Rural games: ಕೆಸರು ಗದ್ದೆಯಲ್ಲಿ ಹೊರಳಾಡಿದರೆ ಏನು ಬಂತು? ಸಹಜ ಗದ್ದೆ ಸಾಗುವಳಿ ಕಾರ್ಯಕ್ರಮ ಮಾಡಿ

Rural games: ಭತ್ತದ ಗದ್ದೆ(Paddy Field) ಪೂರ ಹಾಳು ಬಿಟ್ಟು ಮಳೆಗಾಲದ(Rainy season) ಹೊತ್ತಿಗೆ ಒಂದೆರಡು ದಿನ ಕೆಸರು ಗದ್ದೆಯಲ್ಲಿ(Kesaru gadde) ಕುಣಿದು ಓಡಿದರೆ ಏನು ಬಂತು ಪ್ರಯೋಜನ ಅಲ್ಲವೇ? ಹಿಂದೆಲ್ಲ ಇಂತಹ ನಾಟಕಗಳಿರಲಿಲ್ಲ(Drama). ಸಹಜ ಗದ್ದೆ ಸಾಗುವಳಿ ಕಾರ್ಯಕ್ರಮಗಳೇ ಬಹುದೊಡ್ಡ ಸಮಾರಂಭಗಳಂತಿದ್ದವು. ಕೆಸರ ಗದ್ದೆ ಸಂಬಂಧ ಜೀವನದ(Life) ಅವಿಭಾಜ್ಯ ಅಂಗವಾಗಿತ್ತು.

ವಿದ್ಯೆ ಪಡೆದ ಯುವಕರು ಪಟ್ಟಣದ ದಾರಿ ಹಿಡಿದಾಗ. ರೈತರು ವಾಣಿಜ್ಯ ಬೆಳೆಗಳತ್ತ ಹೆಚ್ಚು ಆಕರ್ಷಿತರಾದಾಗ ಭತ್ತದ ಬೆಳೆಗೆ ಬೇಕಾದ ಕೂಲಿ ಮತ್ತು ಸಲಕರಣೆಗಳು ಬೆಲೆ ಹೆಚ್ಚಳವಾಯ್ತು. ಬೆಂಬಲಬೆಲೆ ಸಾಲದೇ ಭತ್ತದ ಗದ್ದೆಗಳು ಪಾಳು ಬೀಳತೊಡಗಿದವು.. ಅದು ಬೇಸಿಗೆಯಲ್ಲಿ ಆಟದ ಮೈದಾನವಾದವು. ಮಳೆಗಾಲದಲ್ಲಿ ಇಂತಹ ಕೆಸರು ಗದ್ದೆ ಕುಣಿತಕ್ಕೆ ತೆರೆದುಕೊಂಡವು. ಇಂತಹ ಕುಣಿತಗಳ ಬದಲು ಈ ಗದ್ದೆಗಳ ಕೆಸರು ಮಾಡಿ ನೆಟ್ಟಿ ನೆಡುವ ಕಾರ್ಯಕ್ರಮಗಳನ್ನು ಮಾಡಿ.

ಗದ್ದೆ ಹೂಡುವ, ಬೀಜ ಬಿತ್ತನೆಯ ಕಾರ್ಯಕ್ರಮ ಮಾಡಿ. ಅದರಿಂದ ಬರುವ ಉತ್ತಮ ಫಲಿತಾಂಶಕ್ಕಾಗಿ ಬಹುಮಾನಗಳ ಯೋಜನೆಗಳನ್ನು ಮಾಡಿದರೆ, ಯುವಕ ಯುವತಿಯರಿಗೆ ಮಾರ್ಗದರ್ಶನ ಮತ್ತು ಗದ್ದೆ ಬಯಲು ಅನ್ನದ ತಟ್ಟೆ ಎಂಬ ಸತ್ಯ ತಿಳಿಸಿದರೆ ಬದುಕು ಸಾರ್ಥಕವಾಗುತ್ತದೆ. ಅದು ಬಿಟ್ಟು ಇಂತಹ ಯಾವ ಕೆಸರಿನ ಕುಣಿತಗಳೂ ಖಂಡಿತ ನಮ್ಮ ಮಲೆನಾಡಿನ ಮೂಲ ಸಂಸ್ಕೃತಿಯನ್ನು ಉಳಿಸಲಾರವು.

ಎರಡು ದಿನ ಮಣ್ಣು ಕೆಸರು ಮಾಡಿ ಅಲ್ಲಿ ಕುಣಿದು ಕುಪ್ಪಳಿಸಿದವರು ಮುಂದಿನ ವರ್ಷದ ಕಾರ್ಯಕ್ರಮದವರೆಗೆ ಮತ್ತೆ ಗದ್ದೆಯತ್ತ ತಿರುಗಿಯೂ ನೋಡುವುದಿಲ್ಲ. ಮಲೆನಾಡಿನ ಜನ ತಮ್ಮ ಸಹಜ ಬೆಳೆಯ ಕ್ರಮ ಮತ್ತು ಪಾರಂಪರಿಕ ವ್ಯವಸಾಯ ಮರೆತು ಹೋದ ಕಾರಣವೇ ಇವತ್ತು ಅತಿಹೆಚ್ಚು ರೋಗಭಾಧೆ ಸ್ರಷ್ಟಿ ಆಗ್ತಿರೋದು. ಗದ್ದೆ ಬಯಲನ್ನು ನಮ್ಮ ಮನದಿಂದ ದೂರೀಕರಿಸಿದ್ದರಿಂದಲೇ ನಮ್ಮ ಅನ್ನದ ಬಟ್ಟಲು ವಿಷದ ಗೂಡಾಗುತ್ತಿರುವುದು.

ಕಾರ್ಯಕ್ರಮ ಆಯೋಜಕರು ಈ ಬಗ್ಗೆ ಗಮನ ಹರಿಸಬೇಕಾಗಿದೆ. ಕೇವಲ ಇಂದಿನ ಯುವಕ ಯುತಿಯರ ಮನರಂಜನೆಗಾಗಿ ಎರಡು ದಿನಗಳ ಕಾರ್ಯಕ್ರಮ ಮಾಡಿದರೆ ಇಂದಿನ ಪೀಳಿಗೆ ಏನು ಕಲಿತಂತಾಯ್ತು? ಇದರಿಂದ ನಮ್ಮ ನಾಡಿನ ಸಂಸ್ಕೃತಿ ಉಳಿಸುವ ದಾರಿಯಾಗಬೇಕು. ಕೇವಲ ಮನರಂಜನೆಗಾಗಿ ಮಾಡದೆ ಅದರಿಂದ ಒಂದಷ್ಟು ರೈತರಿಗೆ ಪ್ರಯೋಜನ ಹಾಗೂ ಯುವ ಪೀಳಿಗೆಗೆ ಇದರಿಂದ ಅರಿಯುವ ಕೆಲಸವಾದರೆ ಮಾಡಿದ ಕಾರ್ಯಕ್ರಮಗಳು ಸಾರ್ಥಕವಾಗಬಹುದು.

Leave A Reply

Your email address will not be published.