Alprazolam Chemical: ಅಕ್ರಮ ರಾಸಾಯನಿಕ ತಯಾರಿಕೆ: ಹರ್ಬಲ್ ಹೆಲ್ತ್ ಕೇರ್ ಕಂಪೆನಿ ಮುಖ್ಯಸ್ಥನ ಬಂಧನ
Alprazolam Chemical: ಕಳೆದ ಎರಡು ದಿನಗಳ ಹಿಂದೆಯಷ್ಟೆ ಭಾರತದಲ್ಲಿ(India) ಪ್ರತಿಷ್ಠಿತ ಕಂಪೆನಿಗಳೂ ಸೇರಿದಂತೆ ಗುಣಮಟ್ಟದ ಮಾತ್ರೆಗಳನ್ನು(Tablet) ತಯಾರಿಸುತ್ತಿಲ್ಲ ಎಂಬ ವರದಿ(Report) ದೇಶದ ಜನರನ್ನು ಕಳವಳಕ್ಕೆ ಈಡುಮಾಡಿತ್ತು. ಇದೀಗ ವ್ಯಕ್ತಿಯ ಮನಸ್ಸು ಮತ್ತು ವರ್ತನೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ‘ಅಲ್ಪ್ರಜೋಲಂ’ (Alprazolam) ರಾಸಾಯನಿಕ(Chemical) ತಯಾರಿಸಿ, ಮಾರಾಟ ಮಾಡುತ್ತಿದ್ದ ಆರು ಮಂದಿಯನ್ನು ಬಂಧಿಸಲಾಗಿದೆ(Arrest).
ಪೊಲೀಸರ ಮಾಹಿತಿ ಪ್ರಕಾರ ಹರ್ಬಲ್ ಹೆಲ್ತ್‌ಕೇರ್ ಕಂಪನಿಯ ಸಿಇಒ ಸೇರಿದಂತೆ ಆರು ಮಂದಿಯನ್ನು ದೆಹಲಿ–ಎನ್‌ಸಿಆರ್‌ನಲ್ಲಿ ಬಂಧಿಸಲಾಗಿದೆ. ಹರಿಯಾಣದ ಹಿಸಾರ್‌ನಲ್ಲಿ ಕಾರ್ಯಚರಿಸುತ್ತಿರುವ, ‘ಬಯೋಕೇಸ್ ಫುಡ್ಸ್ ಅಂಡ್ ಎಕ್ಸ್‌ಟ್ರಾಕ್ಟ್ಸ್ ಪ್ರೈವೇಟ್ ಲಿಮಿಟೆಡ್’ ಘಟಕದಲ್ಲಿ ಈ ವಿಷಯುಕ್ತ ರಾಸಾಯನಿಕವನ್ನು ಅಕ್ರಮವಾಗಿ ತಯಾರಿಸಲಾಗುತ್ತಿತ್ತು ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಅರೋಪಿಗಳನ್ನು ಬಂಧಿಸಿದ್ದಾರೆ.
ದುರಂತ ಅಂದರೆ ಬಂಧಿತರು ಹಾಗೂ ಈ ಘಟಕದ ಮಾಲೀಕ ಡಾ. ನವೀನ್ ಅಗರವಾಲ್ ‘ಇಂಡಿಯನ್ ಅಚೀವರ್ಸ್’ ಹಾಗೂ ‘ಸಿಇಒ ಆಫ್ ದಿ ಇಯರ್’ ಪ್ರಶಸ್ತಿಗಳನ್ನು ಕಳೆದ ವರ್ಷ ಪಡೆದಿದ್ದರು ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಅಲ್ಲದೆ ಔಷಧ ಕಂಪನಿ ‘ಶಕ್ತಿ ಎಂಟರ್‌ಪ್ರೈಸಸ್ ಲಿಮಿಟೆಡ್’ ಮಾಲೀಕ ಆನಂದ್ ಕುಮಾರ್ ಅಲಿಯಾಸ್ ಸೋನು ಎಂಬಾತನನ್ನೂ ಕೂಡ ಬಂಧಿಸಲಾಗಿದೆ ಎಂದು ಅಪರಾಧ ವಿಭಾಗದ ಡಿಸಿಪಿ ಅಮಿತ್ ಗೋಯಲ್ ಹೇಳಿದ್ದಾರೆ.
ಈ ದುಷ್ಕೃತ್ಯಕ್ಕೆ ದೀಪಕ್ ಕುಮಾರ್, ರಾಜೇಂದ್ರ ಕುಮಾರ್ ಮಿಶ್ರಾ, ರಾಮ್ ಆಶಿಷ್ ಮೌರ್ಯ ಮತ್ತು ಮುಕೇಶ್ ಕುಮಾರ್ ಇವರೆಲ್ಲ ರಾಸಾಯನಿಕ ಸರಬರಾಜು ಮಾಡುತ್ತಿದ್ದರು ಎಂದು ಡಿಸಿಪಿ ಹೇಳಿದ್ದಾರೆ. Nutriley Pvt. Ltd ಕಂಪನಿಯನ್ನೂ ಹೊಂದಿರುವ ನವೀನ್ ಅಗರವಾಲ್ ಎಂಬಾತ ಕೂಡ 2023ರಲ್ಲಿ ‘ಇಂಡಿಯನ್ ಅಚೀವರ್ಸ್’ ಅವಾರ್ಡ್ ಪಡೆದಿದ್ದ.
ದೆಹಲಿಯ ಬ್ರಿಜ್‌ಪುರಿಯಲ್ಲಿ ರಾಜೇಂದರ್ ಪ್ರಸಾದ್ ಮಿಶ್ರಾ ಅಲಿಯಾಸ್ ಆರ್.ಪಿ. ಎಂಬಾತನನ್ನು ಕಳೆದ ಮಾರ್ಚ್ 23ರಂದು ಪೊಲೀಸರು ಬಂಧಿಸಿದ್ದರು. ಮೂಲಕ ‘ಅಲ್ಪ್ರಜೋಲಂ’ ಮಾರಾಟ ಜಾಲವನ್ನು ಭೇದಿಸಿದ್ದರು. ದಾಳಿ ವೇಳೆ ಆತನಿಂದ ಸುಮಾರು 18 ಕೆ.ಜಿ.ಯಷ್ಟು ಅಲ್ಪ್ರಜೋಲಂ ಪೌಡರ್ ವಶಕ್ಕೆ ಪಡೆಯಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.