Wage Hike: ಅಕ್ಟೊಬರ್ 1 ರಿಂದ ಕಾರ್ಮಿಕರ ಕನಿಷ್ಠ ವೇತನ ದರ ಹೆಚ್ಚಳ: ಕೇಂದ್ರ ಸರ್ಕಾರ ಆದೇಶ

Wage Hike: ಕಾರ್ಮಿಕರಿಗೆ ಸಿಹಿ ಸುದ್ದಿ ಒಂದು ಇಲ್ಲಿದೆ. ಹೌದು, ಕಾರ್ಮಿಕರಿಗೆ ನೆರವಾಗುವ ಸಲುವಾಗಿ ಕೇಂದ್ರ ಸರ್ಕಾರ ಕನಿಷ್ಠ ವೇತನವನ್ನು (Wage Hike) ಹೆಚ್ಚಿಸಿದ್ದು, ಹೊಸ ದರಗಳು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ.

ಜೀವನ ವೆಚ್ಚವನ್ನು ನಿಭಾಯಿಸಲು ಕಾರ್ಮಿಕರಿಗೆ ಕಷ್ಟ ಕರವಾಗಿದ್ದು ಈ ಹಿನ್ನಲೆ ಕಾರ್ಮಿಕರ ಜೀವನ ಸುಧಾರಿಸುವ ನಿಟ್ಟಿನಲ್ಲಿ ಕನಿಷ್ಠ ವೇತನ ದರವನ್ನು 1,035 ರು.ವರೆಗೂ ಏರಿಕೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಮುಖ್ಯವಾಗಿ ವೇರಿಯಬಲ್ ಡಿಯರ್‌ನೆಸ್‌ ಅಲೊಯನ್ಸ್ ಪರಿಷ್ಕರಿಸುವ ಮೂಲಕ ಈ ಹೆಚ್ಚಳ ಮಾಡಲಾಗಿದೆ.

ಸದ್ಯ ಹೊಸ ದರ ಅಕ್ಟೊಬರ್ 1ರಿಂದ ಜಾರಿಗೆ ಬರಲಿದ್ದು, ಹೊಸ ವೇತನದ ಪ್ರಕಾರ ಕೌಶಲ್ಯರಹಿತ ಕೆಲಸಗಾರರಿಗೆ ದಿನಕ್ಕೆ 783 ರೂಪಾಯಿ, ಅರೆಕುಶಲ ಕೆಲಸಗಾರರಿಗೆ 868 ರೂಪಾಯಿ, ಕೌಶಲ್ಯ ಬೇಡುವ ಕೆಲಸಗಳಿಗೆ 954 ರೂಪಾಯಿ ಹಾಗೂ ಹೆಚ್ಚು ನುರಿತ ಕೆಲಸಗಳಿಗೆ 1035 ರೂಪಾಯಿ ನಿಗದಿ ಮಾಡಲಾಗಿದೆ. ಹೊಸ ವೇತನವನ್ನು ಕೌಶಲ್ಯ, ಭೌಗೋಳಿಕ ಪ್ರದೇಶದ ಆಧಾರದಲ್ಲಿ ನಿಗದಿಪಡಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಇದರಿಂದಾಗಿ ಕೃಷಿ ಸೇರಿದಂತೆ, ಕಟ್ಟಡ ನಿರ್ಮಾಣ, ಲೋಡಿಂಗ್, ಕಾವಲು, ಗುಡಿಸುವುದು, ಸ್ವಚ್ಛಗೊಳಿಸುವುದು, ಮನೆಗೆಲಸ, ಗಣಿಗಾರಿಕೆ ಮತ್ತು ವಿವಿಧ ಅಸಂಘಟಿತ ವಲಯದ ನೌಕರರಿಗೆ ಅನುಕೂಲವಾಗಲಿದೆ. ಮುಖ್ಯವಾಗಿ ವಿಡಿಎ ಅನ್ನು ಕೇಂದ್ರ ಸರ್ಕಾರ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದಲ್ಲಿ 6 ತಿಂಗಳ ಅವಧಿಗೆ ಅನ್ವಯಿಸುವಂತೆ ವರ್ಷದಲ್ಲಿ 2 ಬಾರಿ (ಏ.1 ಮತ್ತು ಅ.1) ಪರಿಷ್ಕರಿಸುತ್ತದೆ.

ಸದ್ಯ ವಿವಿಧ ವಲಯಗಳು, ವರ್ಗಗಳು ಮತ್ತು ಪ್ರದೇಶಗಳಿಗೆ ನವೀಕರಿಸಿದ ವೇತನ ದರಗಳ ಕುರಿತು ಹೆಚ್ಚಿನ ವಿವರಗಳನ್ನು ಮುಖ್ಯ ಕಾರ್ಮಿಕ ಆಯುಕ್ತರ (ಕೇಂದ್ರ) ವೆಬ್‌ಸೈಟ್‌ನಲ್ಲಿ clc.gov.in ನಲ್ಲಿ ಕಾರ್ಮಿಕರು ತಿಳಿದುಕೊಳ್ಳಬಹುದು.

Leave A Reply

Your email address will not be published.