Nithin Ghadkari: ‘ನಾವು 4ನೇ ಬಾರಿ ಅಧಿಕಾರಕ್ಕೆ ಬರುವುದು ಡೌಟ್..’ ಎಂದ ನಿತಿನ್ ಗಡ್ಕರಿ – ಈಗಲೇ ಮೋದಿ ಕುರಿತು ಭವಿಷ್ಯ ನುಡಿದೇಬಿಟ್ರಾಕೇಂದ್ರ ಮಂತ್ರಿ?

Nithin Ghadkari: ಹ್ಯಾಟ್ರಿಕ್ ಭಾರಿಸುವುದಾಗಿ ಭೀಗುತ್ತಿದದ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಮುಗ್ಗರಿಸಿದೆ. ‘ಈ ಚುನಾವಣೆಯಲ್ಲಿಯೇ ಮೋದಿ ಮನೆಗೆ ಹೋಗಬೇಕಿತ್ತು. ಆದರೆ ಅದೃಷ್ಟ ಚೆನ್ನಾಗಿದ್ದು, ಜನ ಒಂದು ಅವಕಾಶ ಕೊಟ್ಟು, ಜೊತೆಗೆ ಮೈತ್ರಿ ಪಕ್ಷಗಳು ಕೈ ಹಿಡಿದಿವೆ. ಮುಂದಿನ ಸಲ ಸೋಲು ಕಚಿತ’ ಎಂದು ಜನ ಮಾತನಾಡುತ್ತಿರೋದನ್ನು ನಾವು ಕೇಳಿದ್ದೇವೆ. ಈ ನಡುವೆಯೆ ಕೇಂದ್ರ ಸಚಿವ ನಿತಿನ್ ಗಡ್ಕರಿ(Nithin Ghadkari) ಅಚ್ಚರಿ ಸ್ಟೇಟ್ಮೆಂಟ್ ನೀಡಿದ್ದು, 4 ನೇ ಅವಧಿಗೆ ನಾವು ಅಂದರೆ ಬಿಜೆಪಿ ಅಧಿಕಾರಕ್ಕೆ ಬರುವುದು ಡೌಟ್ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.

 

ಹೌದು, ನಾಗ್ಪುರದಲ್ಲಿ(Nagpura) ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಗಡ್ಕರಿ ಸರ್ಕಾರ ಯಾವುದೇ ಇದ್ದರೂ ಅದರೊಂದಿಗೆ ಮೈತ್ರಿ ಮಾಡಿಕೊಳ್ಳುವುದೂ ಒಂದು ಕಲೆ, ಹಲವು ರಾಜಕಾರಣಿಗಳಿಗೆ ಈ ಕಲೆ ಸಹಜವಾಗಿಯೇ ಬಂದಿರುತ್ತದೆ. ಈ ಪೈಕಿ ಮಹಾರಾಷ್ಟ್ರದ ರಾಮದಾಸ್ ಅಠಾವಳೆ ಸಹ ಒಬ್ಬರು. ರಾಮ್ ದಾಸ್ ಅಠಾವಳೆ(Ramdas Athavale) ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅದೇನೆಂದರೆ, ನಮ್ಮ 4ನೇ ಅವಧಿಯ ಆಡಳಿತಕ್ಕೆ ಯಾವುದೇ ಗ್ಯಾರೆಂಟಿ ಇಲ್ಲದೇ ಇರಬಹುದು ಆದರೆ ರಾಮ್ ದಾಸ್ ಅಠಾವಳೆ ಕೇಂದ್ರ ಸಚಿವರಾಗುವುದು ಮಾತ್ರ ಗ್ಯಾರೆಂಟಿ ಎಂದು ಹೇಳಿದ್ದಾರೆ.

ಅಂದಹಾಗೆ ನಿತಿನ್ ಗಡ್ಕರಿ ಅವರು ತಮ್ಮ ನಿಷ್ಠುರ ಹೇಳಿಕೆಗಳಿಗೆ ಪ್ರಸಿದ್ಧರಾಗಿದ್ದಾರೆ. ಅದೇ ರೀತಿ ಭಾನುವಾರ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು ಆಡಿದ ಮಾತುಗಳು ಅಲ್ಲಿದ್ದವರನ್ನ ನಗೆಗಡಲಲ್ಲಿ ತೇಲುವಂತೆ ಮಾಡಿದೆ. ಅಲ್ಲದೆ ಬಳಿಕ ಗಡ್ಕರಿ ಅವರು ತಮ್ಮ ಹೇಳಿಕೆಯನ್ನು ತಮಾಷೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಜನರು ಸತ್ಯವನ್ನೇ ಹೇಳಿದ್ದೀರಿ ಬಿಡಿ ಎಂದಿದ್ದಾರೆ.

ಇದೇ ವೇಳೆ, ನವೆಂಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಮಹಾಮೈತ್ರಿಕೂಟದ ಭಾಗವಾಗಿರುವ ತಮ್ಮ ಪಕ್ಷ ಆರ್‌ಪಿಐ (ಎ) ಕನಿಷ್ಠ 10ರಿಂದ 12 ಸ್ಥಾನಗಳಲ್ಲಿ ಸ್ಪರ್ಧಿಸುವ ಅವಕಾಶ ಪಡೆಯಬೇಕು ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ಹೇಳಿದ್ದಾರೆ.

Leave A Reply

Your email address will not be published.