ತಿದೆ ಎನ್ನುವ ಆರೋಪವನ್ನು ಹಾಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದರು. ಲಡ್ಡುನಲ್ಲಿ ಕಲಬೆರಿಕೆಯಾಗಿರುವ ವರದಿಯನ್ನು ಸರ್ಕಾರವೇ ಬಿಡುಗಡೆ ಮಾಡಿದ್ದು ಕಲಬೆರಕೆ ಸತ್ಯ ಎಂದು ಹೇಳಿದೆ. ಜಗನ್ ಮೋಹನ್ ರೆಡ್ಡಿ ಕೋಟ್ಯಾಂತರ ಭಕ್ತರ ಭಾವನೆಗಳಿಗೆ ಕೊಳ್ಳಿ ಇಟ್ಟ ಮನುಷ್ಯ, ಕೋಟ್ಯಾಂತರ ಭಕ್ತರು ಪರಮ ಪವಿತ್ರ ಎಂದು ನಂಬಿ ತಿನ್ನುವ ತಿಮ್ಮಪ್ಪನ ಪ್ರಸಾದ ಲಡ್ಡುವಿಗೆ ದನದ ಕೊಬ್ಬು ಬೆರೆಸಿ, ವರ್ಷಗಳಗಟ್ಟಲೇ ತಿರುಮಲದಲ್ಲಿಯೇ ಹಂಚಿದ್ದಾರೆ. ಈ ರೀತಿ ಮಾಡಿದವರನ್ನು ತಿಮ್ಮಪ್ಪ ಸುಮ್ಮನೆ ಬಿಡ್ತಾನಾ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ.

ತಿರುಪತಿ ತಿಮ್ಮಪ್ಪನ ಪವಾಡಗಳು ಎಲ್ಲರಿಗೂ ಗೊತ್ತು. ಈ ಪವಾಡಗಳನ್ನು (Miracles) ಬಲ್ಲ ಭಕ್ತರು ಹೇಳುವುದು ಒಂದೇ ಮಾತು ಕ್ಷೇತ್ರದಲ್ಲಿ ‘ಘೋರ ಕೃತ್ಯ ಎಸಗಿದವರಿಗೆ ತಿಮ್ಮಪ್ಪನ ಶಾಪ (Curse) ತಟ್ಟಲಿ’ ಎಂದು. ಹಾಗಿದ್ರೆ ತಿರುಪತಿ ತಿಮ್ಮಪ್ಪನ ಶಾಪ ತಟ್ಟಿದಕ್ಕೆ ದೃಷ್ಟಾಂತ ಇದೆಯಾ? ಎಂದು ನೀವು ಕೇಳಬಹದು. ಯಸ್, ಈ ಕುರಿತು ಸಾಕಷ್ಟು ಉದಾಹರಣೆಗಳ ನಡುವೆ ಒಂದೇ ಒಂದು ದೃಷ್ಟಾಂತವನ್ನು ನಿಮ್ಮ ಮುಂದೆ ತೆರದಿಡುತ್ತಿದ್ದೇವೆ. ಈ ಹಿಂದಿನ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ (Jagan Mohan reddy) ಅವರ ತಂದೆಗೂ ತಿಮ್ಮಪ್ಪನ ಶಾಪ ತಟ್ಟಿದೆ. ಹಾಗಿದ್ರೆ ಜಗನ್ ತಂದೆ ವೈ ಎಸ್ ರಾಜಶೇಖರ್ ರೆಡ್ಡಿ(YSR) ಮಾಡಿದ ತಪ್ಪೇನು? ತಿಮ್ಮಪ್ಪ ಕೊಟ್ಟ ಶಿಕ್ಷೆ ಏನು?

