Dharmasthala sangha: ಅನೈತಿಕ ಕಾರ್ಯ ಮಾಡಿ ಹಣ ಕಟ್ಟಿ: ಧರ್ಮಸ್ಥಳ ಸಂಘದ ನೀಚ ಹೇಳಿಕೆ: ಮಂಡ್ಯದಲ್ಲಿ ದೂರು ಕೇಂದ್ರ ಸ್ಥಾಪನೆ

Dharmasthala sangha: ಇತ್ತೀಚೆಗೆ ಪ್ರತೀ ಗ್ರಾಮ ಮಟ್ಟದಲ್ಲೂ ಮಹಿಳೆಯರನ್ನು ಮೂಲವಾಗಿ ಇಟ್ಟುಕೊಂಡು ಸಂಘದ ಮುಖಾಂತರ ಸಾಲ ಕೊಡುವ ವ್ವವಸ್ಥೆ ನಾಯಿ ಕೊಡೆಗಳಂತೆ ಎದ್ದು ನಿಂತಿದೆ. ಇದರ ಜಾಲಕ್ಕೆ ಬಿದ್ದ ಅನೇಕ ಬಡ ಮಹಿಳೆಯರು ಪ್ರಾಣ ಕಳೆದುಕೊಳ್ಳುತ್ತಿದಾರೆ. ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಬಡ ಮಹಿಳೆಯರ ರಕ್ತ ಹೀರುತ್ತಿದೆ. ಇತ್ತೀಚೆಗೆ ಮಂಡ್ಯದ ಮಳವಳ್ಳಿಯಲ್ಲಿ ಶ್ರೀ ಧರ್ಮಸ್ಥಳ ಸಂಘದವರ ಕಿರುಕುಳಕ್ಕೆ ಒಳಗಾಗಿ ಮಹಾಲಕ್ಷ್ಮಿ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಮಂಡ್ಯ ಡಿಸಿ ಈ ಮಹತ್ವದ ತೀರ್ಮಾನ ಮಾಡಿದ್ದಾರೆ.

ಈ ರೀತಿಯ ಸಂಸ್ಥೆಗಳು ಲಾಭದ ಆಸೆಯಿಂದ ಕಾನೂನು ಮೀರಿ ಅಧಿಕ ಸಾಲ ನೀಡುತ್ತಿವೆ. ಅದರಲ್ಲೂ ಧರ್ಮಸ್ಥಳದ ಸಂಘದಿಂದ ಸಾಲ ತೆಗೆದ ಮಹಿಳೆಯರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದೆ. ಇದು ಆತ್ಮಹತ್ಯೆ ಹಾಗೂ ಊರು ಬಿಡುವಂತಹ ಪರಿಸ್ಥಿತಿಗಳನ್ನು ತಂದೊಡ್ಡುತ್ತಿದೆ.

ಈ ಸ್ವಸಹಾಯ ಸಂಘಗಳ ಸ್ವಾರ್ಥವನ್ನು ಅರಿತ ಮಳವಳ್ಳಿಯ ಕಾಂಗ್ರೆಸ್ ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಧರ್ಮಸ್ಥಳ ದೇವಾಲಯದ ಆಶ್ರಯದದಲ್ಲಿ ನಡೆಯುತ್ತಿರುವ ಧರ್ಮಸ್ಥಳ ಸಂಘ ಹೆಸರು ಮಾತ್ರ ಧರ್ಮಸ್ಥಳ, ಆದರೆ ಅಲ್ಲಿ ಧರ್ಮದ ಕೆಲಸವೇ ನಡೆಯುತ್ತಿಲ್ಲ. ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದ ಕಾರ್ಯ ವಹಿವಾಟಿನ ಬಗ್ಗೆ ಗಂಭೀರ ಆರೋಪವನ್ನು ಮಾಡಿದ್ದರು. ಹಾಗೂ ಮಹಿಳೆರಿಗೆ ಇಲ್ಲಿ ಅವರು ತೆಗೆದುಕೊಳ್ಳುವ ಸಾಲ ಹಾಗೂ ಅದಕ್ಕೆ ಮರುಪಾವತಿಸುವ ಬಡ್ಡಿ ದಂಧೆ ಬಗ್ಗೆ ಎಚ್ಚರಿಸಿದ್ದರು.

