Rootworm infestation: ಅಡಿಕೆ, ಕಬ್ಬು ಬೆಳೆಗೆ ಬೇರು ಹುಳುವಿನ ಕಾಟ: ಇದರ ಹತೋಟಿ ಕ್ರಮಗಳು ಹೇಗೆ?

Rootworm infestation: ಸಾಮಾನ್ಯವಾಗಿ ಅಡಿಕೆ(Areca Nut), ಕಬ್ಬು(Sugar cane) ಹಾಗೂ ಇನ್ನಿತರ ಬೆಳೆಗಳಿಗೆ(Crop) ಭಾದಿಸುವ ವಿವಿಧ ಕೀಟಗಳಲ್ಲಿ(Insects) ಬೇರು ಹುಳುವು ಪ್ರಮುಖವಾದುದು. ಈ ಕೀಟವು ಬೇರುಗಳಿಗೆ(Root) ತೀವ್ರ ಹಾನಿ ಮಾಡಿ ಬೆಳೆಯ ಉತ್ಪಾದನೆ ಸಾಮರ್ಥ್ಯವನ್ನು ಕಡಿಮೆ ಮಾಡುತ್ತವೆ.

ಬಯೊಪೈಟರ್ (ಈ ಪಿ ಎನ್)→ ಇದು ಒಂದು ಜೈವಿಕ ಕೀಟನಾಶಕಗಳಲ್ಲಿ ಜಂತು ಹುಳುಗಳು (ಈ ಪಿ ಎನ್) ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ ಏಕೆಂದರೆ, ಅವುಗಳು ತ್ವರಿತವಾಗಿ ಕೀಟಗಳನ್ನು ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಇವುಗಳು ಪರಿಸರ ಮತ್ತು ರೈತ ಸ್ನೇಹಿ ಜಂತು ಹುಳುಗಳಾಗಿವೆ. ಈ ಜಂತು ಹುಳುಗಳು ಬೇರು ಹುಳುವಿನ ಬಾಯಿ, ಉಸಿರಾಟದ ರಂಧ್ರಗಳು ಹಾಗೂ ಗುದದ್ವಾರದ ಮುಖಾಂತರ ಅವುಗಳ ದೇಹವನ್ನು ಪ್ರವೇಶಿಸಿ ತನ್ನಲ್ಲಿರುವ ಬ್ಯಾಕ್ಟೀರಿಯಾವನ್ನು ಸ್ರವಿಸಿ, ಬೇರು ಹುಳುವಿನ ದೇಹದಲ್ಲಿ ವಿಷಕಾರಿ ಪದಾರ್ಥವನ್ನು ಉತ್ಪತ್ತಿ ಮಾಡುತ್ತವೆ.

ಬಯೊಪೈಟರ್ ಬಳಸುವ ವಿಧಾನ:
→ ಒಂದು ಡ್ರಮ್ ನೀರಿನಲ್ಲಿ ಒಂದು ಕೆಜಿ ಬಯೊಪೈಟರ್ ಮಿಶ್ರಣ ಮಾಡಿ, ಹತ್ತು ನಿಮಿಷ ವೃತ್ತಾಕಾರವಾಗಿ ತಿರುಗಿಸಿ, ಪ್ರತಿ ಅಡಿಕೆ ಮರಕ್ಕೆ ಎರಡು ಲೀಟರ್ ನಂತೆ ಮರದ ಸುತ್ತ ಹಾಕಬೇಕು
→ ಬಯೊಪೈಟರ್ ಜೆಲ್ ರೂಪದ ಜೈವಿಕ ಕೀಟನಾಶಕ ವಾಗಿತ್ತು ನೂರು ಗ್ರಾಂ ಬಯೊಪೈಟರ್ ನಲ್ಲಿ ಸುಮಾರು ಐದು ಮಿಲಿಯನ್ ಜಂತು ಹುಳುಗಳು ಅಡಗಿರುತ್ತವೆ.

→ ಬಯೊಪೈಟರ್ ಮಣ್ಣಿಗೆ ಸೇರಿದ ನಂತರ, ಸಹಸ್ರಾರು ಸಂಖ್ಯೆಯಲ್ಲಿ ಜಂತು ಹುಳುಗಳು ಅಭಿವೃದ್ಧಿ ಗೊಂಡು ಬೇರು ಹುಳುಗಳು ಒಳ ಹೊಕ್ಕಿ, ತನ್ನಲ್ಲಿರುವ ಬ್ಯಾಕ್ಟೀರಿಯಾವನ್ನು ಸ್ರವಿಸಿ, ಬೇರು ಹುಳುವಿನ ದೇಹದಲ್ಲಿ ವಿಷಕಾರಿ ಪದಾರ್ಥವನ್ನು ಉತ್ಪತ್ತಿ ಮಾಡುತ್ತವೆ ಈ ಪದಾರ್ಥದ ಪರಿಣಾಮದಿಂದಾಗಿ ಬೇರು ಹುಳುಗಳು ಸಾವನ್ನಪ್ಪುತ್ತವೆ.
→ ಒಂದು ಎಕರೆ ಕಬ್ಬು ಬೆಳೆಗೆ ಸರಿ ಸುಮಾರು ಒಂದರಿಂದ ಒಂದೂವರೆ ಕೆಜಿ ಯಷ್ಟು ಬಯೊಪೈಟರ್ ನ ಅವಶ್ಯಕತೆವಿರುತ್ತದೆ.

Leave A Reply

Your email address will not be published.