Indian Railway: ರೈಲು ಪ್ರಯಾಣಿಕರು ಈ ವಸ್ತುಗಳನ್ನು ಕೊಂಡು ಹೋದಲ್ಲಿ ಭಾರಿ ದಂಡದ ಜೊತೆ ಜೈಲು ಶಿಕ್ಷೆ ಗ್ಯಾರಂಟಿ!

dian Railway: ದೂರದ ಪ್ರಯಾಣಕ್ಕೆ ರೈಲಿನಲ್ಲಿ ಪ್ರಯಾಣ ಮಾಡುವುದು ಅಭ್ಯಾಸ. ಅಂತೆಯೇ ರೈಲಿನಲ್ಲಿ ಸಾಕಷ್ಟು ಲಗೇಜ್ ತೆಗೆದುಕೊಂಡು ಹೋಗುತ್ತೇವೆ. ಹಾಗಂತ ತಪ್ಪಿಯೂ ಕೆಲವು ವಸ್ತುಗಳನ್ನು ರೈಲಿನಲ್ಲಿ ಸಾಗಿಸಲು ಹೋಗದಿರಿ. ಯಾಕೆಂದರೆ ರೈಲಿನಲ್ಲಿ ಕೆಲವು ವಸ್ತು ಸಾಗಿಸುವುದನ್ನು ಇಂಡಿಯನ್ ರೈಲ್ವೆ (Indian Railway) ಇಲಾಖೆ ನಿಷೇಧಿಸಿದೆ. ಒಂದು ವೇಳೆ ನೀವು ಅವುಗಳನ್ನು ಸಾಗಿಸಿದರೆ ನಿಮಗೆ ಭಾರಿ ದಂಡ ವಿಧಿಸಲಾಗುತ್ತದೆ. ಮತ್ತು ಜೈಲು ಸೇರಬೇಕಾದ ಪರಿಸ್ಥಿತಿ ಬರಬಹುದು.

ರೈಲಿನಲ್ಲಿ ಪ್ರಯಾಣಿಸುವಾಗ ನಮಗೆ ತಿಳಿಯದೆಯೇ ಕೆಲವು ತಪ್ಪುಗಳನ್ನು ಮಾಡುತ್ತೇವೆ. ಆದ್ರೆ ಚೆಕಿಂಗ್ ಅಧಿಕಾರಿಗಳು ಬಂದಾಗ ಮಾತ್ರ ಈ ವಿಷಯ ಬೆಳಕಿಗೆ ಬರುತ್ತವೆ. ಹೌದು, ಪ್ರತಿಯೊಬ್ಬ ಪ್ರಯಾಣಿಕರು ರೈಲ್ವೆ ನಿಗದಿಪಡಿಸಿದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಂತೆಯೇ ರೈಲಿನಲ್ಲಿ ಸ್ಫೋಟಕ ವಸ್ತುಗಳು, ಸುಲಭವಾಗಿ ಸುಡುವ ವಸ್ತುಗಳನ್ನು ಸಾಗಿಸಬಾರದು. ಧೂಮಪಾನ ಮಾಡಬಾರದು. ಇಂತಹ ಅಪಾಯಕಾರಿ ವಸ್ತುಗಳನ್ನು ಸಾಗಿಸುವುದರಿಂದ ಅವುಗಳನ್ನು ಸಾಗಿಸುವ ವ್ಯಕ್ತಿಗೆ ಮಾತ್ರವಲ್ಲದೆ ರೈಲಿನಲ್ಲಿರುವ ಎಲ್ಲರ ಪ್ರಾಣಕ್ಕೂ ಅಪಾಯವಿದೆ. ಒಟ್ಟಿನಲ್ಲಿ ಈ ನಿಯಮಗಳು ಅಪಘಾತಗಳನ್ನು ತಡೆಯಲು ಸಹಾಯ ಮಾಡುತ್ತವೆ. ಅಷ್ಟೇ ಅಲ್ಲದೆ ನಿಮ್ಮ ಜೊತೆ ಪ್ರಯಾಣಿಕರ ಸುರಕ್ಷತೆಗೆ ನೀವು ಸಹಾಯ ಮಾಡಿದಂತಾಗುತ್ತದೆ.

ಇನ್ನು ರೈಲಿನಲ್ಲಿ ಪಟಾಕಿಗಳು, ಅಡುಗೆ ಅನಿಲ ಸಿಲಿಂಡರ್‌ಗಳು, ಬಂದೂಕಿನ ಗುಂಡುಗಳಂತಹ ಸ್ಫೋಟಕ ವಸ್ತುಗಳನ್ನು ಸಾಗಿಸುವವರ ವಿರುದ್ಧ ರೈಲ್ವೆ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತದೆ. ಅದಲ್ಲದೆ ಸೀಮೆಎಣ್ಣೆ, ಪೆಟ್ರೋಲ್‌ನಂತಹ ವಸ್ತುಗಳನ್ನು ಸಾಗಿಸುವುದನ್ನು ನಿಷೇಧಿಸಲಾಗಿದೆ.

ಈ ನಿಯಮಗಳನ್ನು ಪಾಲಿಸದವರಿಗೆ ಶಿಕ್ಷೆಗಳು ತುಂಬಾ ಕಠಿಣವಾಗಿರುತ್ತವೆ. 1989 ರ ರೈಲ್ವೆ ಕಾಯ್ದೆಯ ಸೆಕ್ಷನ್ 164, 165 ರ ಪ್ರಕಾರ ಸ್ಫೋಟಕ ವಸ್ತುಗಳು ಅಥವಾ ಸುಲಭವಾಗಿ ಸುಡುವ ವಸ್ತುಗಳನ್ನು ಸಾಗಿಸುವವರಿಗೆ ರೂ.1000 ವರೆಗೆ ದಂಡ ವಿಧಿಸಲಾಗುತ್ತದೆ. ಅಥವಾ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಕೆಲವೊಮ್ಮೆ ಈ ಎರಡೂ ಶಿಕ್ಷೆಗಳನ್ನು ಅನುಭವಿಸಬೇಕಾಗಬಹುದು.

ಭಾರತೀಯ ರೈಲ್ವೆ ನಿಯಮಗಳ ಪ್ರಕಾರ ಈ ಸುರಕ್ಷತಾ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಸ್ಪಷ್ಟಪಡಿಸಿದೆ. ಇನ್ನು ನೀವು ಯಾವುದೇ ರೀತಿ ಉತ್ತರ ನೀಡಿದರು ಈ ನಿಯಮ ಉಲ್ಲಂಘನೆ ಮಾಡಿದಲ್ಲಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ ಎನ್ನಲಾಗುತ್ತೆ.

Leave A Reply

Your email address will not be published.