Mahisha Dasara: ಮಹಿಷ ದಸರಾದಿಂದ ಮೈಸೂರು ಹೆಸರು ಬದಲಾವಣೆ!

Mahisha Dasara: ಇನ್ನೇನು ದಸರಾ ಸಂಭ್ರಮ ಆರಂಭ ಅಗಲಿದೆ. ಈ ನಡುವೆ ಮಹಿಷಾ ದಸರಾದಿಂದ ( Mahisha Dasara) ಮೈಸೂರು (Mysuru) ಹೆಸರನ್ನು ಬದಲು ಮಾಡಲಾಗಿದೆ. ಹೌದು, ಮಹಿಷ ದಸರಾ ಆಚರಣಾ ಸಮಿತಿ ಬಿಡುಗಡೆಗೊಳಿಸಿರುವ ಆಹ್ವಾನ ಪತ್ರಿಕೆಯಲ್ಲಿ ಮೈಸೂರು ಬದಲಿಗೆ ಮಹಿಷೂರು, ಚಾಮುಂಡಿಬೆಟ್ಟ ಬದಲಿಗೆ ಮಹಿಷಾ ಬೆಟ್ಟ ಎಂದು ಹೆಸರು ಮುದ್ರಿಸಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

 

ಮಾಹಿತಿ ಪ್ರಕಾರ, ಸೆಪ್ಟೆಂಬರ್ 29 ರಂದು ಮಹಿಷಾ ದಸರಾ ನಡೆಸಲು ಸಮಿತಿ ಉದ್ದೇಶಿಸಿದ್ದು, ಆ ದಿನ ಚಾಮುಂಡಿ ಬೆಟ್ಟದಲ್ಲಿ (Chamundi Hill) ಮಹಿಷಾಸುರನಿಗೆ ಪುಷ್ಪಾರ್ಚನೆ ಮಾಡಿ ನಂತರ ಪುರಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಆದ್ರೆ ಮಹಿಷಾ ದಸರಾ ಹೆಸರಿನಲ್ಲಿ ಈಗಾಗಲೇ ಸಂಘರ್ಷ ಶುರುವಾಗಿದೆ.

ಒಂದು ವೇಳೆ ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಮುಂದಾದರೆ ನಾವು ಚಾಮುಂಡಿ ಚಲೋ ಮಾಡುತ್ತೇವೆ. ಮಹಿಷನ ಭಕ್ತರ ಕೈ ಮೇಲಾಗುತ್ತದೋ ಚಾಮುಂಡಿಯ ಭಕ್ತರ ಕೈ ಮೇಲಾಗುತ್ತದೋ ನೋಡಿಯೇ ಬಿಡೋಣ ಎಂದು ಮಹಿಷ ದಸರಾ ಆಚರಣೆ ಸಮಿತಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.

Leave A Reply

Your email address will not be published.