ಈಗಾಗಲೇ ಕೊರೋನಾ, ಬರಗಾಲ, ನಿರುದ್ಯೋಗದಂತ ಸಮಸ್ಯೆಗಳಿಂದ ಹಣಕಾಸಿನ ಸಮಸ್ಯೆ ಎದುರಿಸುತ್ತಿರೋ ಜನತೆ, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದುರಾಸೆಗೆ ಬಲಯಾಗುತ್ತಿದ್ದಾರೆ. ಸಾಮಾನ್ಯ ಜನರಿಗೆ ದುಬಾರಿ ಬಡ್ಡಿಯ ಸಾಲ ನೀಡುತ್ತಾ ಪ್ರತಿವಾರ ಮತ್ತು 15 ದಿನಕ್ಕೊಮ್ಮೆ ನಿಯಮಿತವಾಗಿ ಸಾಲ ಮತ್ತು ಬಡ್ಡಿಯನ್ನು ಪಾವತಿಸುವ ಒತ್ತಡಗಳನ್ನು ಹಾಕುತ್ತಿದ್ದಾರೆ.

ಅದರಲ್ಲೂ ಮೂರು ಬಿಟ್ಟ, ಜನರ ರಕ್ತ ಹೀರುತ್ತಿರುವ, ಜನರ ಕಣ್ಣಿಗೆ ಮಣ್ಣೆರಚಿ ನಮ್ಮದು ಸಮಾಜ ಸೇವೆ ಎಂದು ಹೇಳಿಕೊಳ್ಳುತ್ತಿರುವ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪುರುಷ ನೌಕರರು, ಮಹಿಳೆಯರ ಮನೆಗೆ ಮುಂಜಾನೆ ಮನೆ ಬಾಗಿಲಿನಲ್ಲಿ ಹಾಜರಿರುತ್ತಾರೆ. ಸಾಲ ಪಾವತಿಸದಿದ್ದರೆ ಕೆಲಸಕ್ಕೆ ಹೋಗಲು ಬಿಡದೆ ಅವರನ್ನು ನರ ರಾಕ್ಷಸರಂತೆ ಕಾಡುತ್ತಿದ್ದಾರೆ. ಅಲ್ಲದೆ ಹಣ ಕೊಡಲು ಅಸಾಯಕಳಾದ ಮಹಿಳೆಗೆ “ಯಾವುದಾದರೂ ಅನೈತಿಕ ಕಾರ್ಯ ಮಾಡಿ ಹಣ ತಂದುಕಟ್ಟಿ” ಎಂದು ಅವಮಾನ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಈ ನೀಚಗೆಟ್ಟ ಧರ್ಮಸ್ಥಳ ಸಂಘದ ಮೇಲಿದೆ.

ಈ ರೀತಿಯ ಧರ್ಮಸ್ಥಳ ಸಂಘದ ಕಾಟಕ್ಕೆ ಬೇಸತ್ತು ಮಂಡ್ಯ(Mandya)ದ ಮಹಿಳೆಯೊಬ್ಬರು ಮೈಕ್ರೋ ಫೈನಾನ್ಸ್ ಹಾವಳಿಯ ಜಾಲಕ್ಕೆ ಸಿಲುಕಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದರು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಇದೀಗ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಗಳನ್ನು ಪರಿಶೀಲಿಸಲು ದೂರು ಕೇಂದ್ರವನ್ನು ಸ್ಥಾಪಿಸಲು ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಒಬ್ಬ ನೋಡಲ್ ಸಿಬ್ಬಂದಿಯನ್ನು ನೇಮಕ ಮಾಡಲು ಮುಂದಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಕುಮಾರ್(DC Kumar) ಅವರು ಸೂಚಿಸಿದ್ದಾರೆ.

ಧರ್ಮಸ್ಥಳದಂತ ಸಂಘಗಳು ಗ್ರಾಮೀಣ ಪ್ರದೇಶದ ಬಡ ಮಹಿಳೆಯರನ್ನು ಟಾರ್ಗೆಟ್‌ ಮಾಡುತ್ತಿದ್ದು, ಅವರ ನಿಯಮಗಳು ಅವರ ಬದುಕನ್ನು ಉಸಿರಾಡದಂತಹ ದುಸ್ಥಿತಿಗೆ ತಂದಿಟ್ಟಿದೆ. ಇದನ್ನು ತಡೆಯಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಡ ಕುಟುಂಬಗಳಿಗೆ ಬಡ್ಡಿ ರಹಿತ, ದೀರ್ಘಾವಧಿ ಸಾಲವನ್ನು ದೊರಕಿಸಿ ಕೊಡುವ ಕೆಲಸ ಮಾಡಬೇಕು ಎಂಬ ಆಗ್ರಹ ಕೂಡ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಈ ಕ್ರಮ ಕೈಗೊಂಡಿದ್ದರು.

