Health: ಇಂತಹ ಆರೋಗ್ಯ ಸಮಸ್ಯೆ ಇದ್ದವರಿಗೆ ಈ ಹಸಿರು ತರಕಾರಿ ವಿಷವಾಗುತ್ತೆ ಎಚ್ಚರ!

Health: ಕೆಲವು ಆರೋಗ್ಯ (Health)ಸಮಸ್ಯೆ ಇದ್ದವರಿಗೆ ಈ ಹಸಿರು ತರಕಾರಿ ವಿಷವಾಗುತ್ತೆ ಅನ್ನೋದು ನಿಮಗೆ ಗೊತ್ತಿದೆಯಾ. ಹೌದು, ಸಾಮಾನ್ಯವಾಗಿ ಲೇಡಿ ಫಿಂಗರ್ (Ladyfingers) ಅಥವಾ ಬೆಂಡೆಕಾಯಿಯನ್ನು ಆರೋಗ್ಯಕರ ತರಕಾರಿ ಆಗಿದೆ. ಹಾಗಂತ ಇದನ್ನು ಕೆಲವು ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ತಿನ್ನಲೇ ಬಾರದು.

ಬೆಂಡೆಕಾಯಿ ಆರೋಗ್ಯಕಾರಿ ತರಕಾರಿ ಇದು ವಿವಿಧ ನ್ಯೂಟ್ರಿಯೆಂಟ್ಸ್‌ಗಳನ್ನು ಹೊಂದಿದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ತೂಕ ಇಳಿಕೆಗೂ ಸಹಕಾರಿ. ಜೊತೆಗೆ ಇದು ಒಕ್ರಾ ಲೆಕ್ಟಿನ್ ಎಂಬ ಪ್ರೊಟೀನ್ ಅನ್ನು ಹೊಂದಿದೆ. ಆದ್ರೆ ಇದು ಕೆಲವರಿಗೆ ಅಲರ್ಜಿ ಉಂಟು ಮಾಡಬಹುದು. ಹಾಗೆಯೇ ಈ ಬೆಂಡೆಕಾಯಿ ಹೆಚ್ಚಿನ ಪ್ರಮಾಣದ ಫೈಬರ್ ಅಂಶವನ್ನು ಹೊಂದಿದೆ. ಇದು ಕೆಲವರ ಹೊಟ್ಟೆಯಲ್ಲಿ ಗ್ಯಾಸ್ ಉತ್ಪಾದನೆ ಹಾಗೂ ಹೊಟ್ಟೆಯುಬ್ಬುವಿಕೆಗೆ ಕಾರಣವಾಗಬಹುದು. ಆದ್ದರಿಂದ ಈ ಕೆಳಗಿನ ಸಮಸ್ಯೆ ಇರುವವರು ಬೆಂಡೆಕಾಯಿ ತಿನ್ನಬಾರದು.

ಮುಖ್ಯವಾಗಿ, ಅಲರ್ಜಿ ಹೊಂದಿರುವವರು ಬೆಂಡೆಕಾಯಿ ತಿನ್ನಬಾರದು, ಒಂದು ವೇಳೆ ನೀವು ತಿಂದಿದ್ದೇ ಆದಲ್ಲಿ, ತುರಿಕೆ,ದದ್ದು, ಉಬ್ಬರ , ಉಸಿರಾಟಕ್ಕೆ ಕಷ್ಟವಾಗುವುದು, ಹೊಟ್ಟೆನೋವು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಇನ್ನು ಜೀರ್ಣಕ್ರಿಯೆಯ ಸಮಸ್ಯೆ, ಹೊಟ್ಟೆ ಉಬ್ಬರ ಹೊಂದಿರುವವರು, ಬೆಂಡೆಕಾಯಿ ತಿನ್ನಬೇಡಿ, ಇದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗುವುದು.

ಬೆಂಡೆಕಾಯಿ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಸಕ್ಕರೆ ಕಾಯಿಲೆ ಹೊಂದಿದ್ದು, ಅದಕ್ಕಾಗಿ ಮಾತ್ರೆ ತೆಗೆದುಕೊಳ್ಳುವವರಾಗಿದ್ದರೆ, ಬೆಂಡೆಕಾಯಿ ತಿನ್ನಬೇಡಿ.

ಜೊತೆಗೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರೆ, ಕಫದ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರರು ತಪ್ಪಿಯೂ ಬೆಂಡೆಕಾಯಿಯನ್ನು ತಿನ್ನಬಾರದು. ಈ ಬೆಂಡೆಕಾಯಿಯ ಒಳಗಿರುವ ಕಾಳಿನಂತಹ ಅಂಶಗಳು ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಹೊಂದಿರುವವರ ಕಷ್ಟವನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ. ಹಾಗೆಯೇ ಈ ಬೆಂಡೆಕಾಯಿಯಲ್ಲಿರುವ ಲೋಳೆಯಂತಹ ಅಂಶವೂ ಕಫದ ಸಮಸ್ಯೆಯನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ.

ಇನ್ನು ಗರ್ಭಿಣಿಯರು ಹಾಗೂ ಮಗುವಿಗೆ ಎದೆಹಾಲು ಕುಡಿಸುವವರು ಕೂಡ ಬೆಂಡೆಕಾಯಿ ತಿನ್ನುವುದು ಉತ್ತಮವಲ್ಲ.

Leave A Reply

Your email address will not be published.