Ghee Purity Test: ನೀವು ಬಳಸುವ ತುಪ್ಪ ಅಸಲಿಯೋ, ನಕಲಿಯೋ? ಹೀಗೆ ಪತ್ತೆ ಹಚ್ಚಿ

Ghee Purity Test: ಈಗಾಗಲೇ ಪ್ರಸಿದ್ಧ ದೇವಸ್ಥಾನ ತಿರುಪತಿಯಲ್ಲಿ ಲಡ್ಡು ಪ್ರಸಾದದಲ್ಲಿ ಇತರ ಪ್ರಾಣಿಯ ಕೊಬ್ಬು ಮಿಶ್ರಣ ಮಾಡಿರುವ ವಿಚಾರ ಬಯಲಿಗೆ ಬಂದ ನಂತರ ತುಪ್ಪ ಬಳಸುವ ಮುನ್ನ ಸಾವಿರ ಬಾರಿ ಯೋಚಿಸುವಂತೆ ಆಗಿದೆ.

 

ಅದರಲ್ಲೂ ಇತ್ತೀಚಿಗೆ ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳು ಎಷ್ಟೋ ವಸ್ತುಗಳು ಕಲಬೆರಕೆಯಿಂದ ಕೂಡಿದ ಆಹಾರಗಳಾಗಿರುತ್ತವೆ. ಮುಖ್ಯವಾಗಿ ಮಾರುಕಟ್ಟೆಯಿಂದ ತರುವ ತುಪ್ಪವು ನಿಜವಾಗಿಯೂ ಅಸಲಿಯೋ, ನಕಲಿಯೋ ಎಂದು ಸುಲಭವಾಗಿ ಪತ್ತೆ ಹಚ್ಚಬಹುದು.
ಘಮಘಮಿಸುವ ತುಪ್ಪಕ್ಕೆ ವೆಜಿಟೆಬಲ್‌ ಆಯಿಲ್, ಪ್ರಾಣಿಗಳ ಕೊಬ್ಬು, ಖನಿಜಗಳ ಕೊಬ್ಬು ಸೇರಿದಂತೆ ಇನ್ನಿತ್ತರ ಕಲಬೆರಕೆ ವಸ್ತುಗಳನ್ನು ಸೇರಿಸಲಾಗುತ್ತದೆ. ಹೀಗಾಗಿ ಇತ್ತೀಚೆಗಿನ ದಿನಗಳಲ್ಲಿ ಶುದ್ಧ ತುಪ್ಪ ಯಾವುದು ನಕಲಿ ತುಪ್ಪ ಯಾವುದೆಂದು ಪತ್ತೆ ಹಚ್ಚುವುದು ಕಷ್ಟಕರವಾಗಿದೆ. ಆದ್ದರಿಂದ ಮಾರುಕಟ್ಟೆಯಲ್ಲಿ ತಂದ ತುಪ್ಪವು ಶುದ್ಧವಾಗಿದೆಯೇ ಎಂದು ಈ ಕೆಲವು ವಿಧಾನದ ಮೂಲಕ ನೀವು ಪತ್ತೆ ಹಚ್ಚಬಹುದು.
ಅದಕ್ಕಾಗಿ ಒಂದು ಚಮಚ ತುಪ್ಪವನ್ನು ನಿಮ್ಮ ಅಂಗೈಯಲ್ಲಿ ತೆಗೆದುಕೊಂಡು ಹದವಾಗಿ ಉಜ್ಜಿಕೊಳ್ಳಬೇಕು. ತುಪ್ಪ ಅಂಗೈಯಲ್ಲಿ ಕರಗಿದರೆ ಅದು ಶುದ್ಧ ತುಪ್ಪವಾಗಿದೆ ಎಂದರ್ಥ. ಒಂದು ವೇಳೆ ಅಂಗೈಯಲ್ಲಿ ಕರಗದೇ ಗಟ್ಟಿ ಗಟ್ಟಿ ವಸ್ತು ಹಾಗೆಯೇ ಉಳಿದಿದೆ ಎಂದರೆ ಅದರಲ್ಲಿ ಕಲಬೆರಕೆಯ ವಸ್ತುಯಿದೆ ಎಂದು ತಿಳಿಯಿರಿ. ಅದೇ ರೀತಿ ಕೈಗೆ ಸ್ವಲ್ಪ ತುಪ್ಪವನ್ನು ಹಾಕಿ ಎರಡೂ ಕೈಗಳಿಂದ ಚೆನ್ನಾಗಿ ಉಜ್ಜಿಕೊಳ್ಳಿ. ಪರಿಮಳಯುಕ್ತವಾಗಿದ್ದರೆ ಅದು ಶುದ್ಧ ತುಪ್ಪ, ಸ್ವಲ್ಪ ಸಮಯದ ನಂತರ ತುಪ್ಪದ ವಾಸನೆಯು ಹೋದರೆ ಕಲಬೆರಕೆಯ ತುಪ್ಪವಾಗಿರುತ್ತದೆ.
ಇನ್ನು ತುಪ್ಪಕ್ಕೆ ಎಣ್ಣೆಯನ್ನು ಕಲಬೆರಕೆ ಮಾಡಲಾಗುತ್ತದೆ. ಈ ತುಪ್ಪದಲ್ಲಿ ಎಣ್ಣೆಯನ್ನು ಬೆರೆಸಲಾಗಿದೆಯೇ ಎಂದು ತಿಳಿಯಲು ತುಪ್ಪವನ್ನು ಕಾಯಿಸಿ ಅದನ್ನು ಫ್ರಿಡ್ಜ್‌ನಲ್ಲಿಟ್ಟರೆ ಎರಡು ಪದರಗಳು ಕಾಣಿಸಿಕೊಳ್ಳುತ್ತದೆ. ತುಪ್ಪ ಹಾಗೂ ಎಣ್ಣೆ ಯ ಪ್ರತ್ಯೇಕವಾದ ಪದರಗಳು ಇದ್ದರೆ ಕಲಬೆರಕೆಯಾಗಿದೆ ಎಂದರ್ಥ.
ಅಥವಾ ಸ್ವಲ್ಪ ಪ್ರಮಾಣದಲ್ಲಿ ತುಪ್ಪವನ್ನು ತೆಗೆದುಕೊಂಡು ಒಂದು ಪಾರದರ್ಶಕವಾದ ಬಾಟಲಿಗೆ ಹಾಕಿ, ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಬೇಕು. ನಂತರದಲ್ಲಿ ಆ ಬಾಟಲಿಯ ಮುಚ್ಚಳ ಮುಚ್ಚಿ ಚೆನ್ನಾಗಿ ಕುಲುಕಬೇಕು. ಸ್ವಲ್ಪ ಹೊತ್ತು ಬಿಟ್ಟು ನೋಡಿದಾಗ ಕೆಂಪು ಬಣ್ಣದ ಗೆರೆಗಳು ಬಾಟಲಿಯ ತಳದಲ್ಲಿ ಕಂಡು ಬಂದರೆ ಈ ತುಪ್ಪವು ಶುದ್ಧವಾಗಿಲ್ಲ ಎಂದರ್ಥ.
ಇನ್ನು ಮಾರುಕಟ್ಟೆಯಿಂದ ತಂದ ತುಪ್ಪದಲ್ಲಿ ಕಲಬೆರಕೆಯನ್ನು ಗುರುತಿಸಲು ಅದಕ್ಕೆ ನಾಲ್ಕೈದು ಹನಿ ಅಯೋಡಿನ್ ಸೇರಿಸಬೇಕು. ಒಂದು ವೇಳೆ ತುಪ್ಪವು ನೀಲಿ ಬಣ್ಣಕ್ಕೆ ತಿರುಗಿದರೆ ಕಲಬೆರಕೆಯಾಗಿದೆ ಎಂದರ್ಥ.
ಇನ್ನು ತುಪ್ಪ ಬಿಸಿ ಮಾಡಿದಾಗ ಎಣ್ಣೆಯಂತೆ ಕಾಣುತ್ತದೆ. ಅದಲ್ಲದೆ ಮೇಲ್ಮೈಯಲ್ಲಿ ವ್ಯತ್ಯಾಸವಾಗಿ ಅದು ಹೊಂಬಣ್ಣದಲ್ಲಿ ಕರಗಿದರೆ ಕಲಬೆರಕೆಯಾಗಿಲ್ಲ. ಒಂದು ವೇಳೆ ತಿಳಿ ಹಳದಿ, ಬಿಳಿ ಬಣ್ಣದಲ್ಲಿದ್ದರೆ ಅದು ನಕಲಿ ತುಪ್ಪವೆಂದು ಖಚಿತವಾಗುತ್ತದೆ. ಅದರಲ್ಲೂ ಕಲಬೆರಕೆಯ ತುಪ್ಪವು ನೋಡಲು ದಪ್ಪವಾಗಿರುತ್ತದೆ.

