Tirumala: ತಿರುಪತಿಯಲ್ಲಿ ಈ 4 ಕುಟುಂಬಗಳದ್ದೇ ದರ್ಬಾರ್- ಈ ಅರ್ಚಕರಿಗೆ ಸಿಗುವ ಸಂಬಳ, ಸೌಲಭ್ಯಗಳೇನು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ

Tirumala: ದೇಶದ ಅತೀ ಪ್ರಮುಖ ಧಾರ್ಮಿಕ ಕೇಂದ್ರ ತಿರುಪತಿ. ದಿನನಿತ್ಯ ಲಕ್ಷಾಂತರ ಭಕ್ತರು ಬಂದು ವೆಂಕಟೇಶ್ವರನ ದರ್ಶನ ಪಡೆದು ಪುನೀತರಾಗುತ್ತಾರೆ. ದಿನದ 24 ಗಂಟೆಯೂ ಸ್ವಾಮಿ ಜನರಿಗೆ ದರ್ಶನ ಭಾಗ್ಯ ಕರುಣಿಸಿದ್ದಾನೆ. ಯಾವಾಗ ಹೋದರೂ ತಿರುಮಲ ಬೆಟ್ಟ ಜನಜಂಗುಳಿಯಿಂದ ತುಂಬಿ ತುಳುಕುತಿರುತ್ತದೆ. ಇತ್ತೀಚೆಗೆ ಪ್ರಸಾದದ ವಿಚಾರದಲ್ಲಿ ಕೆಲವು ಗೊಂದಲಗಳಾದರು ಭಕ್ತರು ಭಕ್ತಿಯಿಂಧಲೇ ಕ್ಷೇತ್ರಕ್ಕೆ ಬರುವುದು ನಿಜಕ್ಕೂ ಹೆಮ್ಮೆ. ಈ ನಡುವೆ ತಿರುಪತಿ ದೇವಾಲಯದ ಕೆಲವು ರಹಸ್ಯ ವಿಚಾರಗಳು ಜನರಿಗೆ ತಲುಪುತ್ತಿವೆ. ಅಂತೆಯೇ ಇಲ್ಲಿನ ಅರ್ಚಕರ ಸಂಬಳ, ಸೌಲಭ್ಯಗಳ ಕುರಿತೂ ಮಾಹಿತಿಗಳು ಬಹಿರಂಗವಾಗಿವೆ.

 

4 ಅರ್ಚಕ ಕುಟುಂಬಗಳ ಅಧಿಪತ್ಯ:
ತಿರುಪತಿ(Tirumala) ದೇವಸ್ಥಾನದಲ್ಲಿ ಮುಂಜಾನೆಯಿಂದ ಸಂಜೆಯವರೆಗೆ ನಡೆಯುವ ಧಾರ್ಮಿಕ ವಿಧಿವಿಧಾನಗಳನ್ನು ತಿರುಪತಿಯಲ್ಲಿ 4 ಕುಟುಂಬದವರು ನೆರವೇರಿಸುತ್ತಾರೆ. ಅವುಗಳೆಂದರೆ ಪೈಡಿಪಲ್ಲಿ, ಗೊಲ್ಲಪಲ್ಲಿ, ಪೆದ್ದಿಂತಿ ಮತ್ತು ತಿರುಪತಮ್ಮ. ಈ ಕುಟುಂಬಗಳು ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ತಲೆಮಾರುಗಳಿಂದ ಧಾರ್ಮಿಕ ವಿಧಿಗಳನ್ನು ನಡೆಸಿಕೊಂಡು ಬರುತ್ತಿವೆ. ಈ ನಾಲ್ಕು ಕುಟುಂಬಗಳ 23 ಪುರೋಹಿತರು ತಿರುಪತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡುತ್ತಾರೆ. ದೇವಾಲಯದ ನಿಜವಾದ ಧಾರ್ಮಿಕ ಶಕ್ತಿ ಆ ಕುಟುಂಬಗಳ ಕೈಯಲ್ಲಿಯೇ ಇದೆ. ಇದಲ್ಲದೇ ತಿರುಪತಿ ದೇವಸ್ಥಾನದಲ್ಲಿ ವಂಶಪಾರಂಪರ್ಯವಲ್ಲದ 35 ಮಂದಿ ಅರ್ಚಕರಿದ್ದಾರೆ.

