Woman: ಕೇವಲ ನಿದ್ದೆ ಮಾಡಿ 9 ಲಕ್ಷ ರೂ. ಗೆದ್ದಿರುವ ಬೆಂಗಳೂರಿನ ಮಹಿಳೆ! ಏನಿದು ಹೊಸ ಕೆಲಸ?

Woman: ಕೇವಲ ನಿದ್ದೆ ಮಾಡಿ 9 ಲಕ್ಷ ರೂ. ವನ್ನು ಬೆಂಗಳೂರಿನ ಮಹಿಳೆ (Woman) ಗೆದ್ದಿದ್ದಾಳೆ. ಎಂದಾದರು ಮಲಗಿದ್ದಕ್ಕಾಗಿ ಬಹುಮಾನವನ್ನು ಗೆಲ್ಲುವ ಬಗ್ಗೆ ಎಂದಾದರೂ ಕೇಳಿದ್ದೀರಾ? ಅದೂ ಕೂಡ ನಿದ್ರೆ ಮಾಡಿದ್ದಕ್ಕೆ ಲಕ್ಷಗಟ್ಟಲೆ ಹಣ ಕೊಡುತ್ತಾರೆ ಅಂದ್ರೆ ನೀವು ನಂಬುತ್ತೀರಾ? ಹೌದು, ನೀವು ಈ ವಿಷಯ ನಂಬಲೇ ಬೇಕು. ಏನಿದು ಹೊಸ ಕೆಲಸ ಇಲ್ಲಿದೆ ಪೂರ್ಣ ಮಾಹಿತಿ.

 

ಮಾಹಿತಿ ಪ್ರಕಾರ, ವೇಕ್‌ಫಿಟ್ ಕಂಪನಿಯಲ್ಲಿ “ಸ್ಲೀಪ್ ಇಂಟರ್ನ್‌ಶಿಪ್” ಒಂದನ್ನು ಆಯೋಜಿಸಲಾಗಿದ್ದು, ಇದರಲ್ಲಿ ಬೆಂಗಳೂರಿನ ಸಾಯಿಶ್ವರಿ ಪಾಟೀಲ್ ‘ಸ್ಲೀಪ್ ಚಾಂಪಿಯನ್’ ಭಾಗವಹಿಸಿದ್ದು, ಇದೀಗ ಈಕೆ ಪ್ರಶಸ್ತಿಯ ಜೊತೆಗೆ 9 ಲಕ್ಷ ರೂಪಾಯಿ ಬಹುಮಾನ ಗೆದ್ದು ಭಾರೀ ಸುದ್ದಿಯಲ್ಲಿದ್ದಾರೆ.

ಮುಖ್ಯವಾಗಿ ಕಾರ್ಯಕ್ರಮದ ಇತರ 12 ಸ್ಲೀಪ್ ಇಂಟರ್ನ್‌ಗಳಲ್ಲಿ ಸಾಯಿಶ್ವರಿ ಪಾಟೀಲ್ ಕೂಡ ಒಬ್ಬರಾಗಿದ್ದರು. ಈ ಕಾರ್ಯಕ್ರಮಕ್ಕೆ ಪ್ರತಿಯೊಬ್ಬ ವ್ಯಕ್ತಿಯು ಪ್ರತಿ ರಾತ್ರಿ ಎಂಟರಿಂದ ಒಂಬತ್ತು ಗಂಟೆಗಳ ಕಾಲ ಸಂಪೂರ್ಣವಾಗಿ ನಿದ್ರೆ ಮಾಡಬೇಕಾಗಿತ್ತು.

ಒಟ್ಟಿನಲ್ಲಿ ವೇಕ್‌ಫಿಟ್ ಕಂಪೆನಿಯಲ್ಲಿ “ಸ್ಲೀಪ್ ಇಂಟರ್ನ್‌ಶಿಪ್” ಇದು 60 ದಿನಗಳ ಸ್ಲೀಪ್ ಇಂಟರ್ನ್‌ಶಿಪ್ ಆಗಿದ್ದು, ಇಲ್ಲಿ ಬೇರೇನೂ ಕೆಲಸ ಇಲ್ಲ. 9 ಗಂಟೆಗಳ ಕಾಲ ನಿದ್ರೆ ಮಾಡಬೇಕಾಗುತ್ತದೆ ಅಷ್ಟೇ. ಅಂತೆಯೇ ಬೆಂಗಳೂರಿನ ಸಾಯಿಶ್ವರಿ ಪಾಟೀಲ್ ಏನು ಕೆಲಸ ಮಾಡದೇ, ಇಷ್ಟು ದೊಡ್ಡ ಬಹುಮಾನ ಗೆದ್ದಿದ್ದಾರೆ ಎಂದರೆ ಅದು ಕೂಡಾ ಸ್ವಲ್ಪ ವಿಚಿತ್ರವೇ ಸರಿ.

Leave A Reply

Your email address will not be published.