ಇನ್ನು ಮುಂದೆ ಸಾಲ ವಸೂಲಾತಿಗೆ ಹೋಗುವಂತಹ ಸಂದರ್ಭದಲ್ಲಿ ಸಿಬ್ಬಂದಿಯು ಜನರೊಂದಿಗೆ ಅತ್ಯಂತ ಸೌಜನ್ಯದಿಂದ ನಡೆದುಕೊಳ್ಳಬೇಕು. ಅವಾಚ್ಯ ಶಬ್ದಗಳಿಂದ, ಕಠಿಣ ಮಾತುಗಳಿಂದ ಅವರನ್ನು ನಿಂದಿಸಬಾರದು. ಈ ರೀತಿಯ ಯಾವುದಾದರೂ ಪ್ರಸಂಗಗಳು ಅಥವಾ ಘಟನೆಗಳು ಕಂಡು ಬಂದರೆ ಅವರ ವಿರುದ್ಧ ಸೂಕ್ತವಾದ ಹಾಗೂ ಕಠಿಣವಾದ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇಷ್ಟೇ ಅಲ್ಲದೆ ಸಾಲವನ್ನು ವಸೂಲಿ ಮಾಡಲು ಒಂದು ನಿಗದಿತ ಸಮಯವನ್ನು ಮಾಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಅವರ ಮನೆಗೆ ತೆರಳಿ ಅಲ್ಲಿ ಯಾರಿದ್ದಾರೆ, ಸಾರ್ವಜನಿಕವಾಗಿ ನಾವು ಹೇಗೆ ವರ್ತಿಸಬೇಕು ಎಂಬುದನ್ನು ಅರಿತು ಅವರೊಂದಿಗೆ ಸಾಲದ ಬಗ್ಗೆ ಚರ್ಚಿಸಬೇಕು. ಮನೆಯಲ್ಲಿ ಯಾರಾದರೂ ಪರಿಚಯಸ್ತರು, ನೆಂಟರು ಇದ್ದರೆ ಅವರ ಮುಂದೆ ಸಾಲದ ವಿಚಾರವನ್ನು ಚರ್ಚಿಸಬಾರದು.

ವೈಯಕ್ತಿಕವಾಗಿ ಅವರನ್ನು ಪಕ್ಕಕ್ಕೆ ಕರೆದು ಅವರೊಬ್ಬರಲ್ಲೇ ಈ ವಿಚಾರವನ್ನು ಚರ್ಚಿಸಬೇಕು. ಒಂದು ವೇಳೆ ಸಾಲದ ಕಂತನ್ನು ತೀರಿಸಲು ಆಗದಿದ್ದರೆ ಅವರಿಗೆ ಲಿಖಿತವಾಗಿ ನೋಟಿಸ್ ಅನ್ನು ಜಾರಿ ಮಾಡಬೇಕು. ಅವರ ಮಾನಹಾನಿಯಾಗುವಂತಹ ಯಾವುದೇ ರೀತಿಯ ಕೆಲಸಗಳನ್ನು ಮೈಕ್ರೋಫೈನಾನ್ಸ್ ಅವರು ಮಾಡಬಾರದು ಎಂದಿದ್ದಾರೆ. ಇನ್ನು ಮುಂದೆ ಆದರು ಧರ್ಮಸ್ಥಳ ಸಂಘ ಎಚ್ಚೆತ್ತುಕೊಳ್ಳಬೇಕು. ನುಡಿದಂತೆ ನಡೆಯುತ್ತೇವೆ. ದಾನ, ಧರ್ಮ, ಸಮಾಜ ಸೇವೆಯೇ ನಮ್ಮ ಕಾರ್ಯ ಎಂದು ಪುಂಗಿ ಬಿಡುವುದನ್ನು ಬಿಟ್ಟು ಜನರ ಏಳಿಗೆಗಾಗಿ ಶ್ರಮಿಸಿದರೆ ಮಾಡಿದ ಪಾಪಗಳಾದರು ತಕ್ಕ ಮಟ್ಟಿಗೆ ಪರಿಹಾರವಾಗಬಹುದು ಅನ್ನೋದು ಜನರ ವಿನಂತಿ.

Leave A Reply

Your email address will not be published.