Crop Survey: ಇನ್ನೂ ಬೆಳೆ ಸಮೀಕ್ಷೆ ಆಗದ ರೈತರಿಗೆ ಇಂತಹ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ!

Crop Survey: ರೈತರಿಗೆ ಇದು ಬಹಳ ಮುಖ್ಯವಾದ ಮಾಹಿತಿ. ಪ್ರಸ್ತುತ 2024ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ (Crop Survey) ಪ್ರತಿಯೊಬ್ಬ ರೈತರಿಗೂ ಇದೇ ತಿಂಗಳು ಸೆಪ್ಟಂಬರ್‌ 30/09/2024 ರ ವರೆಗೆ ಅವಕಾಶ ನೀಡಲಾಗಿದೆ.

 

ಒಂದು ವೇಳೆ ರೈತರಿಗೆ ಸಮೀಕ್ಷೆ ಮಾಡಲು ಬರದೆ ಇದ್ದಲ್ಲಿ ನೀವು ಕೃಷಿ ಇಲಾಖೆ ಅಥವಾ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡು ಸಮೀಕ್ಷೆ ಮಾಡಬಹುದು. ಅದರ ಹೊರತು ಈಗಾಗಲೇ ಎಲ್ಲಾ ಗ್ರಾಮಗಳಲ್ಲಿ ಕಂದಾಯ ಇಲಾಖೆ, ಕೃಷಿ ಇಲಾಖೆಯ ಮೂಲಕ ಬೆಳೆ ಸಮೀಕ್ಷೆಗಾರರನ್ನು ನೇಮಕ ಮಾಡಲಾಗಿದ್ದು, ಅವರನ್ನು ರೈತರು ಸಂಪರ್ಕಿಸಿ ಮಾಹಿತಿ ಪಡೆದುಕೊಂಡು ಅಥವಾ ಅವರನ್ನು ನಿಮ್ಮ ಜಮೀನಿಗೆ ಕರೆದುಕೊಂಡು ಹೋಗಿ ಬೆಳೆ ಸಮೀಕ್ಷೆ ಮಾಡಿಸಬಹುದು.

ಒಂದು ವೇಳೆ ಬೆಳೆ ಸಮೀಕ್ಷೆ ಮಾಡದೇ ಇದ್ದಲ್ಲಿ ಈ ಕೆಳಗಿನ ಯಾವುದೇ ಸೌಲಭ್ಯ ರೈತರಿಗೆ ದೊರೆಯುವುದಿಲ್ಲ.

1)ಬೆಳೆ ಹಾನಿ ಪರಿಹಾರ ಬರುವುದಿಲ್ಲ.

2)ಬೆಳೆ ವಿಮೆ ಕಟ್ಟಲು ಬರುವುದಿಲ್ಲ.

3)ಕೃಷಿ, ತೋಟಗಾರಿಕೆ ಇಲಾಖೆಯ ಸೌಲಭ್ಯಗಳು ಸಿಗುವುದಿಲ್ಲ.

4)ಸಹಕಾರಿ ಸಂಘದ ಮತ್ತು ರಾಷ್ಟ್ರೀಕೃತ ಬ್ಯಾಂಕಗಳ ಸಾಲ ಸಿಗುವುದಿಲ್ಲ.

5)ಮಳೆ ಹಾನಿ ಪರಿಹಾರ ಸಿಗುವುದಿಲ್ಲ.

6)ಪ್ರವಾಹ ಮತ್ತು ಬರಗಾಲದ ಪರಿಹಾರ ಸಿಗುವುದಿಲ್ಲ.

7)ಪಹಣಿಗೆ/RTC ಬೆಳೆ ದಾಖಲು ಆಗುವುದಿಲ್ಲ.

8)ಕನಿಷ್ಠ ಬೆಂಬಲ ಬೆಲೆ ದರ ಸಿಗುವುದಿಲ್ಲ.

Leave A Reply

Your email address will not be published.