Glass bridge: ಕೊಡಗಿನಲ್ಲಿ ತಲೆ ಎತ್ತಿರುವ ಗ್ಲಾಸ್ ಬ್ರಿಡ್ಜ್ಗಳು ಬಂದ್?! ಯಾಕೆ ಎತ್ತ ಇಲ್ಲಿದೆ ನೋಡಿ
Glass bridge: ಪ್ರವಾಸಿ ತಾಣವೆಂದೆ ಹೆಸರು ವಾಸಿಯಾಗಿರುವ ಕೊಡಗು ಜಿಲ್ಲೆಯಲ್ಲಿರುವ ಗ್ಲಾಸ್ ಬ್ರಿಡ್ಜ್ಗಳನ್ನು (Glass bridge) ಬಂದ್ ಮಾಡಿಸುವಂತೆ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ಮುಂದಾಗಿದ್ದು, ಒಂದು ಕಡೆ ಪ್ರವಾಸಿಗರಿಗೆ ನಿರಾಸೆ ಆಗಲಿದ್ದು, ಇನ್ನೊಂದು ಕಡೆ ಕೊಟ್ಯಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿರುವ ಗ್ಲಾಸ್ ಬ್ರಿಡ್ಜ್ ಮಾಲೀಕರಿಗೆ ಆತಂಕ ಕಾಡಿದೆ.
ಹೌದು, ಕಳೆದ ಕೆಲವು ತಿಂಗಳಿನಿಂದ ಕೊಡಗು ಜಿಲ್ಲೆಯ ಪ್ರವಾಸೋಧ್ಯಮ ಹವಾ ಜೋರಾಗಿಯೇ ಇದೆ. ಮಲೆನಾಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಇದೀಗ ಅವುಗಳ ಸಾಲಿಗೆ ಸೇರಿರುವುದು ಗ್ಲಾಸ್ ಬ್ರಿಡ್ಜ್ಗಳು. ಈ ಗ್ಲಾಸ್ ಬ್ರಿಡ್ಜ್ಗಳು ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆದಿವೆ.
ಈಗಾಗಲೇ ಈ ವರ್ಷ ಜೂನ್ ಮತ್ತು ಜುಲೈ ತಿಂಗಳಲ್ಲಿ ಭಾರೀ ಮಳೆ ಬಂದ ಸಂದರ್ಭದಲ್ಲಿ ಹಲವು ಕಡೆ ಲಘು ಭೂ ಕುಸಿತಗಳು ಸಂಭವಿಸಿದ ಕಾರಣ ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟ ರಾಜಾ ಗ್ಲಾಸ್ ಬ್ರಿಡ್ಜ್ಗಳನ್ನು ಮುಚ್ಚುವಂತೆ ಆದೇಶಿಸಿದ್ದರು. ಅದರಂತೆ ಜಿಲ್ಲೆಯ ಎರಡು ಗ್ಲಾಸ್ ಬ್ರಿಡ್ಜ್ಗಳು ಬಂದ್ ಆಗಿದ್ದವು. ಮುಂದಿನ ಆದೇಶದವರೆಗೆ ಗ್ಲಾಸ್ ಬ್ರಿಡ್ಜ್ಗಳನ್ನು ತೆರೆಯದಂತೆ ಸೂಚಿಸಿದ್ದರು.
ಇದೀಗ, ಈ ಎರಡು ಗ್ಲಾಸ್ ಬ್ರಿಡ್ಜ್ಗಳು ಹಾಗೂ ತಲಕಾವೇರಿ ಮತ್ತು ಭಾಗಮಂಡಲ ಬಳಿಯ ಗ್ಲಾಸ್ ಬ್ರಿಡ್ಜ್ಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಧೋಳ್ಪಾಡಿ ಯಶ್ವಂತ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಅದಲ್ಲದೆ ಕೆಲವು ಇದಕ್ಕೆ ಪರಿಸರವಾದಿಗಳಿಂದಲೂ ಬೆಂಬಲ ವ್ಯಕ್ತವಾಗಿದೆ.
ಅದಲ್ಲದೆ ಮಡಿಕೇರಿ-ಭಾಗಮಂಡಲ ರಸ್ತೆಯಲ್ಲಿ ವಿಪರೀತ ಟ್ರಾಫಿಕ ಜಾಮ್ ಆಗಿದೆ. ಅದಲ್ಲದೆ ಈ ಪರಿಣಾಮದಿಂದ ಅಪಘಾತಗಳಾಗುತ್ತಿವೆ. ಮುಖ್ಯವಾಗಿ ಈ ಪ್ರದೇಶ 2018ರಲ್ಲಿ ಭೂ ಕುಸಿತಕ್ಕೆ ತುತ್ತಾಗಿದ್ದು, ಇಲ್ಲಿ ಗ್ಲಾಸ್ ಬ್ರಿಡ್ಜ್ ಬೇಡವೇ ಬೇಡ ಎಂದು ದುರುದಾರರು ಒತ್ತಾಯಿಸಿದ್ದಾರೆ. ಇಲ್ಲಿನ ವಾತಾವರಣ ಗ್ಲಾಸ್ ಬ್ರಿಡ್ಜ್ನ್ನು ತಡೆಯುವಷ್ಟು ಸಶಕ್ತವಾಗಿಲ್ಲ ಎನ್ನಲಾಗುತ್ತಿದೆ. ಈ ಎಲ್ಲಾ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು, ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಮುಂದಿನ ಆದೇಶದವರೆಗೆ ಗ್ಲಾಸ್ ಬ್ರಿಡ್ಜ್ಗಳ ಪ್ರವೇಶ ನಿರ್ಬಂಧಿಸಿರುವುದಾಗಿ ಹೇಳಿದ್ದಾರೆ.