Jagan Mohan Reddy: ‘ನಿಮ್ಮ ಧರ್ಮ ಯಾವುದೆಂದು ಬಹಿರಂಗಪಡಿಸಿ’ – NDA ಪ್ರಶ್ನೆ ಬೆನ್ನಲ್ಲೇ ತಿರುಪತಿ ದೇವಾಲಯ ಭೇಟಿಯನ್ನೇ ರದ್ಧು ಮಾಡಿದ ಜಗನ್ !! ಹಾಗಿದ್ರೆ ಜಗನ್ ಧರ್ಮ ಯಾವುದು?
Jagan Mohan Reddy: ತಿರುಪತಿ ಲಡ್ಡು(Tirupati Laddu) ಅಪವಿತ್ರ ವಿವಾದದ ಬೆನ್ನಲ್ಲೇ ಸೆ.28ಕ್ಕೆ ತಿರುಪತಿ ತಿರುಮಲ ದೇಗುಲಕ್ಕೆ ಭೇಟಿ ನೀಡುವೆ ಎಂದು ಮಾಜಿ ಸಿಎಂ ವೈ.ಎಸ್.ಜಗನ್‌ಮೋಹನ್ ರೆಡ್ಡಿ(Jagan Mohan Reddy) ಘೋಷಣೆ ಮಾಡಿದ್ದರು. ಆದರೆ ಈ ಬೆನ್ನಲ್ಲೇ NDA ಮಿತ್ರಪಕ್ಷಗಳು ಪ್ರತಿಕ್ರಿಯಿಸಿ ಜಗನ್ ಅವರೇ ತಿರುಮಲ ‘ದೇಗುಲ ಪ್ರವೇಶಿಸುವ ಮುನ್ನ ತಮ್ಮ ಧರ್ಮವನ್ನು ಬಹಿರಂಗಪಡಿಸಿ’ ಎಂದು ಆಗ್ರಹಿಸಿದೆ.
ಹೌದು, ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು(Chandrababu Naidu) ಅವರು ಕಳೆದ ವಾರ ಆರೋಪ ಮಾಡಿದ್ದರು. ಈ ಆರೋಪಕ್ಕೆ ತಿರುಗೇಟು ನೀಡಲು ದೇವಾಲಯದ ಆವರಣದಲ್ಲಿ ಪ್ರಾರ್ಥನೆಗೆ ವೈಎಸ್ ಆರ್ ಆರ್ ಪಿ ಕರೆ ನೀಡಿತ್ತು. ಇದರ ಭಾಗವಾಗಿ ಜಗನ್ ಮೋಹನ್ ರೆಡ್ಡಿ ಅವರ ತಿರುಮಲ ದೇವಾಲಯ ಭೇಟಿ ಕೂಡಾ ಹೆಚ್ಚಿನ ಕುತೂಹಲ ಕೆರಳಿಸಿತ್ತು. ಆದರೆ ಕೆಲವೇ ಸಮಯದಲ್ಲಿ ತಿರುಪತಿ ದೇವಾಲಯ ಭೇಟಿಯನ್ನು ರದ್ದುಗೊಳಿಸಲಾಗಿದೆ ಎಂದು ಜಗನ್ ಮೋಹನ್ ರೆಡ್ಡಿ ಅವರ ಆಪ್ತ ಮೂಲಗಳು ಖಚಿತಪಡಿಸಿದವು.
ಇದರ ಕಾರಣದ ಜಾಡು ಹಿಡಿದಾಗ ‘ದೇವಸ್ಥಾನ ಪ್ರವೇಶಿಸುವ ಮೊದಲು ತಮ್ಮ ಧರ್ಮವನ್ನು ಘೋಷಿಸಬೇಕು’ ಎಂಬ ಎನ್ ಡಿಎ ಮಿತ್ರಪಕ್ಷಗಳ ಬೇಡಿಕೆಯಿಟ್ಟಿರುವುದೇ ಕಾರಣ ಎನ್ನಲಾಗಿದೆ. ಆದರೆ ಜಗನ್ ಅವರು ತಾವೇಕೆ ದೇವಾಲಯ ಭೇಟಿ ರದ್ದುಮಾಡಿದೆ ಎಂಬುದರ ಬಗ್ಗೆ ಯಾವದೇ ಮಾಹಿತಿ ನೀಡಿಲ್ಲ. ಜೊತೆಗೆ ತಮ್ಮ ಧರ್ಮವನ್ನೂ ಘೋಷಿಸಿಲ್ಲ. ಇದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಜಗನ್ V/S ಚಂದ್ರಬಾಬು ನಾಯ್ಡು:
ಇನ್ನೂ ಮಾಜಿ ಸಿಎಂ ಜಗನ್ ತಿರುಪತಿ ವೆಂಕಟೇಶ್ವರ ದೇವಸ್ಥಾನ ಭೇಟಿಯನ್ನು ಮುಂದೂಡಿದ ಬಳಿಕ ಮತ್ತು ಹಾಲಿ ಮುಖ್ಯಮಂತ್ರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಜಗನ್ ತಿರುಪತಿ ಭೇಟಿ ರದ್ದುಗೊಳಿಸಿದ ಬಗ್ಗೆ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಪ್ರತಿಕ್ರಿಯಿಸಿದ್ದಾರೆ. ಜಗನ್ ತಿರುಮಲ ದೇವಸ್ಥಾನಕ್ಕೆ ತೆಲುಗು ದೇಶಂ ಪಕ್ಷ (ಟಿಡಿಪಿ) ಸರ್ಕಾರ ಅಡ್ಡಿಪಡಿಸಿದೆ ಎಂದು ಸುಳ್ಳು ಹರಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಅಲ್ಲದೆ ಯಾರಾದರೂ ನಿಮ್ಮನ್ನು ಹೋಗದಂತೆ ತಡೆದಿದ್ದಾರಾ? ನೋಟಿಸ್ ಇದ್ದರೇ ಮಾಧ್ಯಮದವರಿಗೆ ತೋರಿಸಿ, ಏಕೆ ಸುಳ್ಳುಗಳನ್ನು ಹರಡುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಜನರು ಸಂಪ್ರದಾಯಗಳನ್ನು ಅನುಸರಿಸಬೇಕು ಮತ್ತು ಏನು ಮಾಡಬೇಕೋ ಅದನ್ನು ಮಾಡಲೇಬೇಕು. ಪೂಜಾ ಸ್ಥಳಕ್ಕೆ ಭೇಟಿ ನೀಡಬೇಕಾದ್ರೆ, ಅಲ್ಲಿನ ಸಂಪ್ರದಾಯಗಳನ್ನು ಗೌರವಿಸಬೇಕು. ಸಂಪ್ರದಾಯಗಳನ್ನು ಮತ್ತು ಭಕ್ತರ ನಂಬಿಕೆಗಳನ್ನು ಅಗೌರವಗೊಳಿಸಬಾರದು. ಏಕೆಂದರೆ ಅಲ್ಲಿನ ನಂಬಿಕೆಗಳಿಗಿಂತ ಯಾರೂ ಮೇಲಲ್ಲ, ಯಾರೂ ದೇವರಲ್ಲ ಎಂದು ತಿರುಗೇಟು ನೀಡಿದ್ದಾರೆ.