Umrila Mathodnkar Divorce: ರಂಗೀಲಾ ಬೆಡಗಿಯಿಂದ 8 ವರ್ಷದ ದಾಂಪತ್ಯಕ್ಕೆ ಬ್ರೇಕ್‌

ಊರ್ಮಿಳಾ ಮಾತೋಂಡ್ಕರ್ ಅವರ ಪತಿ ಮೊಹ್ಸಿನ್ ಅಖ್ತರ್ ಮಿರ್ ಯಾರು?

Umrila Mathodnkar Divorce: ಊರ್ಮಿಳಾ ಮಾತೋಂಡ್ಕರ್ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದು ನಂತರ ಟಾಪ್‌ ನಟಿಯಾಗಿ ಮಿಂಚಿದವರು. ‘ರಂಗೀಲಾ’, ‘ಸತ್ಯ’, ‘ಭೂತ’, ‘ಕೌನ್’ ಸೇರಿದಂತೆ ಹಲವು ಚಿತ್ರಗಳಲ್ಲಿ ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ಆಳಿದವರು ಊರ್ಮಿಳಾ. ಇದೀಗ ಇವರ ವಿಚ್ಛೇದನದ ಸುದ್ದಿ ಮುನ್ನೆಲೆಗೆ ಬಂದಿದೆ. ಮದುವೆಯಾದ ಎಂಟು ವರ್ಷಗಳ ನಂತರ ನಟಿ ತನ್ನ ಪತಿ ಮೊಹ್ಸಿನ್ ಅಖ್ತರ್ ಮಿರ್‌ನಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಂದ ಹಾಗೆ 2016ರಲ್ಲಿ ಇಬ್ಬರೂ ಮದುವೆಯಾಗಿದ್ದರು.

 

ಈ ಜೋಡಿ ಅಂತರ್ ಧರ್ಮೀಯ ವಿವಾಹ ಮಾಡಿಕೊಂಡು ಸಾಕಷ್ಟು ಸುದ್ದಿ ಮಾಡಿತ್ತು. ಕುತೂಹಲಕಾರಿ ಅಂಶವೆಂದರೆ ಊರ್ಮಿಳಾ ಮತ್ತು ಮೊಹ್ಸಿನ್ ವಯಸ್ಸಿನಲ್ಲಿ 10 ವರ್ಷಗಳ ವ್ಯತ್ಯಾಸವಿದೆ. ಈ ವರ್ಷದ ಫೆಬ್ರವರಿಯಲ್ಲಿ ಊರ್ಮಿಳಾ 50 ನೇ ವರ್ಷಕ್ಕೆ ಕಾಲಿಟ್ಟರೆ, ಮೊಹ್ಸಿನ್ ಅವರಿಗೆ 40 ವರ್ಷ.

ಊರ್ಮಿಳಾ ಮಾತೋಂಡ್ಕರ್ ಅವರ ಪತಿ ಮೊಹ್ಸಿನ್ ಅಖ್ತರ್ ಮಿರ್ ಯಾರು?
ಮೊಹ್ಸಿನ್ ಅಖ್ತರ್ ಮಿರ್, ಕಾಶ್ಮೀರಿ ಮಾಡೆಲ್. 21 ನೇ ವಯಸ್ಸಿನಲ್ಲಿ ನಟನಾಗಲು ಮುಂಬೈಗೆ ಬಂದರು. 2007 ರಲ್ಲಿ ಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಟ್ರೋಫಿಯನ್ನು ಗೆದ್ದಿದ್ದರು. ಇಟ್ಸ್ ಎ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. 2009 ರಲ್ಲಿ, ಅವರು ಮ್ಯಾನ್ಸ್‌ವರ್ಲ್ಡ್ ಮತ್ತು ನಂತರ ಲಕ್ ಬೈ ಚಾನ್ಸ್, ಮುಂಬೈ ಮಸ್ತ್ ಕ್ಯಾಲೆಂಡರ್ ಮತ್ತು ಬಿ.ಎ. ಪ್ರಾಜೆಕ್ಟ್ ಗಳಲ್ಲೂ ಕೆಲಸ ಮಾಡಿದ್ದಾರೆ.

ಊರ್ಮಿಳಾ ಮಾತೋಂಡ್ಕರ್ ಮತ್ತು ಮೊಹ್ಸಿನ್ ಅಖ್ತರ್ ನಡುವೆ 10 ವರ್ಷಗಳ ವಯಸ್ಸಿನ ವ್ಯತ್ಯಾಸವಿದೆ. ಊರ್ಮಿಳಾ 4 ಫೆಬ್ರವರಿ 1974 ರಂದು ಜನಿಸಿದರೆ, ಮೊಹ್ಸಿನ್ 1984 ರಲ್ಲಿ ಜನಿಸಿದರು. ಇವರಿಬ್ಬರು 2014 ರಲ್ಲಿ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಸೋದರ ಸೊಸೆ ರಿದ್ಧಿ ಮಲ್ಹೋತ್ರಾ ಅವರ ವಿವಾಹದಲ್ಲಿ ಊರ್ಮಿಳಾ ಮತ್ತು ಮೊಹ್ಸಿನ್ ಮೊದಲ ಬಾರಿಗೆ ಪರಸ್ಪರ ಭೇಟಿಯಾಗಿದ್ದು, ನಂತರ ಪರಸ್ಪರ ಪರಿಚಯ, ಪ್ರೀತಿಗೆ ತಿರುಗಿ ಎರಡು ವರ್ಷಗಳ ನಂತರ, 3 ಮಾರ್ಚ್ 2016 ರಂದು, ಅವರು ತಮ್ಮ ಕುಟುಂಬಗಳು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಟಿಯ ಮುಂಬೈ ನಿವಾಸದಲ್ಲಿ ವಿವಾಹವಾಗಿದ್ದರು.

Leave A Reply

Your email address will not be published.