Channapattana By Election: ದೋಸ್ತಿಗಳ ಪೈಕಿ BJP ಪಾಲಾದ ಚನ್ನಪಟ್ಟಣ – ಇವರೇ ನೋಡಿ ಅಭ್ಯರ್ಥಿ !!

Share the Article

Channapattana By Election: ರಾಜ್ಯದಲ್ಲಿ ಉಪ ಚುನಾವಣೆಗಳ ಕಾವು ಜೋರಾಗಿದೆ. ಆದರೆ ಎಲ್ಲಾ ಪಕ್ಷಗಳಿಗೆ ಅಭ್ಯರ್ಥಿಗಳ ಆಯ್ಕೆಯೇ ಕಗ್ಗಂಟಾಗಿದೆ. ಅದರಲ್ಲೂ ಚನ್ನಪಟ್ಟಣ ಕ್ಷೇತ್ರವಂತೂ ಮೈತ್ರಿ ದೋಸ್ತಿಗಳಿಗೆ ಇದು ದೊಡ್ಡ ತಲೆನೋವಾಗಿದೆ. ಆದರೂ ಈ ನಡುವೆಯೇ ಚನ್ನಪಟ್ಟಣಕ್ಕೆ ಬಿಜೆಪಿ ಅಭ್ಯರ್ಥಿಯ ಹೆಸರು ಫೈನಲ್ ಆಗಿದ್ದು, ಅದನ್ನು ಹೈಕಮಾಂಡ್ ಅಂಗಳಕ್ಕೆ ಕಳುಹಿಸಲು ತಯಾರಿ ನಬೆದಿದೆ ಎನ್ನಲಾಗಿದೆ.

ಹೌದು, ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣ ಕ್ಷೇತ್ರಕ್ಕೆ ಬಿಜೆಪಿಯೇ ಅಭ್ಯರ್ಥಿಯನ್ನು ಇಳಿಸಲಿದೆ. ಜೆಡಿಎಸ್, ಬಿಜೆಪಿ ತೆಕ್ಕೆಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ ಎನ್ನಲಾಗಿದೆ. ಆ ಅಭ್ಯರ್ಥಿ ಒಬ್ಬರ ಹೆಸರೀಗ ಹೈಕಮಾಂಡ್ ಕೈ ಸೇರಲಿದೆ. ಆ ಅಭ್ಯರ್ಥಿ ಬೇರೆ ಯಾರು ಅಲ್ಲ, ಸಿಪಿ ಯೋಗೇಶ್ವರ್(CP Yogishwar)!!

ಯಸ್, ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ(Channapattana By Election) ಸಿಪಿ ಯೋಗೀಶ್ವರ್ ಅವರ ಹೆಸರು ಮಾತ್ರ ಪ್ರಸ್ತಾಪವಾಗಿದೆ. ಭಾರೀ ಪೈಪೋಟಿ ನಡುವೆ ಯೋಗೇಶ್ವರ್ ಟಿಕೆಟ್ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ ಎನ್ನಲಾಗಿದೆ. ಇದೀಗ ಅವರ ಹೆಸರನ್ನು ಕೇಂದ್ರ ಸಚಿವರಾದ ಹೆಚ್‌ಡಿ ಕುಮಾರಸ್ವಾಮಿ ಅವರ ಜೊತೆ ಚರ್ಚಿಸಿ ಅಂತಿಮವಾಗಿ ಹೈಕಮಾಂಡ್ ಗಮನಕ್ಕೆ ತರುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Leave A Reply