Mangaluru: ಖಾಲಿಯ ರಫೀಖ್‌ ಕೊಲೆ ಪ್ರಕರಣ; ನಾಲ್ವರು ಆರೋಪಿಗಳ ದೋಷಮುಕ್ತಗೊಳಿಸಿ ಕೋರ್ಟ್‌ ಆದೇಶ

Mangaluru: 2017 ಉಳ್ಳಾಲದ ಕೋಟೆಕಾರ್‌ನಲ್ಲಿ ನಡೆದಿದ್ದ ರೌಡಿ ಖಾಲಿಯ ರಫೀಕ್‌ನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.

 

ನೂರಲಿ, ಜಿಯ ಆಲಿಯಾಸ್‌ ಇಸುಬು ಶಿಯಾದ್‌, ರಶೀದ್‌ ಮತ್ತು ಮಜೀಬ್‌ ಆಲಿಯಾಸ್‌ ಕಲ್ಲಟ್ರ ನಜೀಬ್‌ ಕೆ.ಎ.ದೋಷಮುಕ್ತಗೊಂಡ ವ್ಯಕ್ತಿಗಳು.

ಫೆ.2,2017 ರಂದು ಖಾಲಿಯಾ ರಫೀಕ್‌ ಮತ್ತು ಆತನ ಸ್ನೇಹಿತರು ಸಂಚಾರ ಮಾಡುತ್ತಿದ್ದ ಕಾರಿಗೆ ಕೋಟೆಕಾರ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರ್‌ ಲಾರಿಯನ್ನು ಡಿಕ್ಕಿ ಹೊಡೆಸಿ, ಕಾರಿನಿಂದ ಇಳಿದು ಪೆಟ್ರೋಲ್‌ ಬಂಕ್‌ ಕಡೆಗೆ ಓಡುತ್ತಿದ್ದ ಖಾಲಿಯ ರಫೀಕ್‌ನನ್ನು ಬೆನ್ನಟ್ಟಿಕೊಂಡು ಹೋಗಿದ್ದ ಆರೋಪಿಗಳನ್ನು ನಂತರ ಪಿಸ್ತೂಲ್‌ನಿಂದ ಗುಂಡು ಹಾರಿಸಿ, ತಲವಾರಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಈ ಕುರಿತು ಪ್ರಕರಣ ದಾಖಲಾಗಿತ್ತು.

ಒಟ್ಟು 9 ಮಂದಿ ಆರೋಪಿಗಳನ್ನು ಈ ಪ್ರಕರಣದಲ್ಲಿ ಗುರುತಿಸಲಾಗಿದು, ಇದರಲ್ಲಿ ನಾಲ್ವರನ್ನು ನ್ಯಾಯಾಲವು ದೋಷಮುಕ್ತಗೊಳಿಸಿದೆ. ಇದರಲ್ಲಿ ಓರ್ವ ಆರೋಪಿ ಮೃತ ಹೊಂದಿದ್ದಾನೆ. ಇನ್ನೋರ್ವ ಆರೋಪಿ ವಿಚಾರಣೆಗೆ ಹಾಜರಾಗದೆ, ತಲೆಮರೆಸಿದ್ದಾನೆ. ಉಳಿದ ಆರೋಪಿಗಳ ಬಂಧನ ಇನ್ನೂ ಆಗಿಲ್ಲ.

Leave A Reply

Your email address will not be published.