ಕಪ್ಪು ಚುಕ್ಕೆಯಿಂದ ಬೆತ್ತಲಾದ ʼವೈಟ್ನರ್ ರಾಮಯ್ಯʼ- ಸಿಎಂ ರಾಜೀನಾಮೆಗೆ ಜೆಡಿಎಸ್ ಒತ್ತಾಯ

JDS: ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಜೆಡಿಎಸ್ ರಾಜ್ಯ ಘಟಕವು ಪೋಸ್ಟ್ ಹಂಚಿಕೊಂಡಿದ್ದು, “ಮುಡಾದಲ್ಲಿ ಹಗರಣ ನಡೆದೇ ಇಲ್ಲ, ನನ್ನ ಮೇಲೆ ಕಪ್ಪು ಚುಕ್ಕೆ ಇಲ್ಲ ಎಂದಿದ್ದ ಸಿದ್ದರಾಮಯ್ಯ ಅವರೇ ಒಂದು ಕ್ಷಣವೂ ನೀವು ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಉಳಿಸಿಲ್ಲ. ಸಿಎಂ ಸ್ಥಾನಕ್ಕೆ ಗೌರವ ಕೊಟ್ಟು, ಗೌರವ ಉಳಿಸಿಕೊಳ್ಳಿ” ಎಂದು ಜೆಡಿಎಸ್ ಆಗ್ರಹ ಮಾಡಿದೆ.
ಅಧಿಕಾರ ದುರ್ಬಳಕೆ, ಸ್ವಜನಪಕ್ಷಪಾತ ಎಸಗಿ ಮೂಡಾದ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಸಿಎಂ ಸಿದ್ದರಾಮಯ್ಯ ನಡೆಸಿದ್ದ ಕುತಂತ್ರಗಳಿಗೆ ಹೈಕೋರ್ಟ್ ಆದೇಶ ಕಪಾಳಮೋಕ್ಷ ಮಾಡಿದೆ. ಮೂಡಾ ಹಗರಣದ ವಿರುದ್ಧ ಎನ್‌ಡಿಎ ಮೈತ್ರಿ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ಪಕ್ಷ ನಡೆಸಿದ್ದ ಮೈಸೂರು ಚಲೋ ಹೋರಾಟಕ್ಕೆ ಜಯ ಸಿಕ್ಕಿದೆ.
"ಕಪ್ಪು ಚುಕ್ಕೆ"ಯಿಂದ ಬೆತ್ತಲಾದ "ವೈಟ್ನರ್ ರಾಮಯ್ಯ"
ಮುಡಾದಲ್ಲಿ ಹಗರಣ ನಡೆದೇ ಇಲ್ಲ, ನನ್ನ ಮೇಲೆ ಕಪ್ಪು ಚುಕ್ಕು ಇಲ್ಲ ಎಂದು ಸ್ವಯಂ ಸರ್ಟಿಫಿಕೇಟ್ ಪಡೆದಿದ್ದ ಸಿದ್ದರಾಮಯ್ಯ ಅವರೇ, ನಿಮಗೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯುವ ಯಾವ ನೈತಿಕತೆ ಉಳಿದಿಲ್ಲ…
ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಗೌರವ ಉಳಿಸಿಕೊಳ್ಳಿ…… pic.twitter.com/fnfkArFVSo
— Janata Dal Secular (@JanataDal_S) September 24, 2024