ಆಂದ್ರಪ್ರದೇಶದ ಇತಿಹಾಸದಲ್ಲಿ ವೈ ಎಸ್ ರಾಜಶೇಖರ್ ರೆಡ್ಡಿ ಅವರ ಹೆಸರು ದೈತ್ಯವಾಗಿ ಬೆಳೆದುಕೊಂಡಿತ್ತು. ಕಾಂಗ್ರೆಸ್ ಪಕ್ಷವನ್ನು ಆಂಧ್ರದಲ್ಲಿ ಗಟ್ಟಿ ನೆಲೆಯುರುವಂತೆ ಮಾಡಿ ಬೃಹದಾಕಾರವಾಗಿ ಬೆಳೆಯುವಂತೆ ಮಾಡಿದ್ದು ಇದೇ ವೈಎಸ್ ರಾಜಶೇಖರ್ ಎನ್ನುವ ನಾಯಕ. ಇಂತಹ ರಾಜಶೇಖರ್ ರೆಡ್ಡಿ ಅವರು ಅದೊಂದು ದಿನ ತಾವು ಪ್ರಯಾಣ ಮಾಡುತ್ತಿದ್ದ ಹೆಲಿಕಾಪ್ಟರ್ ಅಪಘಾತದಲ್ಲಿ ದುರ್ಮರಣ ಹೊಂದಿದರು. ಈ ಸಾವು ಅಪಘಾತವೇ ಆದರೂ ಆಂಧ್ರದ ಹಲವು ಜನ ಇದನ್ನು ತಿರುಪತಿ ತಮ್ಮಪ್ಪನ ಶಾಪ ಎಂದು ಕರೆಯುತ್ತಾರೆ. ಹಾಗಾದ್ರೆ ತಿರುಪತಿ ತಿಮ್ಮಪ್ಪನ ಶಾಪಕ್ಕೆ ಗುರಿಯಾಗುವಂತಹ ಕೆಲಸ ಏನು ಮಾಡಿದ್ರು ?

ವೈಎಸ್​ಆರ್​ಗೆ ತಿಮ್ಮಪ್ಪ ಶಾಪವೇಕೆ? ಮಾಡಿದ ತಪ್ಪೇನು?
ವೈಎಸ್ ರಾಜಶೇಖರ್ ರೆಡ್ಡಿ ಅವರು ತಮ್ಮ ತಂದೆಯಂತೆ ಹಿಂದೂ ಧರ್ಮ ಬಿಟ್ಟು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುತ್ತಾರೆ. ಮತಾಂತರವಾಗಿದ್ದು ಅದು ಅವರ ವೈಯಕ್ತಿಕ ನಂಬಿಕೆ ಹಾಗೂ ಅವರ ಹಕ್ಕು ಕೂಡ, ಅದು ತಪ್ಪಲ್ಲ ಆದರೆ, ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡುವುದು ಅಪಾರಧ. ಹೀಗೆ ಮತಾಂತರವಾದ ನಂತರ ವೈಎಸ್ ರಾಜಶೇಖರ್ ರೆಡ್ಡಿ ಅವರು ಹಿಂದೂ ದೇವರುಗಳಿಗೆ ಮಲತಾಯಿ ಧೋರಣೆ ಮಾಡಿದ್ರು ಎನ್ನುವ ಆರೋಪ ಇದೆ. ಅವರ ಅಧಿಕಾರ ಅವಧಿಯಲ್ಲಿ ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿ ನಡೆದ ಅವ್ಯವಹಾರದ ಫಲವಾಗಿಯೇ ತಿಮ್ಮಪ್ಪನ ಶಾಪಕ್ಕೆ ಗುರಿಯಾಗಿದ್ರು ಎಂದು ಹೇಳಲಾಗುತ್ತದೆ. ಸದ್ಯ ಜಗನ್ ಮಾಡಿದ ಈ ದುಷ್ಕೃತ್ಯಕ್ಕೆ ಇವನಿಗೂ ಶಾಪ ತಟ್ಟುತ್ತದೆ ಎಂದು ಭಕ್ತರು ಶಪಿಸುತ್ತಿದ್ದಾರೆ.

1 Comment
  1. kalorifer sobası says

    Bu soba, içindeki yakıtın yanmasıyla oluşan ısıyı doğrudan çevresine yayar ve aynı zamanda suyun ısınmasını sağlar.

Leave A Reply

Your email address will not be published.