Distribution of property: ಪಿತ್ರಾರ್ಜಿತ ಆಸ್ತಿಯಲ್ಲಿ ಮಗ ಬಿಟ್ಟರೆ ಈ 4 ಜನರಿಗೆ ಹಕ್ಕಿದೆ ಎಂಬುದು ನಿಮಗೆ ಗೊತ್ತಾ? ಇಲ್ಲಿದೆ ನೋಡಿ ಕಾನೂನಿ ಡೀಟೇಲ್ಸ್
Distribution of property: ‘ಆಸ್ತಿ’ ವಿಚಾರ ಎಂಬುದು ಭಾರತದಲ್ಲಿ ಒಂದು ಕುಟುಂಬದ ಭಾಗವೇ ಆಗಿದೆ. ಕುಟುಂಬದಲ್ಲಿ ಎಲ್ಲರೂ ಕೂಡಿ ಸಹಬಾಳ್ಳವೆಯಿಂದ ಇದ್ದರೆ ಆಸ್ತಿ ಕೂಡ ಕೂಡೇ ಇರುತ್ತದೆ. ಆದರೆ ಕುಟುಂಬಗಳು ಒಡೆದಾಗ ಆಸ್ತಿಯೂ ಒಡೆಯಬೇಕಾಗುತ್ತದೆ(Distribution of property) ಆದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾರಿಗೆಲ್ಲಾ ಪಾಲಿದೆ ಎಂಬುದು ಇನ್ನೂ ಬಗೆಹರಿಯದ ಸಮಸ್ಯೆ.
ಹೌದು, ಇದುವರೆಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡುಮಕ್ಕಳಿಗೆ ಮಾತ್ರ ಹಕ್ಕಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೀಗ ಹೆಣ್ಣುಮಕ್ಕಳಿಗೂ ಹಕ್ಕಿದೆ ಎನ್ನಲಾಗಿದಿ. ಒಟ್ಟಿನಲ್ಲಿ ಭಾರತದಲ್ಲಿ ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ಹಲವು ರೀತಿಯ ನಿಯಮಗಳನ್ನು ಮಾಡಲಾಗಿದ್ದರೂ ಕೆಲವು ಗೊಂದಲಗಳು ಇದ್ದೇ ಇದೆ. ಹಾಗಿದ್ರೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾರಿಗೆಲ್ಲಾ ಪಾಲಿದೆ ಎಂದು ನೋಡೋಣ.
ಇತ್ತೀಚಿನ ವರದಿಯ ಪ್ರಕಾರ, ಪೂರ್ವಿಕರ ಆಸ್ತಿಯಲ್ಲಿ ಅಜ್ಜ, ತಂದೆ ಮತ್ತು ಸಹೋದರ ಷೇರುದಾರರಾಗಿದ್ದರೆ, ಅದರಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳೂ ಪಾಲು ಪಡೆಯುತ್ತಾರೆ ಎನ್ನಲಾಗಿದೆ. ಪೂರ್ವಜರ ಆಸ್ತಿಯಲ್ಲಿ ಪಾಲು ಪಡೆಯುವ ಹಕ್ಕು ಹುಟ್ಟಿನಿಂದಲೇ ಸಿಗುತ್ತದೆ. ಈ ಜನರು ತಮ್ಮ ಪೂರ್ವಜರ ಆಸ್ತಿಯ ಮೇಲೆ ಹಕ್ಕನ್ನು ಹೊಂದಿದ್ದಾರೆ.
* ಮಗ ಮತ್ತು ಮಗಳು:
ತಂದೆಯ ಆಸ್ತಿಯಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ತಂದೆಯ ಮರಣದ ನಂತರ ಈ ಹಕ್ಕು ಉಂಟಾಗುತ್ತದೆ.
* ಅಜ್ಜನ ಆಸ್ತಿ:
ಅಜ್ಜನ ಆಸ್ತಿಯ ಮೇಲೆ ತಂದೆಗೆ ಹಕ್ಕಿದೆ, ತಂದೆಯ ನಂತರ ಮಗನಿಗೆ ಹಕ್ಕಿದೆ.
* ಮೊಮ್ಮಕ್ಕಳು:
ಅಜ್ಜ ಅಥವಾ ತಂದೆಯ ಆಸ್ತಿಯನ್ನು ವಿಂಗಡಿಸಿದಾಗ ಮೊಮ್ಮಕ್ಕಳ ಹಕ್ಕುಗಳು ಉದ್ಭವಿಸುತ್ತವೆ ಮತ್ತು ಅವರ ಪೋಷಕರ ಪಾಲು ಅವರಿಗೆ ಉತ್ತರಾಧಿಕಾರದ ಆಧಾರವಾಗಿದೆ.