BBK-11: ಬಿಗ್‌ ಬಾಸ್‌ ಇತಿಹಾಸದಲ್ಲೇ ಊಹಿಸಲಾಗದ ಅಚ್ಚರಿಯ ಅಭ್ಯರ್ಥಿ – ವಿವಾದಿತ ನಾಯಕಿ ಚೈತ್ರಾ ಕುಂದಾಪುರ ಈಗ ದೊಡ್ಮನೆ ಕಂಟೆಸ್ಟೆಂಟ್ !!

BBK-11: ಬಾಸ್ ಸರ್ಧಿಗಳ (Bigg Boss Contestant) ಹೆಸರು ಅನೌನ್ಸ್ ಆಗುತ್ತಿದೆ. ರಾಜಾ ರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿಯೇ ಸ್ಪರ್ಧಿಗಳ ಹೆಸರು ಅನೌನ್ಸ್ ಆಗುತ್ತಿದೆ. ಅಚ್ಚರಿ ಏನಂದ್ರೆ ಈ ಸಲ ಬಿಗ್ ಬಾಸ್(Bigg Boss), ನಾಡಿನ ಜನ ಊಹೆ ಕೂಡ ಮಾಡಿರದಂತ ವ್ಯಕ್ತಿಗಳನ್ನು ಕಂಟೆಸ್ಟೆಂಟ್ ಆಗಿ ಸೆಲೆಕ್ಟ್ ಮಾಡಿದೆ. ಅಂತೆಯೇ ಇದೀಗ ವಿವಾದಗಳಿಂದಲೇ ಸುದ್ದಿಯಾದ ಚೈತ್ರ ಕುಂದಾಪುರ ಕೂಡ ದೊಡ್ಮನೆಗೆ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಟ್ಟಿದ್ದಾರೆ!!

 

ಹೌದು, ಮೊದಲ ಸ್ಪರ್ಧಿಯಾಗಿ ಸತ್ಯ ದಾರವಾಹಿಯ ನಾಯಕಿ ಗೌತಮಿ ಜಾದವ್‌(Goutami Jadav) ಎಂಟ್ರಿ ಕೊಟ್ಟಿದ್ದಾರೆ. ಎರಡನೇ ಸ್ಪರ್ಧಿಯಾಗಿ ಲಾಯರ್‌ ಜಗದೀಶ್‌(Jagadish) ಎಂಟ್ರಿ ಕೊಟ್ಟಿದ್ದಾರೆ. ಒಂದಲ್ಲ ಒಂದು ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಲಾಯರ್‌ ಜಗದೀಶ್‌ ಅವರಿಗೆ ʼಬಿಗ್‌ಬಾಸ್‌ʼ ಆಫರ್‌ ಸಿಕ್ಕಿದೆ. ಮೂರನೇ ಸ್ಪರ್ಧಿಯಾಗಿ ವಿವಾದಗಳ ನಾಯಕಿ ಚೈತ್ರಾ ಕುಂದಾಪುರ(Chaitra Kundapura) ಬಿಗ್‌ ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ!!

ಕುಂದಾಪುರ ಮೂಲದ ಚೈತ್ರಾ ಈ ಬಾರಿ ಬಿಗ್‌ ಬಾಸ್‌ ಮನೆಯೊಳಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಕಳೆದ ಕೆಲ ಸಮಯದ ಹಿಂದಷ್ಟೇ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ ಆರೋಪ ಅವರ ಮೇಲೆ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು.

Leave A Reply

Your email address will not be published.