Kodi Mutt Swamiji predictions: ಮಣ್ಣಿನೊಳಗಿನ ವಿಷ ಜಂತುಗಳ ದಾಳಿಯಿಂದ ಮನುಷ್ಯ ಕುಲ ನಾಶ: ಭಯಾನಕ ಭವಿಷ್ಯ ನುಡಿದ ಕೋಡಿಶ್ರೀ!

Share the Article

Kodi Mutt Swamiji predictions: ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಆತಂಕ ಸೃಷ್ಟಿಸುವ ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ.

ಹೌದು, ಧಾರವಾಡದ ಕೋಡಿಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿಷ ಯುಕ್ತ ಗಾಳಿ ಹೆಚ್ಚಿದೆ, ಆದ್ದರಿಂದ ಜನರಲ್ಲಿ ಅನಾರೋಗ್ಯ ತೊಂದರೆಗಳು ಹೆಚ್ಚಾಗಿವೆ. ಇದೇ ಕಾರಣಕ್ಕೆ ಅಕಾಲಿಕ ಮರಣಗಳು ಹೆಚ್ಚಾಗುತ್ತವೆ. ಜೊತೆಗೆ ಭೂಮಿಯಿಂದ ಕೆಲವು ವಿಷ ಜಂತುಗಳು ಹೊರಗೆ ಬರುತ್ತವೆ. ಅವುಗಳು ಮನುಷ್ಯ ಕುಲವನ್ನೇ ನಾಶ ಮಾಡುತ್ತವೆ ಎಂದು ಭವಿಷ್ಯವನ್ನು ನುಡಿದಿದ್ದಾರೆ.
ಮುಖ್ಯವಾಗಿ ಪರಿಸರದಲ್ಲಿ ವಿಷ ವಾಯು ಬೀಸಿದ್ದರಿಂದ ಜನರ ಆರೋಗ್ಯದ ಮೇಲೆ ತೊಂದರೆಯಾಗುತ್ತಿದೆ. ಆಕಸ್ಮಿಕ ಮೃತ್ಯುಗಳು ಹೆಚ್ಚಾಗುತ್ತವೆ ಎಂದು ತಿಳಿಸಿದ್ದಾರೆ. ಈಗಾಗಲೇ ಕಾಡಿನಿಂದ ಪ್ರಾಣಿಗಳು ಊರಿಗೆ ನುಗ್ಗುವುದು ನಡೆದಿದೆ. ಸಮಯ ಕಳೆದಂತೆ ಇದು ಇನ್ನೂ ಹೆಚ್ಚಾಗುತ್ತದೆ. ಅದಲ್ಲದೆ ಜಾಗತಿಕ ಮಟ್ಟದಲ್ಲಿ ಯುದ್ಧ ಭೀತಿ ಇದೆ. ಜಾಗತಿಕ ಮಟ್ಟದಲ್ಲಿ ದೊಡ್ಡ ದೊಡ್ಡ ನಗರಗಳಿಗೆ ಆಪತ್ತು ಇದೆ ಎಂದು ಹೇಳಿದ್ದಾರೆ.

Leave A Reply

Your email address will not be published.