of your HTML document.

Haj: ಹಜ್‌ ಯಾತ್ರೆಯ ನೆಪದಲ್ಲಿ ಭಿಕ್ಷುಕರನ್ನು ಕಳುಹಿಸಬೇಡಿ, ಪಾಕ್‌ಗೆ ಸೌದಿ ಅರೇಬಿಯಾ ಎಚ್ಚರಿಕೆ

Haj: ರಿಯಾದ್‌: ಹಜ್‌ (Hajj) ನೆಪದಲ್ಲಿ ಪಾಕಿಸ್ತಾನದಿಂದ (Pakistan) ಗಲ್ಫ್‌ ರಾಷ್ಟ್ರಗಳಿಗೆ ಬರುತ್ತಿರುವ ಭಿಕ್ಷುಕರ ಸಂಖ್ಯೆ ಕಂಡು ಸೌದಿ ಅರೇಬಿಯಾ (Saudi Arabia) ಗಾಬರಿಗೊಂಡಿದ್ದು, ಪಾಕ್ ಗೆ ಎಚ್ಚರಿಕೆ ನೀಡಿದೆ.

ಪಾಕಿಸ್ತಾನದಿಂದ ಧಾರ್ಮಿಕ ಯಾತ್ರೆಗೆ ನೀಡಲಾಗುವ ಉಮ್ರಾ ವೀಸಾದಡಿ (Umrah Visa) ಸೌದಿ ಅರೇಬಿಯಾಗೆ ಪ್ರವೇಶ ಕೊಡುತ್ತಿರುವ ಭಿಕ್ಷುಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪಾಕಿಸ್ತಾನಕ್ಕೆ ಅದು ನೇರ ಎಚ್ಚರಿಕೆ ನೀಡಿದೆ.

ಈ ಎಚ್ಚರಿಕೆ ಬೆನ್ನಲ್ಲೇ ಉಮ್ರಾ ಕಾಯ್ದೆ ಜಾರಿಗೆ ಪಾಕ್ ಸರ್ಕಾರ ಮುಂದಾಗಿದೆ. ಯಾತ್ರೆ ಆಯೋಜಿಸುವ ಏಜೆಂಟರನ್ನು ನಿರ್ಬಂಧಿಸಲು ಪಾಕ್ ಸಿದ್ಧತೆ ನಡೆಸಿದೆ. ವಿದೇಶಗಳಲ್ಲಿರುವ ಭಿಕ್ಷುಕರಲ್ಲಿ 90% ಮಂದಿ ಪಾಕಿಸ್ತಾನದವರೇ ಆಗಿದ್ದಾರೆ ಅನ್ನೋದು ಪಾಕ್ ವಿದೇಶಾಂಗ ಇಲಾಖೆ ಅಧಿಕಾರಿಗಳ ಹೇಳಿಕೆ

ಪಾಕ್ ಗೆ ಎಚ್ಚರಿಕೆ ನೀಡಿದ ಸೌದಿ ರಾಯಭಾರಿ ನವಾಫ್ ಬಿನ್ ಸೈದ್ ಅಹ್ಮದ್ ಅಲ್-ಮಲ್ಕಿ ಅವರನ್ನು ಭೇಟಿಯಾಗಿದ್ದ ಪಾಕ್ ಸಚಿವ ಮೊಹ್ಸಿನ್ ನಖ್ವಿ ಅವರು ಸೌದಿ ಅರೇಬಿಯಾಕ್ಕೆ ಭಿಕ್ಷುಕರನ್ನು ಕಳುಹಿಸುವ ಮಾಫಿಯಾ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಸೌದಿಯಲ್ಲಿ ಪಾಕಿಸ್ತಾನಿ ಭಿಕ್ಷುಕರು ತೀರ್ಥಯಾತ್ರೆ ನೆಪದಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಪ್ರಯಾಣಿಸುತ್ತಾರೆ. ಹೆಚ್ಚಿನ ಜನ ಉಮ್ರಾ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿ, ನಂತರ ಭಿಕ್ಷಾಟನೆಯಲ್ಲಿ ತೊಡಗುತ್ತಾರೆ ಎಂದು ಸಾಗರೋತ್ತರ ಪಾಕಿಸ್ತಾನಿಗಳ ಕಾರ್ಯದರ್ಶಿ ಜೀಶಾನ್ ಖಂಜಾದಾ ಕಳೆದ ವರ್ಷ ಹೇಳಿದ್ದರು. ಇತ್ತೀಚೆಗೆ 11 ವ್ಯಕ್ತಿಗಳನ್ನು ಈ ಸಂಬಂಧ ಕರಾಚಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಸೌದಿಗೆ ಭಿಕ್ಷೆ ಬೇಡಲು ತೆರಳುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಸೌದಿ ವಿಮಾನದಿಂದಲೇ ಅವರನ್ನು ಹೊರ ಹಾಕಲಾಗಿತ್ತು.

Leave A Reply

Your email address will not be published.