Delhi: ಹುಡುಗಿಯರನ್ನು ಪ್ರೆಗ್ನೆಂಟ್ ಮಾಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಕಂಪೆನಿ, ಆದ್ರೆ ಇಲ್ಲಿದೆ ಒಂದು ಟ್ವಿಸ್ಟ್ !!

Delhi: ಶ್ರೀಮಂತ ಕುಟುಂಬದ ಹೆಣ್ಣುಮಕ್ಕಳನ್ನು ಗರ್ಭಿಣಿಯನ್ನಾಗಿ ಮಾಡಿದರೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತೊಂದು ವೈರಲ್ ಆಗಿದೆ. ಆದರೆ ಇದರ ಹಿಂದಿನ ಅಸಲಿ ಸತ್ಯವೇ ಬೇರೆ ಇರೋದು ತಿಳಿದ ಬಂದಿದೆ.

ದೆಹಲಿಯ(Delhi) ಪ್ರಯಾಗ್‌ರಾಜ್‌ನ ಮೌಯಿಮಾದ ಬಕ್ರಾಬಾದ್ ಪ್ರದೇಶದಿಂದ ವಿಚಿತ್ರ ಮತ್ತು ಅಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಹೆಣ್ಣುಮಕ್ಕಳನ್ನು ಗರ್ಭಿಣಿಯನ್ನಾಗಿ ಮಾಡಿದರೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಹೇಳಿ ಹುಡುಗರನ್ನು ಯಾಮಾರಿಸಿ ಹಣ ದೋಚುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಹೌದು, ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಜಾಹೀರಾತು ನೋಡಿದ ಅಲ್ತಾಫ್ ಎಂಬ ಯುವಕ ಆ ಜಾಹಿರಾತಿನಲ್ಲಿ ಕೊಟ್ಟಿದ್ದ ನಂಬರ್ ಗೆ ಕರೆ ಮಾಡಿದ್ದ. ಮಾತು ಕತೆ ವೇಳೆ ಅವರಿಗೆ ನೋಂದಣಿ ಶುಲ್ಕವಾಗಿ 800 ರೂ.ಗಳನ್ನು ಕಳುಹಿಸಬೇಕೆಂದು ಹೇಳಿದ್ದಾರೆ. ಹಣದ ಆಸೆಗೆ ಬಿದ್ದ ಈತ ಹಣ ಕಳಹಿಸಿದ್ದಾನೆ. ಬಳಿಕ ಆ ವಂಚಕರು 24 ಸಾವಿರ ರೂ. ನೀಡಲು ಕೇಳಿದ್ದಾರೆ. ಈಗಲೂ ಆ ಯುವಕ ಸ್ವಲ್ಪವೂ ಯೋಚಿಸದೆ ಹಣ ವರ್ಗಾವಣೆ ಮಾಡಿದ್ದಾನೆ.

ಅಲ್ತಾಫ್ ಹಣ ಕಳುಹಿಸಿದ ತಕ್ಷಣ ಎಚ್ಚೆತ್ತ ಸೈಬರ್ ದರೋಡೆಕೋರರು ಮತ್ತೆ ಅವನನ್ನು ಸಂಪರ್ಕಿಸಿ ಇನ್ನೂ 3 ಲಕ್ಷ ರೂ. ಕೇಳಿದ್ದಾರೆ. ಆಗ ತಾನು ವಂಚನೆಗೆ ಬಲಿಯಾಗಿದ್ದೇನೆ ಎಂದು ಯುವಕನಿಗೆ ಅರ್ಥವಾಗಿದೆ. ಆ ಹಣ ನೀಡಲು ಆತ ನಿರಾಕರಿಸಿದಾಗ, ಪುಂಡರು ಅವರ ಮೇಲೆ ಪೊಲೀಸ್ ಅಧಿಕಾರಿಗಳ ಪ್ರೊಫೈಲ್ ಫೋಟೋಗಳನ್ನು ಹಾಕಿ ತಾವು ಪೋಲೀಸರು, ನಿನ್ನ ಮೇಲೆ ಮೊಕದ್ದಮೆ ಹೂಡಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನಂತರ ಬುದ್ಧಿ ಉಪಯೋಗಿಸಿದ ಅಲ್ತಾಫ್ ಸೈಬರ್ ಕ್ರೈಂ ಸೆಲ್‌ಗೆ ವಿಷಯ ತಿಳಿಸಿದ್ದಾನೆ.

ಒಟ್ಟಿನಲ್ಲಿ ಈ ಪ್ರಕರಣ ನೋಡಿದರೆ ವಂಚಕರು ಹೊಸ ರೀತಿಯಲ್ಲಿ ಜನರನ್ನು ದರೋಡೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಅಲ್ಲದೆ ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣಗಳ ಗಂಭೀರತೆಯನ್ನು ಈ ಪ್ರಕರಣ ತೋರಿಸುತ್ತದೆ. ಹೀಗಾಗಿ ಯುವಕರು ತುಂಬಾ ಜಾಗರೂಕರಾಗಿರುವುದು ಉತ್ತಮ.

ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಈ ವಿಚಾರ ತಿಳಿಯಲೆಂದೇ ಆಕರ್ಷಕ ತಲೆಬರಹದೊಂದಿಗೆ ಈ ಮಾಹಿತಿ ತಿಳಿಸಿದ್ದೇವೆ. ಕೇವಲ ವಿಡಿಯೋ, ಫೋಟೋ ಇಟ್ಟಕೊಂಡೇ ವಂಚಕರು ಜನರನ್ನು ವಂಚಿಸುವುದಿಲ್ಲ. ಹೊಸ ಹೊಸ ದುರಾಲೋಚನೆಯಿಂದಲೂ ಜನರನ್ನು ಬಲೆಗೆ ಬೀಳಿಸುತ್ತಾರೆ. ಸದಾ ಎಚ್ಚರದಿಂದ ಇರವುದು ಒಳಿತು.

Leave A Reply

Your email address will not be published.