Drithi Punith Rajkumar: ‘ಪ್ಲೀಸ್‌ ಮೇಡಂ, ನಮ್‌ ಬಾಸ್‌ ಮರ್ಯಾದೆ ತೆಗೀಬೇಡಿ’ – ಪುನೀತ್‌ ರಾಜ್‌ಕುಮಾರ್‌ ಹಿರಿ ಮಗಳಿನ್ನು ಬೇಡಿದ ಫ್ಯಾನ್ಸ್‌, ಕಾರಣ ಏನು?

Drithi Punith Rajkumar: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿದ್ದರೂ ಭಾವನಾತ್ಮಕವಾಗಿ ಅವರು ಎಂದೆದಿಗೂ ಕನ್ನಡಿಗರ ಜನಮಾನಸದಲ್ಲಿ ಇರುತ್ತಾರೆ. ಅವರಿಗಿದ್ದ ಕ್ರೇಜ್ ಎಂದೂ ಕಡಿಮೆಯಾಗದು. ಇಂದು ಅಭಿಮಾನಿಗಳು ಪುನೀತ್ ಕುಟುಂಬವನ್ನೂ ಕೂಡ ಅಷ್ಟೇ ಪ್ರೀತಿ, ಗೌರವಗಳಿಂದ ಕಾಣುತ್ತಾರೆ. ಇದು ಎಲ್ಲರಿಗೂ ತಿಳಿದಿದೆ. ಆದರೆ ಇದೀಗ ಈ ಬೆನ್ನಲ್ಲೇ ಅಪ್ಪು ಅಭಿಮಾನಿಗಳು ಅವರ ಹಿರಿ ಮಗಳು ಧೃತಿಗೆ ದಯವಿಟ್ಟು ನಮ್ಮ ಬಾಸ್ ಮರ್ಯಾದೆ ತೆಗೀಬೇಡಿ ಎಂದು ಅಂಗಲಾಚಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ.

 

ಎಲ್ಲರಿಗೂ ತಿಳಿದಂತೆ ಪುನೀತ್‌ ರಾಜ್‌ಕುಮಾರ್‌ ಅವರ ಇಬ್ಬರು ಮಕ್ಕಳಾದ ಧೃತಿ(Drithi Punith Rajkumar) ಮತ್ತು ವಂದನಾ, ಅಪ್ಪ ದೊಡ್ಡ ಸ್ಟಾರ್‌ ಆಗಿದ್ದರೂ, ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದುದ್ದು ತೀರಾ ಅಪರೂಪ. ಪುನೀತ್‌ ರಾಜ್‌ಕುಮಾರ್‌ ನಿಧನದ ಬಳಿಕವಂತೂ ಧೃತಿ ಮತ್ತು ವಂದಿತಾ, ವಿದ್ಯಾಭ್ಯಾಸದಲ್ಲಿಯೇ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಇದ್ದರೂ, ಸಕ್ರಿಯರಿರುವುದು ತೀರಾ ಕಡಿಮೆ. ಆಗೊಂದು ಈಗೊಂದು ಪೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ ಧೃತಿ. ಇದೀಗ ಧೃತಿ ಶೇರ್‌ ಮಾಡಿರುವ ಎರಡು ಫೋಟೋಗಳಿಗೆ ಅಪ್ಪು ಫ್ಯಾನ್ಸ್‌ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಮೆಚ್ಚುಗೆ ಸೂಚಿಸಿದಂತೆ ಹಲವು ಅಭಿಮಾನಿಗಳು ಅಷ್ಟೇ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.

ಹೌದು, ನ್ಯೂಯಾರ್ಕ್ ನಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿರುವ ಧೃತಿ ಸೋಷಿಯಲ್‌ ಮೀಡಿಯಾದಲ್ಲಿ ಆಗೊಂದು ಈಗೊಂದು ಫೋಟೋ ಶೇರ್‌ ಮಾಡುತ್ತಿರುತ್ತಾರೆ. ಇದೀಗ ಸೆಲ್ಫಿ ಪೋಸ್‌ ನೀಡಿದ ಭಂಗಿಯಲ್ಲಿ ಎರಡು ಫೋಟೋಗಳನ್ನು ಶೇರ್‌ ಮಾಡುತ್ತಿದ್ದಂತೆ, ನೆಟ್ಟಿಗ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾದರೆ, ಇನ್ನು ಕೆಲವರು ದಯವಿಟ್ಟು ಫೋಟೋ ಡಿಲಿಟ್‌ ಮಾಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ ತುಂಡು ಉಡುಗೆಯಲ್ಲಿ ಸೆಲ್ಫಿ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಧೃತಿ ಶೇರ್‌ ಮಾಡಿದ್ದಾರೆ. ಅದಕ್ಕೆ ಸಾಕಷ್ಟು ಮಂದಿ ಬಗೆಬಗೆ ರೀತಿಯ ಕಾಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಫೋಟೋಗೆ ಬಹುತೇಕರು, ಪುನೀತ್‌ ಅವರನ್ನೇ ನೋಡಿದ ಹಾಗಾಯ್ತು ಎಂದು ಕಾಮೆಂಟ್‌ ಮಾಡಿದರೆ, ನಾವು ಅಪ್ಪು sir ನಾ ನಿಮ್ಮಲ್ಲಿ ಕಾಣುತ್ತಿದ್ದೇವೆ, ಅವರನ್ನು ಅವರಿಚ್ಛೇಯಂತೆ ಇರಲು ಬಿಡಿ, ಲವ್‌ಲೀ ಸಿಸ್ಟರ್‌.. ಲುಕ್ಕಿಂಗ್‌ ಬ್ಯೂಟಿಫುಲ್‌ ಎಂದೆಲ್ಲಾ ಕಮೆಂಟಿಸಿದ್ದಾರೆ. ಇನ್ನು ಕೆಲವರು, ದಯವಿಟ್ಟು ಇಂಥ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಾಕಬೇಡಿ ಮೇಡಂ ಎಂದು ಬೇಡಿಕೊಂಡಿದ್ದಾರೆ.

 

View this post on Instagram

 

A post shared by Drithi (@drithirajkumar)

ಕೆಲವರು ಪೋಸ್ಟ್‌ನ ಡಿಲಿಟ್‌ ಮಾಡಿ, ನಾನು ನಿಮ್ಮಪ್ಪನ ಫ್ಯಾನ್‌ ಎಂದರೆ, ಇನ್ನು ಕೆಲವು ನೆಟ್ಟಿಗರು, ಮೇಡಂ ಫೋಟೋ ಆ ಥರ ಹಾಕ್ಬೇಡಿ, ಮೇಡಂ ನೀವು ನಮ್ ಬಾಸ್ ಮಗಳು ಮೇಡಮ್, ಇಡೀ ಸ್ಟೇಟ್ ಅಲ್ಲಿ ಒಂದು ಬೆಲೆ ಇದೆ ಮೇಡಂ ಪ್ಲೀಸ್ ಮೇಡಂ ಪ್ಲೀಸ್ ಫೋಟೋನ ಡಿಲೀಟ್ ಮಾಡಿ ಮೇಡಂ. ನಮ್ ಬಾಸ್ ಗೆ ಹೇಗೆ ಗೌರವ ಕೊಡ್ತೀವೋ, ನಾವು ಹಾಗೆ ನಿಮಗೂ ನಿಮ್ಮ ಫ್ಯಾಮಿಲಿಗೂ ಅಷ್ಟೇ ಗೌರವ ಇದೆ ಮೇಡಂ ಎಂದು ಅಂಗಲಾಚಿದ್ದಾರೆ.

Leave A Reply

Your email address will not be published.