K S Eshwarappa: ನಾನು ಸತ್ತರೂ ಬಿಜೆಪಿ ಧ್ವಜವನ್ನು ಮೈಮೇಲೆ ಹಾಕ್ಕೊಂಡು ಸಾಯ್ತಿನಿ – ಈಶ್ವರಪ್ಪ ಉವಾಚ
K S Eshwarappa: ಸತ್ತರೂ ಕೂಡ ಬಿಜೆಪಿ ಧ್ವಜವನ್ನು ಮೈ ಮೇಲೆ ಹಾಕೊಂಡೆ ಸಾಯ್ತಿನಿ. ಬಿಜೆಪಿಯಿಂದ ನಾನು ಹೊರಗಿರೋನಲ್ಲ. ಸಾಯೋ ತನಕ ರಾಜಕಾರಣ ಮಾಡಿಕೊಂಡೆ ಇರುತ್ತೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ(K S Eshwarappa) ಅವರು ಹೇಳಿದ್ದಾರೆ.
ಬಾಗಲಕೋಟೆಯ(Bagalakote) ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra) ನಾಯಕತ್ವ ನಾನು ಒಪ್ಪಿಲ್ಲ. ನಾನು ಸತ್ತರೇ ಬಿಜೆಪಿ(BJP) ಧ್ವಜ ಮೈಮೇಲೆ ಹಾಕಿಕೊಂಡೇ ಸಾಯುವೆ. ರಾಜಕೀಯದಲ್ಲೇ ಇದ್ದು ಸಮಾಜ ಸೇವೆ ಮಾಡಬಹುದಾ? ರಾಜಕೀಯ ಮಾಡುತ್ತಲೇ ಸಮಾಜ ಸೇವೆ ಮಾಡುತ್ತಲೇ ಇರುವೆ ಎಂದರು.
ಅಲ್ಲದೆ ತಮ್ಮ ಮುಂದಿನ ರಾಜಕೀಯ ನಡೆ ಏನು ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನಾನು ರಾಜಕಾರಣ ಮಾಡಿಕೊಂಡೆ ಸಮಾಜ ಸೇವೆ ಮಾಡ್ತೇನೆ. ಸಾಯೋ ತನಕ ರಾಜಕಾರಣ ಮಾಡಿಕೊಂಡೆ ಇರ್ತೇನೆ. ರಾಜಕಾರಣ ಸಮಾಜದ ಒಂದು ಅಂಗ. ಸತ್ತರೂ ಬಿಜೆಪಿ ಧ್ವಜ ಹಾಕೊಂಡೆ ಸಾಯ್ತಿನಿ ವಿನಃ ಬಿಜೆಪಿಯಿಂದ ಹೊರಗಿರಲ್ಲ. ನಂಗೆ ಅಖಿಲೇಶ್ ಯಾದವ್ ಕಾಲ್ ಮಾಡಿದ್ರು, ಕಾಲ್ ಮಾಡಬೇಡಿ ಅಂತಾ ಹೇಳಿದೆ. ಕಾಂಗ್ರೆಸ್ ನಾಯಕರು ನಂಗೆ ಫೋನ್ ಮಾಡಿದ್ರು. ನನ್ನ ಕುತ್ತಿಗೆ ಕೊಯ್ದರೂ ಬಿಜೆಪಿ ಬಿಟ್ಟು ಹೊರಗೆ ಹೋಗಲ್ಲ ಎಂದರು.
ಅಲ್ಲದೆ ಬಿಜೆಪಿಯಲ್ಲಿ ಶುದ್ಧೀಕರಣ ಅಗಬೇಕು ಅನ್ನೋದು ನನ್ನೊಬ್ಬನ ಆಸೆ ಅಲ್ಲ. ನಾನು ಆರಂಭದಿಂದಲೂ ಶುರು ಮಾಡಿದ್ದೇನೆ. ನಂತರ ಬಸವನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿ, ಅರವಿಂದ್ ಲಿಂಬಾವಳಿ ಶುರು ಮಾಡಿದ್ದಾರೆ. ಇವರೆಲ್ಲರು ಸೇರಿ ದೊಡ್ಡ ಸಭೆ ಕರಿಬೇಕು ಅಂತಿದ್ರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕೂಡ ಅಸಮಾಧಾನ ಅತೃಪ್ತಿ ಇದೆ. ಅದು ಶುದ್ಧಿಕರಣ ಆಗಬೇಕು ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹೇಳಿದರು.
ಅಂದಹಾಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದಕ್ಕೆ ಮುನಿಸಿಕೊಂಡು ಬಿಜೆಪಿಯಿಂದ ಹೊರ ನಡೆದು ಬಿಜೆಪಿ ವಿರುದ್ಧ ಪದೇ ಪದೇ ಅಸಮಾಧಾನ ಹೊರ ಹಾಕುತ್ತಿದ್ದ ಮಾಜಿ ಡಿಸಿಎಂ ಕೆ ಎಸ ಈಶ್ವರಪ್ಪ ಇದೀಗ ನಾನು ಸತ್ತರೂ ಕೂಡ ಬಿಜೆಪಿ ಧ್ವಜ ಹಾಕಿಕೊಂಡೇ ಸಾಯ್ತಿನಿ ಎಂದಿರುವುದು ಈಶ್ವರಪ್ಪ ಮತ್ತೆ ಬಿಜೆಪಿ ಸೇರುತ್ತಾರಾ ಎಂಬ ಪ್ರಶ್ನೆಗೆ ಉತ್ತರ ನೀಡಿದಂತಿದೆ