Mysuru Dasara: ಮೈಸೂರು ದಸರಾ ನೋಡಲು ಡಬ್ಬಲ್ ಡೆಕ್ಕರ್ ಬಸ್ ರೆಡಿ! ಪ್ರವಾಸಿಗರಿಗೆ ಸ್ಪೆಷಲ್ ಪ್ಯಾಕೆಜ್ ಇಲ್ಲಿದೆ
Mysuru Dasara: ದಸರಾ ಮೋಜು ಈ ಬಾರಿ ತುಂಬಾ ಜೋರಾಗಿರುತ್ತೆ. ಅದಕ್ಕಾಗಿ ಮೈಸೂರು ದಸರಾ ನೋಡಲು ಡಬ್ಬಲ್ ಡೆಕ್ಕರ್ ಬಸ್ ರೆಡಿಯಾಗಿದೆ. ಹೌದು, ಪ್ರವಾಸಿಗರಿಗೆ ಸ್ಪೆಷಲ್ ಪ್ಯಾಕೆಜ್ ಆಫರ್ ನೀಡಲಾಗಿದ್ದು ದಸರಾವನ್ನು ನೀವೂ ಕಣ್ತುಂಬಿಕೊಳ್ಳಬಹುದು.
ಇನ್ನೇನು ಮೈಸೂರ ದಸರಾಗೆ (Dasara) ಕೆಲವೇ ದಿನಗಳು ಬಾಕಿ ಇದ್ದು, ಅದಕ್ಕಾಗಿ ಕರ್ನಾಟಕ ರಾಜ್ಯ ಅಭಿವೃದ್ಧಿ ಪ್ರವಾಸೋದ್ಯಮ ನಿಗಮದಿಂದ (KSTDC) ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ.
ವಿಶೇಷವಾಗಿ ಈ ಬಾರಿಯ ದಸರಾದಲ್ಲಿ (Mysuru Dasara) ಡಬ್ಬಲ್ ಡೆಕ್ಕರ್ (Double Decker) ಬಸ್ ನಲ್ಲಿ ಕುಳಿತು ಮೈಸೂರಿನ (Mysuru) ದಸರಾ ಕಾಣಬಹುದು. ಈ ಬಸ್ ಹಳೆ ಡಿಸಿ ಕಚೇರಿ, ಕ್ರಾಫರ್ಡ್ ಹಾಲ್, ಓರಿಯೆಂಟಲ್ ಸೆಂಟ್ರಲ್ ಲೈಬ್ರರಿ, ರಾಮಸ್ವಾಮಿ ವೃತ್ತ, ಸಂಸ್ಕೃತ ಪಾಠಶಾಲೆ, ಅರಮನೆ ದಕ್ಷಿಣ ದ್ವಾರ, ಜಯಮಾರ್ತಾಂಡ ಸರ್ಕಲ್ ಗೇಟ್, ಹಾರ್ಡಿಂಜ್ ಸರ್ಕಲ್, ಕೆಆರ್ ಸರ್ಕಲ್ , ಸೈಯಾಜಿರಾವ್ ವೃತ್ತ, ಆರ್ಯುವೇದ ವೈದ್ಯಕೀಯ ಕಾಲೇಜುವರೆಗೆ ಸುತ್ತಾಡಬಹುದು.
https://x.com/kstdc/status/1838873684062167464
ಒಬ್ಬರಿಗೆ ಟಿಕೆಟ್ ದರ ಕೇವಲ 250 ರೂ. (ಕೆಳಗಡೆ ಸೀಟ್) ಹಾಗೂ ಮೇಲ್ಬಾಗದ ಸೀಟ್‌ಗೆ ಒಬ್ಬರಿಗೆ 500 ರೂಪಾಯಿಯಾಗಿದೆ ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಚೇರ್ ಮನ್ ಶ್ರೀನಿವಾಸ್ ತಿಳಿಸಿದ್ದಾರೆ. ಇದರ ಜೊತೆಗೆ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಮೈಸೂರಿಗೆ ಬರುವ ಪ್ರವಾಸಿಗರಿಗೆ ಸ್ಪೆಷಲ್ ಪ್ಯಾಕೆಜ್ ವ್ಯವಸ್ಥೆ ಮಾಡಲಾಗಿದ್ದು, ಮೈಸೂರಿನಿಂದ ವಿವಿಧ ಸ್ಥಳಗಳಿಗೆ ದಿನಗಳ ಆಧಾರದ ಮೇಲೆ ಟೂರ್ ಪ್ಯಾಕೆಜ್ ಇದೆ.
ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕೆಎಸ್‌ಟಿಡಿಸಿ ನಿಯೋಜಿಸಿದ್ದು, ಮೈಸೂರು ದಸರಾ ಜೊತೆಗೆ ಜೋಗ್‌ಫಾಲ್ಸ್, ಗೋಕರ್ಣ-ಗೋವಾ, ನಂಜನಗೂಡು, ಬಂಡೀಪುರ-ಊಟಿ, ದೊಡ್ಡ ಬೆಟ್ಟ, ಶ್ರವಣಬೆಳಗೊಳ, ಬೇಲೂರು-ಹಳೇಬೀಡು, ಸೋಮನಾಥಪುರ, ಶಿವನಸುಮುದ್ರ, ತಲಕಾಡು ಹೀಗೆ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು.
ASIA4D >> Layanan Situs Resmi Slot Bet 200 Winrate Tertinggi Gampang JP