MUDA Scam: ಹೈಕೋರ್ಟ್ ತೀರ್ಪು: ದೆಹಲಿಗೆ ದೌಡಾಯಿಸುತ್ತಿರುವ ಸಿಎಂ ಕಾನೂನು ತಂಡ: ಎಫ್ಐಆರ್ ದಾಖಲು ತಡೆಯಬಹುದೇ?

MUDA Case: ಸಿಎಂ ಸಿದ್ದಾರಮಯ್ಯ(CM Siddaramayiah) ಸಲ್ಲಿಸಿದ್ದ ರಿಟ್‌ ಅರ್ಜಿ ವಜಾಗೊಳಿಸಿ ರಾಜ್ಯಪಾಲರ(Governor) ಪ್ರಾಸಿಕ್ಯೂಷನ್‌ ಆದೇಶವನ್ನು ಹೈಕೋರ್ಟ್‌ (High Court)ಎತ್ತಿಹಿಡಿದ ಬೆನ್ನಲ್ಲೇ ಸಿಎಂ ಪರ ವಕೀಲರ(Lawyers) ಕಾನೂನು ತಂಡ(Legal team) ದೆಹಲಿಗೆ(Delhi) ತೆರಳಲಿದೆ. ಹೈಕೋರ್ಟ್ ಆದೇಶವನ್ನು ಪಡೆದು ವಕೀಲರ ತಂಡ ದೆಹಲಿಗೆ ಪ್ರಯಾಣ ಬೆಳೆಸಲಿದೆ.

ದೆಹಲಿಯಲ್ಲಿ ಚರ್ಚೆ ನಡೆಸಿ ಹೈಕೋರ್ಟ್ ಆದೇಶ ತಡೆ ಕೋರಲು ಚರ್ಚೆ ನಡೆಸಲಾಗುತ್ತದೆ. ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ, ಪ್ರೊ. ರವಿ ವರ್ಮ ಕುಮಾರ್ ಸೇರಿ ವಕೀಲರ ತಂಡ ದೆಹಲಿಗೆ ದೌಡಾಯಿಸಲಿದೆ. ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಗೆ ವಕೀಲರ ತಂಡ ತಯಾರಿ ಮಾಡಲಿದೆ.

ನಾಳೆ ಜನಪ್ರತಿನಿಧಿ ನ್ಯಾಯಾಲಯದಲ್ಲಿ ತೀರ್ಪು ಬಾಕಿ ಇದೆ. ನಾಳೆ ತನಿಖೆ ನಡೆಸಲು ಆದೇಶ ಪ್ರಕಟವಾದರೆ ಎಫ್‌ಐಅರ್ ದಾಖಲಿಸಬೇಕಾಗುತ್ತೆ. ಹೀಗಾಗಿ ಸುಪ್ರೀಂ ಕೋರ್ಟ್ ನಲ್ಲಿ ಹೈಕೋರ್ಟ್ ಆದೇಶಕ್ಕೆ ತಡೆ ಕೋರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Leave A Reply

Your email address will not be published.