CC Camera: ಯುವತಿಯ ವಾಶ್‌ರೂಮ್‌ನಲ್ಲಿ ಕ್ಯಾಮೆರಾ ಇಟ್ಟ ಯುವಕ, ಪಕ್ಕದ ಮನೆಯವರಿಗೆ ಕೀ ಕೊಟ್ಟು ಹೋಗುವ ಮುನ್ನ ಹುಷಾರ್ !
CC Camera: ಬಾಡಿಗೆ ಮನೆಯಲ್ಲಿ(Rent Room) ವಾಸವಾಗಿದ್ದ ಒಂಟಿ ಮಹಿಳೆಯ(Single lAdy) ಮಲಗುವ ಕೋಣೆ(Bed room) ಹಾಗೂ ಬಾತ್ ರೂಮ್‌ನಲ್ಲಿ(Bath Room) ರಹಸ್ಯ ಕ್ಯಾಮರ(CC Camera) ಇಟ್ಟ ಘಟನೆ ಬೆಳಕಿಗೆ ಬಂದಿದೆ. ಪೂರ್ವ ದೆಹಲಿಯ(Delhi) ಶಕರ್‌ಪುರ ಪ್ರದೇಶದಲ್ಲಿ ಇದ್ದ ಬಾಡಿಗೆ ಮನೆಯಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಮನೆಯಲ್ಲಿ ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಯುವತಿ ಹೊರಗೆ ಹೋಗುವಾಗ ಅವರೆ ಮನೆಯ ಕೀಯನ್ನು ಓನರ್ ಮಗ ಕರಣ್ ಕೈಯಲ್ಲಿ ಕೊಟ್ಟು ಹೋಗುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊoಡ ಕಿರಾತಕ ಅವರ ರೂಮ್ನಲ್ಲಿ ಸಿಸಿ ಕ್ಯಾಮರಾವನ್ನು ಬಲ್ಬ್‌ನ ಹೋಲ್ಡರ್‌ನಲ್ಲಿ ಅಳವಡಿಸಿ ಇಟ್ಟಿದ್ದಾನೆ. ಯುವತಿಯ ವಾಟ್ಸಾಪ್‌ನಲ್ಲಿ ಕೆಲವು ಅಶ್ಲೀಲ ಮಾಹಿತಿಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಯುವತಿ ಪೊಲೀಸ್ ಉಪ ಕಮಿಷನರ್ (ಪೂರ್ವ) ಅಪೂರ್ವ ಗುಪ್ತಾ ಅವರಿ ಮಾಹಿತಿ ನೀಡಿದ್ದರು. ನಂತರ ದೂರಿನ ಅನ್ವಯ ಪೊಲೀಸ್ ತಂಡವು ಸಂಪೂರ್ಣ ಹುಡುಕಾಟ ನಡೆಸಿದಾಗ, ಯುವತಿ ಮಲಗುವ ಕೋಣೆಯ ಬಲ್ಬ್ ಹೋಲ್ಡರ್‌ನಲ್ಲಿ ಹಾಗೂ ಬಾತ್ ರೂಮ್ನಲ್ಲಿ ಅಳವಡಿಸಲಾದ ಕ್ಯಾಮೆರಾವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ವಿಚಾರಣೆ ವೇಳೆ ಕರಣ್ ಈ ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ. ಆರೋಪಿ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಮೂರು ಸ್ಪೈ ಕ್ಯಾಮೆರಾಗಳನ್ನು ಖರೀದಿಸಿ, ಅವುಗಳಲ್ಲಿ ಒಂದನ್ನು ಯುವತಿಯ ಮಲಗುವ ಕೋಣೆಯಲ್ಲಿ ಮತ್ತು ಇನ್ನೊಂದನ್ನು ತನ್ನ ಬಾತ್ರೂಮ್‌ನಲ್ಲಿ ಇಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕರಣ್ ಕೈಯಲ್ಲಿದ್ದ ಮತ್ತೊಂದು ಸ್ಪೈ ಕ್ಯಾಮೆರಾವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಜೊತೆಗೆ ರೆಕಾರ್ಡ್ ಮಾಡಿದ ವೀಡಿಯೊಗಳ ಸಂಗ್ರಹಕ್ಕೆ ಬಳಸಿದ ಎರಡು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಿಎನ್‌ಎಸ್‌ನ ಸೆಕ್ಷನ್ 77 ಅಡಿಯಲ್ಲಿ ಶಕರ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರಣ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕರಣ್ ಪದವೀಧರರಾಗಿದ್ದು, ಕಳೆದ ಏಳು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.
Great Article bro, https://smpn4pengasih.sch.id/views/blog/ daftar sekarang
أنابيب LDPE في العراق تقدم شركة إيليت بايب في العراق مجموعة شاملة من أنابيب الـ LDPE، التي تُقدّر لمرونتها وخفتها ومقاومتها لمجموعة متنوعة من المواد الكيميائية. تم تصميم أنابيب الـ LDPE لدينا لتلبية معايير الجودة العالية، مما يضمن أداءً موثوقًا عبر تطبيقات متنوعة. باعتبارها واحدة من أفضل وأكثر شركات تصنيع الأنابيب موثوقية في العراق، تلتزم شركة إيليت بايب بتقديم منتجات تجمع بين المتانة والأداء. لمزيد من المعلومات حول أنابيب الـ LDPE الخاصة بنا، تفضل بزيارة elitepipeiraq.com.