ಈ ಕುಟುಂಬದ ಜನರನ್ನು ಅರ್ಚಕರು, ಮಿರಾಸಿ ಕುಟುಂಬ ಅಥವಾ ಅನುವಂಶಿಕ ಪುರೋಹಿತರು ಎಂದು ಕರೆಯಲಾಗುತ್ತದೆ. ಈ ಕುಟುಂಬಗಳು ನೂರಾರು ವರ್ಷಗಳಿಂದ ತಿರುಮಲ ದೇವಸ್ಥಾನ ಮತ್ತು ಗೋವಿಂದರಾಜ ಸ್ವಾಮಿ ದೇವಸ್ಥಾನದೊಂದಿಗೆ ಸಂಬಂಧ ಹೊಂದಿವೆ ಎಂದು ನಂಬಲಾಗಿದೆ. ಈ ಕುಟುಂಬಗಳ ಸದಸ್ಯರು ಸಾಂಪ್ರದಾಯಿಕವಾಗಿ ದೇವಾಲಯದ ಆಚರಣೆಗಳು ಮತ್ತು ಪದ್ಧತಿಗಳ ಪಾಲಕರಾಗಿ ಕಾಣುತ್ತಾರೆ.

ತಿರುಪತಿ ದೇಗುಲದ ಒಟ್ಟು ಆದಾಯದಲ್ಲಿ ಈ ನಾಲ್ಕು ಕುಟುಂಬಗಳಿಗೆ ಯಾವಾಗಲೂ ಪಾಲು ಇದ್ದೇ ಇರುತ್ತದೆ. ಅಷ್ಟೇ ಅಲ್ಲ, ಈ ನಾಲ್ಕು ಕುಟುಂಬಗಳ ಜನರು ಟಿಟಿಡಿಯಲ್ಲಿ ಪ್ರಭಾವಿ ಹುದ್ದೆಗಳನ್ನೂ ಹೊಂದಿದ್ದಾರೆ. ಸದ್ಯ ಈ ಕುಟುಂಬಗಳ ಸಂಪತ್ತು ಕೋಟಿಗಟ್ಟಲೆ ಇದೆ ಎಂದು ನಂಬಲಾಗಿದೆ. ಈ ನಾಲ್ಕು ಅರ್ಚಕ ಕುಟುಂಬದ ಜನರು ಬಹಳ ಆಡಂಬರ ಮತ್ತು ಸಿರಿವಂತಿಕೆಯ ಪ್ರದರ್ಶನದಿಂದ ಬದುಕುತ್ತಾರೆ. ಎರಡನೆಯದಾಗಿ, ಅವರು ಸಾಕಷ್ಟು ಪ್ರಭಾವವನ್ನೂ ಹೊಂದಿದ್ದಾರೆ. ಅವರಿಗೆ ಮುಖ್ಯಮಂತ್ರಿಯನ್ನು ನೇರವಾಗಿ ಸಂಪರ್ಕಿಸುವ ಅಧಿಕಾರವೂ ಇದೆ. ಅವರು ದೇಶಾದ್ಯಂತ ಪ್ರಭಾವಿ ವ್ಯಕ್ತಿಗಳ ಸಂಪರ್ಕವನ್ನೂ ಹೊಂದಿದ್ದಾರೆ.

ಅರ್ಚಕರ ಸಂಬಳವೆಷ್ಟು?
ದೇವಾಲಯದ ಪ್ರಧಾನ ಅರ್ಚಕರು ಆನುವಂಶಿಕ ಕುಟುಂಬದವರಾಗಿದ್ದಾರೆ ಮತ್ತು ಅವರ ಮಾಸಿಕ ವೇತನ ಸುಮಾರು 82,000 ರೂಪಾಯಿ ಆಗಿದೆ, ಇಷ್ಟು ಮಾತ್ರವಲ್ಲದೇ ವಿವಿಧ ಸೌಲಭ್ಯಗಳನ್ನು ಸಹ ಅವರಿಗೆ ನೀಡಲಾಗಿದೆ. ಇತರ ಪ್ರಧಾನ ಅರ್ಚಕರು ಸಹ ಅನುವಂಶಿಕರಾಗಿದ್ದು, ಅವರು ಪ್ರತಿ ತಿಂಗಳು ಸಂಬಳವಾಗಿ 52,000 ರೂಪಾಯಿ ಪಡೆಯುತ್ತಾರೆ. ವಿವಿಧ ಭತ್ಯೆಗಳು ಬೇರೆಯೇ ಇದ್ದು, ಅವರಿಗೆ ಅನುಭವದ ಆಧಾರದ ಮೇಲೆ 30,000 ರಿಂದ 60,000 ರೂಪಾಯಿ ನೀಡಲಾಗುತ್ತದೆ. ಇನ್ನು, ಇಲ್ಲಿನ ಅರ್ಚಕರಾಗಿದ್ದ ರಾಮಣ್ಣ ದೀಕ್ಷಿತುಲು ಅವರ ಸೇವೆಗೆ ಪ್ರತಿಯಾಗಿ 30 ಲಕ್ಷ ರೂಪಾಯಿ ನೀಡಿದಂತೆ ಕೆಲವು ವಂಶಪಾರಂಪರ್ಯ ಅರ್ಚಕರಿಗೂ ಅವರ ಸೇವೆಗಾಗಿ ಭಾರಿ ಮೊತ್ತವನ್ನು ನೀಡಲಾಗುತ್ತದೆ.

