Cricket: ವರುಣನ ಅಬ್ಬರಕ್ಕೆ ಕಡಿಮೆ ಓವರ್ಗಳಲ್ಲೇ ಅಂತ್ಯಗೊಂಡ ಮೊದಲ ದಿನದ ಎರಡನೇ ಟೆಸ್ಟ್ ಪಂದ್ಯ
Cricket:ಕಾನ್ಪುರ : ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಎರಡನೇ ಟೆಸ್ಟ್ ಪಂದ್ಯವು ಇವತ್ತು ಮುಂಜಾನೆಯಿಂದಲೇ ಆರಂಭವಾಗಿತ್ತು. ನೆನ್ನೆ ರಾತ್ರಿ ಮಳೆ ಬಂದು ಪಿಚ್ ಮತ್ತು ಗ್ರಾಸ್ ಒದ್ದೆಯಾಗಿದ್ದ ಕಾರಣ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು.ಅವರು ನಿರೀಕ್ಷೆ ಮಾಡಿದಂತೆ ಪಿಚ್ ನಿಧಾನವಾಗಿ ವರ್ತಿಸುತ್ತ ಲೊ ಬೌನ್ಸರ್ಗಳ ಪ್ರಯೋಗಕ್ಕೆ ಸಹಕಾರಿಯಾಗಿತ್ತು.
ಓಪನರ್ಗಳಾಗಿ ಬಾಂಗ್ಲಾದೇಶದ ಆರಂಭಿಕ ಜೋಡಿ ಶಾಡ್ಮನ್ ಇಸ್ಲಾಂ ಮತ್ತು ಜಾಕಿರ್ ಹಸನ್ ಕಣಕ್ಕಿಳಿದರು.8.3 ಓವರ್ನಲ್ಲಿ ಅಕ್ಷದೀಪ್ ಬೌಲಿಂಗ್ ದಾಳಿಗೆ ಕಂಗೆಟ್ಟ ಯಾವುದೇ ರನ್ ಗಳಿಸದೇ ಜಾಕಿರ್ ಹಸನ್ ಯಶಸ್ವಿ ಜೈಸ್ವಾಲ್ಗೆ ಕ್ಯಾಚ್ ಕೊಟ್ಟು ಡಕ್ ಔಟ್ ಆಗಿ ಆರಂಭದಲ್ಲೇ ಬಾಂಗ್ಲಾದೇಶಕ್ಕೆ ಆಘಾತವಾಯಿತು.ತದನಂತರ ಕಣಕ್ಕಿಳಿದ ಮೊಮಿನುಲ್ ಹೇಕ್ ಅವರು ಶಾಡ್ಮನ್ ಜೊತೆಯಾಟ ಮುಂದುವರೆಯುತ್ತಿರುವಾಗ ಮತ್ತೊಮ್ಮೆ ಅಕ್ಷದೀಪ್ ಅಮೋಘವಾದ ಬೌಲಿಂಗ್ ದಾಳಿಗೆ ಆರಂಭಿಕ ಆಟಗಾರ ಶಾಡ್ಮನ್ LBW ಆಗಿ ವಿಕೆಟ್ ಒಪ್ಪಿಸಿದರು.
ನಾಲ್ಕನೇ ಕ್ರಮದಲ್ಲಿ ಬಂದ ಹೊಸಿನ್ ಶಾಂಟೋ ಮತ್ತು ಮೊಮೀನುಲ್ ಹೇಕ್ ಉತ್ತಮವಾಗಿ ಜೊತೆಯಾಟವಾಡಿ 51ರನ್ಗಳ ಕಲೆಹಾಕಿದರು ಅಷ್ಟರಲ್ಲಿ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅವರಿಗೆ ಶಾಂಟೋ ತಮ್ಮ ವಿಕೆಟ್ ಒಪ್ಪಿಸಿ ಪವಿಲಿಯನ್ ಕಡೆ ಮುಖ ಮಾಡಿದರು. ಐದನೇ ಬ್ಯಾಟ್ಸಮನ್ ಆಗಿ ಬಂದ ಮುಷ್ಫಿಕರ್ ರೆಹಮಾನ್ನೊಂದಿಗೆ ಆಡಲು ಆರಂಭಿಸಿದರು ಕೆಲವೇ ಹೊತ್ತಿನಲ್ಲಿ ವರುಣ ಅಬ್ಬರ ಆರಂಭವಾಯ್ತು. ಒಟ್ಟಾರೆ ಬಾಂಗ್ಲಾದೇಶ 35ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 107 ರನ್ಸ್ ಗಳಿಸಿದೆ.