Tirupati Laddu: ದನದ ಕೊಬ್ಬು ಬೆರಕೆ ಆರೋಪದ ಬಳಿಕವೂ ತಿರುಪತಿಯಲ್ಲಿ ಮಾರಾಟವಾದ ಲಡ್ಡುಗಳೆಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ

Tirupati Laddu: ತಿರುಪತಿ ಲಡ್ಡು ವಿವಾದ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ದನದ ಕೊಬ್ಬು, ಮೀನಿನ ಎಣ್ಣೆ ಬಳಸಿ ಲಾಡು ತಯಾರಿಸಲಾಗಿದೆ ಎಂಬ ವಿಚಾರ ಕೇಳಿ ಇಡೀ ಭಕ್ತ ಸಮೂಹವೇ ಅಘಾತಕ್ಕೊಳಗಾಗಿದೆ. ಈ ವಿವಾದವು ಲಡ್ಡು ಮಾರಾಟದ ಮೇಲೆ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಈ ವಿವಾದದ ಶುರುವಾದ 5 ದಿನಗಳಿಂದ ತಿರುಪತಿಯಲ್ಲಿ ಮಾರಾಟವಾದ ಲಡ್ಡುಗಳೆಷ್ಟು ಗೊತ್ತಾದ್ರೆ ಶಾಕ್ ಆಗ್ತೀರಾ!!

ಹೌದು, ತಿರುಪತಿ ಲಡ್ಡು(Tirupati Laddu) ವಿವಾದವು ಅದರ ಮಾರಾಟದ ಮೇಲೆ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಜನರು, ಭಕ್ತಾದಿಗಳೂ ಕೂಡ ಈ ಬಗ್ಗೆ ನಿರೀಕ್ಷೆಮಾಡಿದ್ದರು. ಆದರೆ ಎಲ್ಲರ ನಿರೀಕ್ಷೆಗೆ ವಿರುದ್ಧವಾಗಿ ಲಡ್ಡುಗಳು ಭರ್ಜರಿ ಮಾರಾಟವಾಗುತ್ತಿವೆ.

5 ದಿನಗಳಲ್ಲಿ ಮಾರಾಟವಾದ ಲಡ್ಡುಗಳು :
ಸೆಪ್ಟೆಂಬರ್ 19 ರಂದು 3.59 ಲಕ್ಷ ಲಡ್ಡುಗಳು, 20 ರಂದು 3.17 ಲಕ್ಷ ಲಡ್ಡುಗಳು, 21 ರಂದು 3.67 ಲಕ್ಷ, 22 ರಂದು 3.60 ಲಕ್ಷ, 23 ರಂದು 3.60 ಲಕ್ಷ ಲಡ್ಡುಗಳು ಮಾರಾಟವಾಗಿವೆ. ಅಂದರೆ ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಲಡ್ಡುಗಳು ಮಾರಾಟವಾಗುತ್ತಿವೆ. ಕಳೆದ 5 ದಿನಗಳಲ್ಲಿ ಸುಮಾರು 16 ಲಕ್ಷ ಲಡ್ಡುಗಳು ಮಾರಾಟವಾಗಿವೆ. ಅಲ್ಲದೆ, ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಲಡ್ಡುಗಳನ್ನು ತಯಾರಿಸಲಾಗುತ್ತಿದೆ.

ಅಂದಹಾಗೆ ಈ ಆರೋಪ, ವಿವಾದದ ಬೆನ್ನಲ್ಲೇ ದೇವಸ್ಥಾನದಲ್ಲಿ ಲಡ್ಡು ತಯಾರಿಸುವ ಅಡುಗೆ ಮನೆಯನ್ನು ಶುದ್ಧೀಕರಿಸುವ ಸಲುವಾಗಿ ಮತ್ತು ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡುವ ಸಲುವಾಗಿ ದೇವಸ್ಥಾನ ಮಂಡಳಿಯು ಮಹಾಶಾಂತಿ ಯಾಗ ಸೇರಿದಂತೆ ಹಲವಾರು ಯಾಗಗಳನ್ನು ನಡೆಸಿದೆ. ಅಲ್ಲದೆ, ಗೋಮೂತ್ರವನ್ನು ಸಿಂಪಡಿಸಿ, ಧೂಪ ಸಹ ಹಾಕಲಾಗಿದೆ.

2 Comments
  1. Josephvek says
  2. BlakeJAh says

    visit this site right here bread wallet

Leave A Reply

Your email address will not be published.