ಅರ್ಚಕರಿಗೆ ಸಿಗೋ ಭತ್ಯೆಗಳು ಮತ್ತು ಸೌಲಭ್ಯಗಳು:
* ಎಲ್ಲಾ ಪುರೋಹಿತರಿಗೆ ವಾಸಿಸಲು ಮನೆಗಳನ್ನು ದೇಗುಲದ ವತಿಯಿಂದಲೇ ನೀಡಲಾಗುತ್ತದೆ.
* ಎಲ್ಲಾ ಅರ್ಚಕರು ಸಂಬಳದ ಹೊರತಾಗಿ ವಿವಿಧ ರೀತಿಯ ಭತ್ಯೆಗಳನ್ನು ಪಡೆಯುತ್ತಾರೆ
* ಟಿಟಿಡಿ ಎಲ್ಲಾ ಅರ್ಚಕರು ಮತ್ತು ಅವರ ಕುಟುಂಬಗಳ ಆರೋಗ್ಯ ವೆಚ್ಚವನ್ನು ಭರಿಸುತ್ತದೆ, ಟಿಟಿಡಿ ತನ್ನದೇ ಆದ ಅತ್ಯಂತ ಆಧುನಿಕ ಆಸ್ಪತ್ರೆಯನ್ನು ಸಹ ಹೊಂದಿದೆ.
* ಎಲ್ಲಾ ಅರ್ಚಕರಿಗೂ ರಜೆಯ ಸೌಲಭ್ಯವೂ ಇದೆ.
* ಎಲ್ಲಾ ಪುರೋಹಿತರು ಕೆಲಸ ಮಾಡಲು ನಿಶ್ಚಿತ ವಯಸ್ಸನ್ನು ಹೊಂದಿದ್ದಾರೆ, ನಂತರ ಅವರು ನಿವೃತ್ತರಾಗುತ್ತಾರೆ. ನಂತರ ಅವರು ನಿವೃತ್ತಿ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ.
* ಪ್ರತಿಯೊಬ್ಬ ಅರ್ಚಕನು ತನ್ನ ಕುಟುಂಬ ಅಥವಾ ಆಪ್ತರನ್ನು ತನ್ನ ಕೋಟಾದಲ್ಲಿ ವಿಐಪಿ ಸೌಲಭ್ಯದೊಂದಿಗೆ ಉಚಿತವಾಗಿ ದೇವಸ್ಥಾನದ ದರ್ಶನಕ್ಕೆ ಕರೆತರಬಹುದು.

ಪ್ರಸ್ತುತ ದೇವಸ್ಥಾನದ ಪ್ರಧಾನ ಅರ್ಚಕರು ಯಾರು?
ಸದ್ಯ ತಿರುಪತಿ ದೇವಸ್ಥಾನದ ಪ್ರಧಾನ ಅರ್ಚಕ ಗೊಲ್ಲಪಲ್ಲಿ ಪಾರಂಪರಿಕ ಕುಟುಂಬಕ್ಕೆ ಸೇರಿದ ಎ.ವೇಣುಗೋಪಾಲ ದೀಕ್ಷಿತುಲು ಅವರು. ಇವರು 2018 ರಲ್ಲಿ ಪ್ರಧಾನ ಅರ್ಚಕರಾಗಿ ನೇಮಕವಾದರು.

 

3 Comments
  1. slot gacor says

    Daftar Resmi Sekarang Juga https://puskesmas-kaliwungu.kuduskab.go.id/wp-content/data/ Terpercaya

  2. Spor toto kaçak kupon says

    Spor toto kaçak kupon SEO çalışmaları sayesinde web sitemizin trafiği katlandı. https://www.royalelektrik.com/istanbul-elektrikci/

  3. situs toto says

    Daftar Resmi Sekarang Juga situs toto Terpercaya

Leave A Reply

Your email address will not be published.