Expensive Condom: ವಿಶ್ವದ ಅತೀ ದುಬಾರಿ ಕಾಂಡೋಮ್ ಇದು, ಬರೋಬ್ಬರಿ 44,000 ಬೆಲೆಯ ಈ ‘ನಿರೋದ್’ ವಿಶೇಷತೆ ಏನು ಗೊತ್ತಾ?
Expensive Condom: ಕಾಂಡೋಮ್‌ಗಳನ್ನು ಸುರಕ್ಷಿತ ಲೈಂಗಿಕ ಕ್ರಿಯೆಗಾಗಿ ಮತ್ತು ಗರ್ಭನಿರೋಧಕಕ್ಕಾಗಿ ಬಳಸಲಾಗುತ್ತದೆ. ಇದು ಬೇಕೆಂದಾಗ ಕಡಿಮೆ ಅಥವಾ ಕೈಗೆಟುವ ಬೆಲೆಯಲ್ಲಿ ಸಂಬಂಧಪಟ್ಟ ಶಾಪ್ಗಳಲ್ಲಿ ಇದು ಲಭ್ಯವಿರುತ್ತದೆ. ಅದೂ ಕೂಡ ವಿವಿಧ ನಮೂನೆಯ ಪ್ಲೇವರ್ ಗಳಲ್ಲಿ ದೊರಕುತ್ತದೆ. ಇದು ಸಾಮಾನ್ಯ ಕಾಂಡೋಮ್ ವಿಚಾರ ಆಯ್ತು. ಆದರೆ ವಿಶ್ವದ ದುಬಾರಿ ಬೆಲೆಯ ಕಾಂಡೋಮ್(Expensive Condom) ಯಾವುದು ಗೊತ್ತಾ? ಇಲ್ಲಾಂದ್ರೆ ಈ ಸುದ್ದಿ ಓದಿ. ಯಾಕೆಂದರೆ ಅದರ ವಿಶೇಷತೆ ಬಗ್ಗೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ.
ಮಾಹಿತಿಯ ಪ್ರಕಾರ, ಸ್ಪೇನ್‌ನ ಸಣ್ಣ ಪಟ್ಟಣದಲ್ಲಿ ಪೆಟ್ಟಿಗೆಯೊಂದು ಪತ್ತೆಯಾಗಿದೆ. ಈ ಪೆಟ್ಟಿಗೆಯಲ್ಲಿ ಕಾಂಡೋಮ್ ಕೂಡ ಪತ್ತೆಯಾಗಿದೆ. ಈ ಕಾಂಡೋಮ್ ಅನ್ನು ಅಧ್ಯಯನ ಮಾಡಿದ ನಂತರ, ಇದು 200 ವರ್ಷಗಳಷ್ಟು ಹಳೆಯದು ಎಂದು ಕಂಡುಬಂದಿದೆ. ಆದ್ರೆ ಆ ಸಮಯದಲ್ಲಿ ಉನ್ನತ ಮಟ್ಟದ ಸಮಾಜದಲ್ಲಿದ್ದರವರು ಮಾತ್ರ ಕಾಂಡೋಮ್‌ಗಳನ್ನು ಬಳಸುತ್ತಿದ್ದರು. ಸಾಮಾನ್ಯವಾಗಿ ಕಾಂಡೋಮ್ಗಳು 15 ಸೆಂ.ಮೀ ಉದ್ದವಿರುತ್ತವೆ ಎಂದು ಹೇಳಲಾಗುತ್ತದೆ. ಆದರೆ ಸ್ಪೇನ್ನಲ್ಲಿ ಸಿಕ್ಕ ಕಾಂಡೋಮ್ನ ಉದ್ದ 19 ಸೆಂ.ಮೀ ಎಂದು ಹೇಳಲಾಗಿದೆ.
ಅಷ್ಟೇ ಅಲ್ಲ 200 ವರ್ಷಗಳಷ್ಟು ಹಳೆಯದಾದ ಕಾಂಡೋಮ್ ಅನ್ನು ಇತ್ತೀಚೆಗೆ ವಿಶ್ವದ ಅತ್ಯಂತ ದುಬಾರಿ ಎಂದು ಗುರುತಿಸಲಾಗಿದೆ. ಇದು ಬರೋಬ್ಬರಿ 44,000ರೂಗೆ ಮಾರಾಟವಾಗಿದೆ. ಆಧುನಿಕ ಲ್ಯಾಟೆಕ್ಸ್ ಕಾಂಡೋಮ್‌ಗಳಿಗಿಂತ ಭಿನ್ನವಾಗಿರುವ, ಈ ಐತಿಹಾಸಿಕ ಗರ್ಭನಿರೋಧಕವನ್ನು ಕುರಿಗಳ ಕರುಳಿನಿಂದ ತಯಾರಿಸಲಾಗಿಯಂತೆ !!
ಅಂದಹಾಗೆ ಮೊದಲೇ ಹೇಳಿದಂತೆ ಇದು 18 ಅಥವಾ 19 ನೇ ಶತಮಾನದಷ್ಟು ಹಿಂದಿನದು. ಆ ಯುಗದಲ್ಲಿ, ಕಾಂಡೋಮ್‌ಗಳನ್ನು ಕುರಿ, ಹಂದಿ, ಕರುಗಳು ಮತ್ತು ಮೇಕೆಗಳಂತಹ ಪ್ರಾಣಿಗಳ ಕರುಳಿನಿಂದ ತಯಾರಿಸಲಾಗುತ್ತಿತ್ತಂತೆ. ಇದು ವಿಶ್ವದ ಅತ್ಯಂತ ದುಬಾರಿ ಮತ್ತು ಅಪರೂಪದ ಕಾಂಡೋಮ್ ಎಂದು ಹೇಳಲಾಗುತ್ತದೆ. ಈ ರೀತಿಯ ಕಾಂಡೋಮ್‌ಗಳನ್ನು ವಸ್ತುಸಂಗ್ರಹಾಲಯದಲ್ಲಿ ಮಾತ್ರ ಕಾಣಬಹುದು..