4 Comments
  1. mpoyou says

    Slot online dengan sensasional terbaru bersama mpoyou. Link slot gacor malam ini saat ini paling menyala abangku.Rasakan konsep slot maxwin disini.

  2. أنابيب النحاس says

    أنابيب ABS في العراق تعد شركة إيليت بايب في العراق من الرواد في إنتاج أنابيب الـ ABS، التي تُقدّر لقوتها وصلابتها ومقاومتها للصدمات والمواد الكيميائية. تم تصنيع أنابيب الـ ABS لدينا وفقًا لأعلى المعايير، مما يضمن موثوقية وأداءً طويل الأمد في تطبيقات متنوعة. باعتبارها واحدة من أفضل وأكثر شركات تصنيع الأنابيب موثوقية في العراق، تلتزم شركة إيليت بايب بتقديم منتجات تلبي احتياجات عملائنا. لمزيد من المعلومات المفصلة حول أنابيب الـ ABS الخاصة بنا، تفضل بزيارة elitepipeiraq.com.

  3. أنابيب النحاس-النيكل في العراق يوفر مصنع إيليت بايب أنابيب النحاس-النيكل التي تشتهر بمقاومتها الممتازة للتآكل ومتانتها، مما يجعلها مثالية للتطبيقات البحرية والصناعية. تم تصميم هذه الأنابيب بدقة لتلبية المتطلبات العالية لمختلف الصناعات. كأحد أكثر المصانع موثوقية في العراق، يضمن مصنع إيليت بايب أن أنابيب النحاس-النيكل لدينا تقدم أداءً فائقًا وعمرًا طويلاً. لمزيد من التفاصيل، قم بزيارة elitepipeiraq.com.

  4. أنابيب النحاس says

    أنابيب الخرسانة المسلحة في العراق يوفر مصنع إيليت بايب أنابيب الخرسانة المسلحة المثالية لتحمل الأحمال العالية والظروف القاسية في مشاريع البنية التحتية. تم بناء هذه الأنابيب باستخدام تقنيات التعزيز المتقدمة لضمان المتانة والاعتمادية. كأحد أفضل المصانع في العراق، يضمن مصنع إيليت بايب أن أنابيب الخرسانة المسلحة الخاصة بنا تلتزم بجميع المعايير اللازمة وتوفر أداءً استثنائيًا. لمزيد من المعلومات، قم بزيارة elitepipeiraq.com.

Leave A Reply

Your email address will not be published.